4:32 PM Monday18 - May 2026
ಬ್ರೇಕಿಂಗ್ ನ್ಯೂಸ್
ಕೊಡಗಿನ ತಮ್ಮ ಕಾಫಿ ಎಸ್ಟೇಟ್‌ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ… ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿಗೆ ಹೆಚ್ಚುವರಿಯಾಗಿ 20 ಕೋಟಿ: ಮಂಗಳೂರಿನಲ್ಲಿ ಸಚಿವ ಖಂಡ್ರೆ ಚಿಕ್ಕಮಗಳೂರು | ದೇವನಗುಲ್ ಕಾಡಿನೊಳಗೆ ಅನಾಥ ಸ್ಥಿತಿಯಲ್ಲಿ ವೃದ್ಧನ ಶವ ಪತ್ತೆ ಬಳ್ಳಾರಿ | ಆಗಸ್ಟ್ 2ರಂದು ‘ಸ್ಟೀಲ್ ಸಿಟಿ ರನ್ 2026’ 5ನೇ ಆವೃತ್ತಿ:… ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ…

ಇತ್ತೀಚಿನ ಸುದ್ದಿ

‘ಏನ್ಷಿಯೆಂಟ್ ಸೀಕ್ರೆಟ್ಸ್ ಟು ರಿವರ್ಸ್ ಡಯಾಬಿಟೀಸ್’ ಕೃತಿ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

05/02/2022, 20:49

ಬೆಂಗಳೂರು(reporterkarnataka.com): ಮಧುಮೇಹ ನಿವಾರಣೆಗಾಗಿ ಪ್ರಾಚೀನ ಆಯುರ್ವೇದ ಚಿಕಿತ್ಸಾ ಪದ್ಧತಿಯ ಅಂಶಗಳನ್ನು ಒಳಗೊಂಡಿರುವ ಮಹತ್ವದ ಕೃತಿಯೊಂದನ್ನು ಹೊರತರಲಾಗಿದೆ. ಖ್ಯಾತ ಆಯುರ್ವೇದ ತಜ್ಞ ಡಾ. ಮೃತ್ಯುಂಜಯ ಸ್ವಾಮಿ ಅವರು ಬರೆದಿರುವ ‘ಏನ್ಷಿಯೆಂಟ್ ಸೀಕ್ರೆಟ್ಸ್ ಟು ರಿವರ್ಸ್ ಡಯಾಬಿಟೀಸ್’ ಕೃತಿ ಇದಾಗಿದ್ದು, ಈ ಕೃತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಬಿಡುಗಡೆ ಮಾಡಿದರು.

ಮಧುಮೇಹ ರೋಗಕ್ಕೆ ತುತ್ತಾಗಿರುವವರು, ಪ್ರಿ ಡಯಾಬಿಟಿಕ್‌ ಹಾಗೂ ಇನ್ಸುಲಿನ್‌ ಚಿಕಿತ್ಸೆಯಲ್ಲಿರುವವರಿಗೆ ಹೇಗೆ ಮಧುಮೇಹವನ್ನು ನಿವಾರಿಸಬಹುದು ಎನ್ನುವ ಅತ್ಯಂತ ಮಹತ್ವದ ಸಂಗತಿಗಳು ಈ ಕೃತಿಯಲ್ಲಿ ಅಡಗಿವೆ. 

ಕೃತಿಯ ಲೇಖಕ ಡಾ. ಮೃತ್ಯುಂಜಯ ಸ್ವಾಮಿ ಮಾತನಾಡಿ, ‘ಭಾರತ ದೇಶ ಮಧುಮೇಹದ ರಾಜಧಾನಿಯಾಗುವತ್ತ ದಾಪುಗಾಲು ಹಾಕುತ್ತಿದೆ. ಬದಲಾದ ಜೀವನಶೈಲಿಯಿಂದ ಬರುವ ಪ್ರಮುಖ ರೋಗಗಳಲ್ಲಿ ಮಧುಮೇಹ ಕೂಡ ಒಂದು. ಈ ರೋಗಕ್ಕೆ ತುತ್ತಾಗುವವರು ತಾವು ಸಾಯುವವರೆಗೂ

ಮಾತ್ರೆಗಳನ್ನು ನುಂಗುತ್ತಲೇ ಇರಬೇಕು ಎನ್ನುವ ಸ್ಥಿತಿಯಾಗಿದೆ. ಆಧುನಿಕ ವೈದ್ಯಶಾಸ್ತ್ರದ ಪ್ರಕಾರ ಮಧುಮೇಹವನ್ನು ನಿವಾರಿಸಲು ಸಾಧ್ಯವಿಲ್ಲ. ಕೇವಲ ಅದನ್ನು ನಿಭಾಯಿಸಲು ಮಾತ್ರ ಸಾಧ್ಯ ಎನ್ನುವ ಮಾತುಗಳು ಜನಜನಿತ. ಆದರೆ, ನಮ್ಮ ಪಾರಂಪರಿಕ ಔಷಧ ಪದ್ಧತಿಯಲ್ಲಿ ಮಧುಮೇಹ ರೋಗವನ್ನು ಕೇವಲ ನಿಭಾಯಿಸುವುದಷ್ಟೇ ಅಲ್ಲ ದೇಹವನ್ನು ಮಧುಮೇಹದಿಂದ ಮುಕ್ತಗೊಳಿಸಹುದು ಎನ್ನುವ ಅಂಶಗಳು ಅಡಕವಾಗಿವೆ. ಆ ಅಂಶಗಳ ಆಧಾರದಲ್ಲಿ ಪುಸ್ತಕವನ್ನು ಬರೆಯಲಾಗಿದೆ’ ಎಂದರು.

ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ಹರಿಹರ ವೀರಶೈವ ಲಿಂಗಾಯಿತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧೀಕಾರಿ ಶ್ರೀ ವಚನಾನಂದ ಸ್ವಾಮೀಜಿ ಅವರು ಮಾತನಾಡಿ, ಜೀವನ ಶೈಲಿ ರೋಗಗಳು ನಮ್ಮ ಯುವ ಜನಾಂಗದ ಬಹುಭಾಗದ ಜನರನ್ನು ಅನಾರೋಗ್ಯಕ್ಕೀಡು ಮಾಡುತ್ತಿವೆ. ಇದರಲ್ಲಿ ಹೆಚ್ಚು ಸಮಸ್ಯೆ ಉಂಟುಮಾಡುತ್ತಿರುವುದು ಮಧುಮೇಹ. ಈ ರೋಗಕ್ಕೆ ತುತ್ತಾಗಿರುವವರು ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಲ್ಲಿ ಅನೇಕ ಅನುಕೂಲಗಳನ್ನು ನಾವು ಯೋಗಭ್ಯಾಸದಲ್ಲಿ ಕಂಡಿದ್ದೇವೆ. ಈ ಪುಸ್ತಕದಲ್ಲಿ ಅಳವಡಿಸಿರುವಂತಹ ಪ್ರಾಚೀನ ಆರೋಗ್ಯ ಪದ್ದತಿಗಳ ಅಂಶಗಳು ಹಾಗೂ ಯೋಗಭ್ಯಾಸದಂತಹ ಅಳವಡಿಕೆಗಳು ಬಹಳ ಉಪಯೋಗ. ಸ್ವತಃ ಆಯುರ್ವೇದ ವೈದ್ಯರಾಗಿರುವ ಡಾ. ಮೃತ್ಯುಂಜಯ ಅವರು ತಮ್ಮ ಪುಸ್ತಕದಲ್ಲಿ ತಾವು ಆಳವಾಗಿ ಆಧ್ಯಯನ ಮಾಡಿದ ಅಂಶಗಳನ್ನು ನಮೂದಿಸಿದ್ದಾರೆ ಎಂದು ಹೇಳಿದರು.

ಅತಿ ಹೆಚ್ಚು ಮಾರಾಟವಾಗುತ್ತಿರುವ ಕೃತಿ: ಡಾ. ಮೃತ್ಯುಂಜಯ ಸ್ವಾಮಿ ಅವರ ಮೊದಲ ಪುಸ್ತಕ ‘ಏನ್ಷಿಯೆಂಟ್ ಸೀಕ್ರೆಟ್ ಆಫ್ ಹೆಲ್ದಿ ಲಿವಿಂಗ್’ ಕೃತಿಯು ಆಮೆಜಾನ್‌ನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕೃತಿಗಳಲ್ಲಿ ಒಂದಾಗಿದೆ. ಈ ಪುಸ್ತಕದಲ್ಲಿ ಮಧುಮೇಹವನ್ನು ನಿವಾರಿಸುವುದು, ಅದನ್ನು ಸುಲಭ ವಿಧಾನದಲ್ಲಿ ನಿಭಾಯಿಸುವುದು. ಹಾಗೆಯೇ ಅದಕ್ಕೆ  ಬೇಕಾದ ಆಹಾರ ಪದ್ಧತಿ ಜೀವನ ಶೈಯಲ್ಲಿ ಆಗಬೇಕಾದ ಮಾರ್ಪಾಡು ಹೀಗೆ ಹತ್ತು ಹಲವು ಅಂಶಗಳನ್ನು ವಿಸ್ತೃತವಾಗಿ ಚರ್ಚಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು