ಇತ್ತೀಚಿನ ಸುದ್ದಿ
ಯುವಕನಿಂದ ಅಶ್ಲೀಲ, ಬೆದರಿಕೆ ಮೆಸೇಜ್ ಗೆ ಭಯಗೊಂಡು ಯುವತಿ ಆತ್ಮಹತ್ಯೆಗೆ ಯತ್ನ; ಆಸ್ಪತ್ರೆಗೆ ದಾಖಲು
26/10/2024, 13:08
ಮಂಗಳೂರು(reporterkarnataka.com): ಸುರತ್ಕಲ್ ಸಮೀಪದ ಮದ್ಯ ಗ್ರಾಮದ ಯುವತಿಯೊಬ್ಬಳು ಯುವಕನೊಬ್ಬನ ಅಶ್ಲೀಲ ಬೆದರಿಕೆ ಸಂದೇಶಗಳಿಗೆ ಭಯಗೊಂಢು ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿದೆ.
ಯುವತಿ ತನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಅಕ್ಟೋಬರ್ 22 ರಂದು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದರು. ಇಡ್ಯಾ ಗ್ರಾಮದ ಶಾರೀಕ್ ಎಂಬಾತನ ಖಾತೆಯಿಂದ ತನ್ನ ಸಹೋದರ ಕಿಶನ್ ಮತ್ತು ಆತನ ಸ್ನೇಹಿತ ಹರ್ಷಿತ್‌ಗೆ ಅಶ್ಲೀಲ ಮತ್ತು ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ದೂರಿದ್ದಳು. ದೂರನ್ನು ಸ್ವೀಕರಿಸಿದ ಸುರತ್ಕಲ್ ಪೊಲೀಸರು ಶಾರಿಕ್‌ನನ್ನು ವಿಚಾರಣೆಗಾಗಿ ಕರೆದಿದ್ದು, ಆತನ ಮೊಬೈಲ್ ಫೋನ್ ಮತ್ತು ಸಾಮಾಜಿಕ ಮಾಧ್ಯಮ ಚಟುವಟಿಕೆಯನ್ನು ಪರಿಶೀಲಿಸಿದ್ದರು.
ಇದೀಗ ಸುರತ್ಕಲ್ ಪೊಲೀಸರು ಆರೋಪಿ ಇಡ್ಯಾ ಗ್ರಾಮದ ಶಾರೀಕ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ,
ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಅದರಲ್ಲಿ ಯಾವುದೇ ಪೂರಕ ಮಾಹಿತಿ ಸಿಕ್ಕಿರಲಿಲ್ಲ. ಅಕ್ಟೋಬರ್ 24 ರಂದು ಯುವತಿಗೆ ಮತ್ತೊಂದು ಬೆದರಿಕೆ ಸಂದೇಶ ಕಳುಹಿಸಿದ್ದು, ಪ್ರಕರಣ ತೀವ್ರ ಸ್ವರೂಪ ಪಡೆದಿದೆ. ಆಕೆಯ ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರಿದೆ. ಶಾರಿಕ್ ಮತ್ತು ಅವನ ತಾಯಿ ನೂರ್ ಜಹಾನ್ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್‌ನೋಟ್ ಬರೆದಿಟ್ಟು ಅಕ್ಟೋಬರ್ 25 ರಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಯನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾರಿಕ್‌ನ ನಿರಂತರ ಕಿರುಕುಳದ ಬಗ್ಗೆ ಯುವತಿಯ ಹೇಳಿಕೆಯ ಮೇರೆಗೆ ಸುರತ್ಕಲ್ ಪೊಲೀಸರು ಮತ್ತೊಂದು ಪ್ರಕರಣವನ್ನು ದಾಖಲಿಸಿ ಶಾರಿಕ್ ನನ್ನು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ.