ಇತ್ತೀಚಿನ ಸುದ್ದಿ
ವಿಜಯಪುರದ ಇಂಡಿ ಸಮೀಪ ಯುವತಿಯ ಕತ್ತು ಸೀಳಿ ಭೀಕರ ಹತ್ಯೆ: ಅಪರಿಚಿತ ದುಷ್ಕರ್ಮಿಗಳಿಂದ ಕೃತ್ಯ
26/08/2022, 20:23
ಮುತ್ತಪ್ಪ ಸಿದ್ದರಾಯ ಪಡಸಾಲಗಿ ಇಂಡಿ ವಿಜಯಪುರ
info.reporterkarnataka@gmail.com
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ಯುವತಿಯೊಬ್ಬಳ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ.
ಕೊಲೆಗೀಡಾದ ಯುವತಿಯನ್ನು ಪಲ್ಲವಿ ವಠಾರ್ (26) ಎಂದು ಗುರುತಿಸಲಾಗಿದೆ. ಹಳಗುಣಕಿ ಗ್ರಾಮದ ಹೊರಭಾಗದ ಮನೆಯಲ್ಲಿದ್ದ ಯುವತಿ ಪಲ್ಲವಿಯನ್ನು ಅಪರಿಚಿತ ದುಷ್ಕರ್ಮಿಗಳ ಹತ್ಯೆ ಮಾಡಿದ್ದಾರೆ. ಹರಿತವಾದ ಆಯುಧದಿಂದ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹಂತಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ವಿಜಯಪುರ ಜಿಲ್ಲೆಯ ಹೊತ್ತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














