ಇತ್ತೀಚಿನ ಸುದ್ದಿ
‘ವಾಯ್ಸ್ ಆಫ್ ಆರಾಧನಾ’: ಫೆಬ್ರವರಿ ತಿಂಗಳ ಟಾಪರ್ ಆಗಿ ನಿರೀಕ್ಷಾ ಶೆಟ್ಟಿ ಮತ್ತು ನಿಯಾತ್ ಕೃಷ್ಣ ಆಯ್ಕೆ
26/02/2022, 20:13
ಮಂಗಳೂರು(reporterkarnataka news): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಫೆಬ್ರವರಿ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ನಿರೀಕ್ಷಾ ಶೆಟ್ಟಿ ವಿಟ್ಲ ಹಾಗೂ ಬೆಂಗಳೂರಿನ ನಿಯಾತ್ ಕೃಷ್ಣ ಆಯ್ಕೆಗೊಂಡಿದ್ದಾರೆ.
ವಿಟ್ಲ ಸಮೀಪದ ಪಡಾರಿನ ಗೋಪಾಲ ಶೆಟ್ಟಿ ಹಾಗೂ ಬಬಿತ ದಂಪತಿಯ ಮಗಳಾದ ನಿರೀಕ್ಷ ಶೆಟ್ಟಿ ಸೈಂಟ್ ರೀಟಾ ಆಂಗ್ಲ ಮಾದ್ಯಮ ಶಾಲೆಯಲ್ಲಿ 5 ನೇ ತರಗತಿ ಓದುತ್ತಿದ್ದಾಳೆ. ನೃತ್ಯ ಹಾಗೂ ಯಕ್ಷಗಾನ ತರಬೇತಿ ಪಡೆಯುತ್ತಾಳೆ.
ಸಾಧನೆ: ಬಾಲಪ್ರತಿಭಾ ಪುರಸ್ಕಾರ, ಪುಟಾಣಿ ಪಂಟರ್ ಗೌರವ ಪ್ರಶಸ್ತಿ, ಮಂಜುನಾಥ ಸ್ವಾಮಿ ರಾಷ್ಟ್ರೀಯ ಪ್ರಶಸ್ತಿ, ಕನ್ನಡ ಕುಲ ತಿಲಕ ಪ್ರಶಸ್ತಿ, ವಾಯ್ಸ್ ಆಫ್ ಆರಾಧನಾ ಅವಾರ್ಡ್,ರಾಜ್ಯೋತ್ಸವ ಗೌರವ ಪ್ರಶಸ್ತಿ, ಕಲಾರತ್ನ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ವರ್ಷದ ಸಾಧಕ ರತ್ನ ಪ್ರಶಸ್ತಿ, ಚೈತನ್ಯ ಶ್ರೀ ಕರುನಾಡ ರತ್ನ ಪ್ರಶಸ್ತಿ ಮತ್ತು ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ ಪಡೆದಿದ್ದಾಳೆ.
ಹಲವಾರು ಸಂಸ್ಥೆ ಗಳಲ್ಲಿ ನೃತ್ಯ ಮಾಡಿ ಬಹುಮಾನ ಪಡೆಯುವುದರ ಜೊತೆಗೆ 150ಕ್ಕೂ ಅಧಿಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ಮಾಡುವುದರ ಜೊತೆಗೆ ಕೆಲವೊಂದು ಸಂಸ್ಥೆಗಳಿಂದ ಗೌರವಕ್ಕೂ ಪಾತ್ರಳಾಗಿರುತ್ತಾಳೆ. ಕೆಲವೊಂದು ಟಿ.ವಿ ಮಾದ್ಯಮದಲ್ಲಿ ನೃತ್ಯ ಪ್ರದರ್ಶನ ನೀಡಿರುತ್ತಾಳೆ.
ಇನ್ನೂಬ್ಬ ಬಹುಮುಖ ಪ್ರತಿಭೆ ನಿತಾಯ್ ಕೃಷ್ಣ ಡಿ.ಮೇಂಡ ಬೆಂಗಳೂರಿನ ಕೇಂದ್ರೀಯ ವಿದ್ಯಾಲಯದಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾನೆ.
ಈತ ದುರ್ಗಾಪ್ರಸಾದ್ ಎಂ. ಮತ್ತು ವಿಂಧ್ಯಾ ದುರ್ಗಾಪ್ರಸಾದ್ ಅವರ ಪುತ್ರ. ನಿತಾಯ್ ಕೃಷ್ಣ ಯಕ್ಷಗಾನ ತೆಂಕುತಿಟ್ಟು ನಾಟ್ಯವನ್ನು ಗುರುಗಳಾದ ಶ್ರೀ ಸಬ್ಬಣಕೋಡಿ ರಾಮ ಭಟ್ ಮತ್ತು ಬಡಗುತಿಟ್ಟು ನಾಟ್ಯವನ್ನು ಗುರುಗಳಾದ ಬೇಗಾರ್ ಶಿವಕುಮಾರ್ ಅವರಲ್ಲಿ ಕಲಿತಿರುತ್ತಾನೆ. ಸಮುದ್ರ ಮಥನ, ಕನಕಾಂಗಿ ಕಲ್ಯಾಣ, ಜಾಂಬವತೀ ಕಲ್ಯಾಣ, ಶ್ರೀಕೃಷ್ಣ ಲೀಲೆ ಮುಂತಾದ ಪ್ರಸಂಸಗದಲ್ಲಿ ಅರ್ಜುನ, ಅಭಿಮನ್ಯು, ಮೂಕಾಸುರ, ಕೃಷ್ಣನ ಪಾತ್ರಗಳನ್ನು ಮಾಡಿದ್ದಾನೆ. ಹಲವಾರು ಯಕ್ಷಗಾನ ನೃತ್ಯ ರೂಪಕ ಕಾರ್ಯಕ್ರಮಗಳನ್ನೂ ನೀಡಿರುತ್ತಾನೆ.
ತನ್ನ 4ನೇ ಪ್ರಾಯದಲ್ಲಿ ಕರಾಟೆ ತರಗತಿಗೆ ಸೇರಿ ಶಿಹಾನ್ ಡಾ.ಕೆ.ಪಿ.ಚಂತ್ರಕುಮಾರ್ ಅವರ ಮಾರ್ಗದರ್ಶನದಲ್ಲಿ ಅತೀ ಕಿರಿಯ ಪ್ರಾಯ 9ನೇ ವರ್ಷದಲ್ಲಿ “ಬ್ಲ್ಯಾಕ್ ಬೆಲ್ಟ್ ಪದವಿ”ಯನ್ನೂ ಮತ್ತು 2020 ರಲ್ಲಿ “2 nd Dan ಬ್ಲ್ಯಾಕ್ ಬೆಲ್ಟ್ ಪದವಿ ಯನ್ನು ಪಡೆದಿರುತ್ತಾನೆ.
ಕರಾಟೆ ಸ್ಪರ್ಧೆಯಲ್ಲಿ “ರಾಷ್ಟ್ರ ಸಿರಿ ಟ್ಯಾಲೆಂಟ್ ಅವಾರ್ಡ್”, “ಭಾರತ ಸಿರಿ ಅವಾರ್ಡ್-2013-14” ,”ಕರ್ನಾಟಕ ಸಿರಿ ಪ್ರಶಸ್ತಿ”, “ಕರ್ನಾಟಕ ಟೈಗರ್-2016 ಪ್ರಶಸ್ತಿ”, “ಭಾರತ ರಾಷ್ಟ್ರ ಸೌರಭ ನ್ಯಾಷನಲ್ ಅವಾರ್ಡ್”,”ಕರ್ನಾಟಕ ಟೈಗರ್-2015” ಮತ್ತು “ಬಾಲ್ಯ ಪ್ರತಿಭಾ ರತ್ನ ಪ್ರಶಸ್ತಿ” ಈತನಿಗೆ ಲಭಿಸಿವೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ 25 ಕ್ಕೂ ಹೆಚ್ಚು ಬಹುಮಾನ ಗಳಿಸಿರುತ್ತಾನೆ.
ಬಂಟರ ಸಂಘ ಬೆಂಗಳೂರು ನಡೆಸುವ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದಿರುತ್ತಾನೆ.
ಬಂಟರ ಸಂಘ ಬೆಂಗಳೂರು ಕೊಡುವ “ಕ್ರೀಡಾ ಪ್ರಶಸ್ತಿ-2016-17” ನ್ನೂ ತನ್ನದಾಗಿಸಿಕೊಂಡಿರುತ್ತಾನೆ.
ಸಂಸ್ಕೃತ ಭಾರತಿ ಕರ್ನಾಟಕದವರು ನಡೆಸುವ ಸಂಸ್ಕೃತ ಪರೀಕ್ಷೆಯ ಎಲ್ಲಾ 4 ಹಂತಗಳನ್ನು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾನೆ.
ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್(ರಿ).ಅಜ್ಜನಡ್ಕ-ನಂದಳಿಕೆಯವರು ನಡೆಸಿದ ಜಿಲ್ಲಾಮಟ್ಟದ ಆನ್ಲೈನ್ ಕೌನ್ ಬನೇಗ ಚಾಂಪಿಯನ್ ಕ್ವಿಝ್ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಇಸ್ಕಾನ್ ಬೆಂಗಳೂರು ಏರ್ಪಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಬಹುಮಾನ, ಪ್ರತೀ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಉತ್ಸಾಹ-ಕಲ್ಚರಲ್ ಈವೆಂಟ್ಸ್ ನವರ ವತಿಯಿಂದ ನಡೆಸುವ ಸ್ಪರ್ಧೆಯಲ್ಲಿ ಭಾಗವಹಿಸಿ 25 ಕ್ಕೂ ಅಧಿಕ ಬಹುಮಾನವನ್ನೂ, ವಿಝ್ ನ್ಯಾಷನಲ್ ಸ್ಪೆಲ್ ಬೀ ಯವರ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಪ್ರಮಾಣ ಪತ್ರ ಗಳಿಸಿರುತ್ತಾನೆ. ಅಲ್ಲದೇ ಶೈಕ್ಷಣಿಕವಾಗಿಯೂ ಅತ್ಯುತ್ತಮವಾಗಿದ್ದೂ ಪಠ್ಯೇತರ ಚಟುವಟಿಕೆಯ ಸ್ಪರ್ಧೆಯಲ್ಲಿ 75 ಕ್ಕೂ ಅಧಿಕ ಬಹುಮಾನವನ್ನು ಪಡೆದಿರುತ್ತಾನೆ. ನಿತಾಯ್ ಕೃಷ್ಣನು ಯಕ್ಷಗಾನ, ಕರಾಟೆ ಕಲಿಯುವುದರ ಜೊತೆಗೆ ಭಜನೆ ಹಾಡು, ಸ್ಕೇಟಿಂಗ್,ಬ್ಯಾಡ್ಮಿಂಟನ್, ಪಿಯಾನೋ, ಡ್ರಾಯಿಂಗ್, ಕೊಳಲು ಮೊದಲಾದವುಗಳನ್ನು ಅಭ್ಯಾಸ ಮಾಡುತ್ತಿದ್ದಾನೆ.