ಇತ್ತೀಚಿನ ಸುದ್ದಿ
ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ; ದಾಳಿ ಮಾಡದೆ ಎದ್ದೋದ ಸಲಗ
16/11/2025, 15:57
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ರಸ್ತೆ ದಾಟುತ್ತಿದ್ದ ಕಾಡಾನೆಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮೇಲೆಯೇ ಕಾಡಾನೆ ಬಿದ್ದು ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಎನ್.ಆರ್.ಪುರ ತಾಲೂಕಿನ 9ನೇ ಮೈಲಿ ಸಮೀಪದ ಬುರುಗಮನೆ ಗ್ರಾಮದ ಬಳಿ ಈ ಘಟನೆ ನಡೆದಿದೆ.
ರಸ್ತೆ ದಾಟುತ್ತಿದ್ದ 2 ಕಾಡಾನೆಗಳು, 1 ಆನೆ ರಸ್ತೆ ದಾಟಿತ್ತು, ಮತ್ತೊಂದು ದಾಟುವಾಗ ಕಾರು ಡಿಕ್ಕಿ ಹೊಡೆದಿದೆ. ಕಾರಿನ ಮೇಲೆ ಬಿದ್ದ ಬಳಿಕವೂ ಯಾವುದೇ ದಾಳಿ ಮಾಡದೆ ಕಾಡಾನೆ ಎದ್ದು ಹೋಗಿದೆ.






ಎನ್.ಆರ್.ಪುರ-ಬಾಳೆಹೊನ್ನೂರು ಮುಖ್ಯ ರಸ್ತೆಯ ರಾಜ್ಯ ಹೆದ್ದಾರಿ ಘಟನೆ ನಡೆದ ಸ್ಥಳವಾಗಿದೆ. ಚಿಕ್ಕ ಅಗ್ರಹಾರ ಅರಣ್ಯ ವ್ಯಾಪ್ತಿಗೆ ಬರುವ 9ನೇ ಮೈಲಿ ಅರಣ್ಯ ಪ್ರದೇಶ ಇದಾಗಿದೆ. ಎನ್.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.













