ಇತ್ತೀಚಿನ ಸುದ್ದಿ
ವಾಟ್ಸಾಪ್ ಆಗಲಿದೆ ಮತ್ತೆ ಅಪ್ಡೇಟ್ :ಇನ್ನು ಮುಂದೆ ವಾಟ್ಸಾಪ್ ಖಾತೆ ಯನ್ನು ನಾಲ್ಕು ಪೋನ್ ಗಳಿಗೆ ಲಿಂಕ್ ಮಾಡಬಹುದು
15/11/2022, 21:42
ಹೊಸದಿಲ್ಲಿ(reporterkarnataka.com): ವಾಟ್ಸಾಪ್ ಫ್ಯೂಚರ್ಸ್ ತುಂಬಾ ಬದಲಾಗಿದೆ. ಇನ್ನು ಮುಂದೆ ಒಂದು ವಾಟ್ಸಾಪ್ ಖಾತೆ ಯನ್ನು 4 ಪೋನ್ ಗಳಿಗೆ ಲಿಂಕ್ ಮಾಡಲು ಸಾಧ್ಯವಾಗಲಿದೆ.
ವಾಟ್ಸಾಪ್ ಒಂದೇ ಖಾತೆಯನ್ನು ಇನ್ನು 2 ಅಥವಾ ಹೆಚ್ಚು ಮಾಡಲು ಸಾಧ್ಯವಾಗುವಂತಹ ಹೊಸ ಫೀಚರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಹೊಸ ಫೀಚರ್‌ಗೆ ‘ಕಂಪಾನಿಯನ್ ಮೋಡ್’ ಎಂದು ಹೆಸರಿಸಲಾಗಿದೆ.
ಈಗಾಗಲೇ ಹೊಸ ಫೀಚರ್‌ನ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಆ್ಯಂಡ್ರಾಯ್ಡ್ ಫೋನುಗಳಲ್ಲಿ ನೀಡಲಾಗುತ್ತಿರುವ ವಾಟ್ಸಾಪ್ ಬೀಟಾ ಅಪ್‌ಡೇಟ್‌ನಲ್ಲಿ ಈ ಹೊಸ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ.