4:25 AM Wednesday15 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ: ಆಗಸ್ಟ್ ತಿಂಗಳ ಟಾಪರ್ ಆಗಿ  ಶ್ರೀನಿಧಿ ಹಾಗೂ ಅಶ್ಮಿತ್ ಎ.ಜೆ. ಮಂಗಳೂರು ಆಯ್ಕೆ

04/09/2022, 20:59

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಆಗಸ್ಟ್ ತಿಂಗಳ ಟಾಪರ್ ಆಗಿ ಶ್ರೀನಿಧಿ ಹಾಗೂ ಅಶ್ಮಿತ್ ಎ.ಜೆ. ಮಂಗಳೂರು ಆಯ್ಕೆಗೊಂಡಿದ್ದಾರೆ.

ಉಡುಪಿಯ ಶ್ರೀನಿಧಿ ಅವರು ಜಯರಾಮ ಭಟ್ ಹಾಗೂ ಸುಜಾತಾ ಜೆ. ಭಟ್ ದಂಪತಿಯ ಪುತ್ರಿ. ಶಿವಪ್ರಸಾದ್ ಇವರ ಪತಿ. 3 ವರ್ಷದ ಮಗಳಿದ್ದಾಳೆ.

22 ವರ್ಷಗಳಿಂದ ಇವರು ಹವ್ಯಾಸಿ ಯಕ್ಷಗಾನ ಕಲಾವಿದೆ. ಸಾಸ್ತಾನ ಮಂಜುನಾಥ್ ಕುಲಾಲ್ ಐರೋಡಿ ಅವರು ಶ್ರೀನಿಧಿ ಅವರ ಯಕ್ಷಗಾನ ಗುರುಗಳು.

ಶ್ರೀನಿಧಿ ಅವರು 1ನೇ ತರಗತಿತಯಿಂದ ಭರತನಾಟ್ಯ ಅಭ್ಯಾಸ ಆರಂಭಿಸಿದ್ದರು. ವಿದುಷಿ ಯಶರಾಮ ಕೃಷ್ಣರ ಹೆಜ್ಜೆ ಗೆಜ್ಜೆ ನೃತ್ಯ ತಂಡದ ವಿದ್ಯಾರ್ಥಿನಿ ಇವರು. 5ನೇ ತರಗತಿಯಿಂದ ಯಕ್ಷಗಾನ ಕಲಿಕೆ ಶುರು ಮಾಡಿದ್ದರು. ಶ್ರೀ ಮಹಾಗಣಪತಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಹಿಳಾ ಸಂಘ ಪೆರ್ಣಂಕಿಲ ಇವರ ರಂಗ ವೇದಿಕೆ. ಇವರು ನಿರ್ವಹಿಸಿದ ಮೊದಲ ಪಾತ್ರ ಜಾಂಬವತಿ. ನಂತರ ಮುಖ್ಯ ಪಾತ್ರಗಳಲ್ಲಿ ಸುಧನ್ವ , ಅರ್ಜುನ , ಪ್ರಭಾವತಿ , ಪದ್ಮಗಂಧಿನಿ , ಪ್ರಮೀಳೆ , ಅಸ್ತಿ , ಈಶ್ವರ ,ಮಾರ್ತಾಂಡತೇಜ , ಕಮಲಧ್ವಜ , ಭ್ರಮರಕುಂತಳೆ , ಮೋಹಿನಿ , ತಾರಾವಳಿ , ರುಕ್ಮಿಣಿ ಹೀಗೆ ಹಲವಾರು ಪಾತ್ರಗಳನ್ನು ಮಾಡಿದ್ದಾರೆ.

ಶ್ರೀನಿಧಿ ಅವರು ಹಿರಿಯಡ್ಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಹೈಸ್ಕೂಲ್  ಶಿಕ್ಷಣವನ್ನು ಹಿರಿಯಡ್ಕ  

ಸರಕಾರಿ ಶಾಲೆಯಲ್ಲಿ ಪೂರೈಸಿದರು. ಪದವಿ ಶಿಕ್ಷಣವನ್ನು ಉಡುಪಿಯ ಜಿ . ಶಂಕರ್  ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದರು.

ಇದೀಗ ಕಾಪು ದೇಸಿಕ್ರೂ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಕಳೆದ 8 ವರ್ಷ ದಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸ್ಟೇಟ್ ಲೆವೆಲ್ ಸ್ಪೋರ್ಟ್ಸ್ ಪ್ಲೇಯರ್ ರನ್ನಿಂಗ್ , ಎನ್ ಸಿಸಿ ಕೆಡೆಟ್ ಆಗಿ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ. ಉಡುಪಿ ಕೋ ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್ 100ನೇ ವರ್ಷದ ಸಂಭ್ರಮಕ್ಕೆ ನಡೆಸಿದ 8 ನಿಮಿಷದ ಯಕ್ಷಗಾನ ಸ್ಪರ್ಧೆ ಯಲ್ಲಿ ಪ್ರಥಮ ಬಹುಮಾನ ಪಡೆದ ಹೆಗ್ಗಳಿಕೆ ಅವರದ್ದು. ಕರಂಬಳ್ಳಿಯಲ್ಲಿ 10 ವರ್ಷದ ಸಂಭ್ರಮಕ್ಕೆ ನಡೆಸಿದ ಹವ್ಯಾಸಿ ಯಕ್ಷಗಾನ ಸ್ಪರ್ಧೆಯಲ್ಲಿ ವೈಯಕ್ತಿಕ ಕಮಲಧ್ವಜ ಪಾತ್ರಕ್ಕೆ ದ್ವಿತೀಯ ಬಹುಮಾನ ಪಡೆದಿದ್ದಾರೆ.

ಲಂಡನ್ ಯಕ್ಷಗಾನ ಸ್ಪರ್ಧೆಯಲ್ಲಿ ಸೆಮಿ ಫೈನಲ್ ಹಂತಕ್ಕೆ ಸೆಲೆಕ್ಟ್ ಆಗಿದ್ದರು. ಕಾರಣಾಂತರಗಳಿಂದ ಸ್ಪರ್ಧೆ ಸ್ಥಗಿತಗೊಂಡಿತು. ಶಾಲಾ ಹಾಗೂ ಕಾಲೇಜು ನಲ್ಲಿ ಪ್ರತಿಭಾ ಕಾರಂಜಿ ಹಾಗೂ ಇಂಟರ್ ಕಾಲೇಜು ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಪಡೆದಿದ್ದಾರೆ. ಇತ್ತೀಚಿಗೆ ನಡೆದ ಯಕ್ಷವೇಷ ಫೋಟೋ ಸ್ಪರ್ಧೆ, “ಯಕ್ಷ ಪ್ರಶ್ನೆ ಕಿರುಚಿತ್ರ ” ತಂಡ ಸ್ಪರ್ಧೆ ಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.

ಪ್ರಸ್ತುತ ಬಾರಕೂರಿನ ಶ್ರೀ ಗಜಮುಖ ಹರಿಹರ ಯಕ್ಷಗಾನ ಸಂಘದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ. ವಾಯ್ಸ್ ಆಫ್ ಆರಾಧನಾ ತಂಡದ ಸಕ್ರೀಯ ಸದಸ್ಯರು.

ಇನ್ನು ಅಶ್ಮಿತ್ ಎ.ಜೆ. ಮಂಗಳೂರು 9ರ ಹರೆಯದ ಪುಟ್ಟ ಹುಡುಗ. ಸಂತ ಅಲೋಶಿಯಸ್  ಗೊಂಝಗಾ ಸ್ಕೂಲ್ ನಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಹಾಡು, ತಬಲ, ಕೀಬೋರ್ಡ್, ಚೆಂಡೆ ಮದ್ದಳೆ ಮತ್ತು ಡ್ರಾಯಿಂಗ್ ಈತನ ನೆಚ್ಚಿನ ಹವ್ಯಾಸ.

ಗಾಯನ ಸ್ಪರ್ಧೆಯಲ್ಲಿ ಹೆಚ್ಚಿನದರಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಹಲವಾರು ವೇದಿಕೆಯಲ್ಲಿ ಮತ್ತು ಚಾನೆಲ್ ಗಳಲ್ಲಿ ಹಾಡಿರುತ್ತಾನೆ. ಡಾ. ಎಸ್ ಪಿಬಿ ಅಂದ್ರೆ ಈತನಿಗೆ ತುಂಬಾ ಇಷ್ಟ.  ಶಂಕರ ನಾದ ಶರೀರಾಪಾರ ಹಾಡು, ಕೊರಗಜ್ಜನ ಹಾಡು ಮತ್ತು ಗರಗರನೆ ಸಾಂಗ್ ಜನಮೆಚ್ಚಿದ ಹಾಡುಗಳು. ವಾಯ್ಸ್ ಆಫ್ ಆರಾಧನಾ ದ ಸಕ್ರೀಯ ಸದಸ್ಯನಾಗಿದ್ದಾನೆ.

ಇತ್ತೀಚಿನ ಸುದ್ದಿ

ಜಾಹೀರಾತು