ಇತ್ತೀಚಿನ ಸುದ್ದಿ
ವಿಮಾನಕ್ಕೆ ಬಳಸುವ ಇಂಧನಕ್ಕಿಂತಲೂ ಬೈಕ್, ಕಾರ್‌ಗೆ ಬಳಸುವ ಪೆಟ್ರೋಲ್ ದುಬಾರಿ
18/10/2021, 21:46
ನವದೆಹಲಿ(reporterkarnataka.com)
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಭಾನುವಾರ ತಲಾ 35 ಪೈಸೆಯಷ್ಟು ಏರಿಕೆ ಮಾಡಿದ್ದು, ತನ್ಮೂಲಕ ವಿಮಾನಗಳ ಇಂಧನವಾದ ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ಕ್ಕಿಂತಲೂ ಕಾರು ಮತ್ತು ದ್ವಿಚಕ್ರ ವಾಹನ ಸವಾರರು ಪೆಟ್ರೋಲ್‌ಗೆ ಶೇ.33ರಷ್ಟು ಹೆಚ್ಚು ದರ ತೆರುವಂತಾಗಿದೆ.
ವಿಮಾನದ ಇಂಧನ ಎಟಿಎಫ್‌ಗೆ ಒಂದು ಲೀಟರ್‌ಗೆ 79 ರು. ಇದ್ದರೆ, ದೇಶಾದ್ಯಂತ ಪೆಟ್ರೋಲ್ ದರ 110 ರು. ಆಸುಪಾಸಿನಲ್ಲಿದೆ. ಅಂದರೆ ಪೆಟ್ರೋಲ್ ದರವು ವೈಮಾನಿಕ ಇಂಧನಕ್ಕಿಂತ ಶೇ.33 ರಷ್ಟು ಹೆಚ್ಚು ದುಬಾರಿಯಾದಂತಾಗಿದೆ.
ಕಳೆದ 4 ದಿನಗಳಿಂದ ಇಂಧನ ದರ ಏರಿಕೆ ಪರ್ವ ಮುಂದುವ ರಿದಿದ್ದು, ಈ 4 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ತಲಾ 1.40 ರು. ಏರಿಕೆಯಾಗಿದೆ.