ಇತ್ತೀಚಿನ ಸುದ್ದಿ
Vijayapura | ತಾಳಿಕೋಟಿ ಸಮುದಾಯ ಆರೋಗ್ಯ ಕೇಂದ್ರ: ಸಮಯಕ್ಕೆ ಬಾರದ ವೈದ್ಯರು!; ಆ್ಯಂಬ್ಯುಲೆನ್ಸ್, ನಗು ಮಗು ಇಲ್ಲ!!
26/04/2025, 11:56
ಶಿವು ರಾಠೋಡ ಹುಣಸಗಿ ವಿಜಯಪುರ
info.reporterkarnataka@gmail.com
ವಿಜಯಪುರ ಜಿಲ್ಲೆಯ ತಾಳಿಕೋಟಿಯ ಆರೋಗ್ಯ ಸಮುದಾಯ ಕೇಂದ್ರದ ಆಡಳಿತದ ಪರಸ್ಥಿತಿ ಸಂಪೂರ್ಣ ಹದಗೆಟ್ಟು ಹೋಗಿದ್ದು, ಹೇಳುವವರಿಲ್ಲ, ಕೇಳುವವರಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಳಿಕೋಟಿಯ ಆರೋಗ್ಯ ಸಮುದಾಯ ಕೇಂದ್ರದ ಸದ್ಯದ ಪರಸ್ಥಿತಿ ಏನಾಗಿದೆ ಅಂದ್ರೆ ಡಾಕ್ಟರಗಳು ಸರ್ಕಾರ ನಿಗದಿ ಪಡಿಸಿದ ಸಮಯಕ್ಕೆ ಬರುವುದೇ ಇಲ್ಲ. 11 ಗಂಟೆಗೆ ಬಂದು 1 ಗಂಟೆಗೆ ಹೋದವರು ಕಾಣೆ ಆಗಿಬಿಡುತ್ತಾರೆ ಎಂದು.ಸಾರ್ವಜನಿಕರು ದೂರಿದ್ದಾರೆ.

ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ ಅವರು ಸಮುದಾಯ ಅರೋಗ್ಯ ಕೇಂದ್ರದಲ್ಲಿ ಆಡಳಿತದ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ನೌಕರಿಗೆ ಹಾಜರಾಗುತ್ತಾರೋ ಇಲ್ಲೋ ಎಂಬವುದನ್ನು ವೀಕ್ಷಿಸುವುದಿಲ್ಲ. ನಿರ್ಲಕ್ಷದಿಂದ ಜವಾಬ್ದಾರಿಯನ್ನು ಮರೆತು ಬಿಟ್ಟಿದ್ದಾರೆ. ಈ ಸರ್ಕಾರಿ ದವಾಖಾನೆಗೆ ಆಂಬುಲೆನ್ಸ್. ನಗು ಮಗು ವಾಹನ ಕೂಡ ಲಭ್ಯವಿರುದಿಲ್ಲ. ಬಾಣತಿಯರು ಆಟೋ, ಕಾರುಗಳನ್ನು ಬಾಡಿಗೆ ಮಾಡಿಕೊಂಡು ತಮ್ಮ ಸ್ಥಳಕ್ಕೆ ಹೋಗಬೇಕು. ಈ ಆರೋಗ್ಯ ಕೇಂದ್ರದ ಸದ್ಯದ ಪರಸ್ಥಿತಿ ಚಿಂತಾಜನಕವಾಗಿದೆ. ಈ ಬೇಸಿಗೆ ದಿನಕ್ಕೆ ಬಹಳ ಹೃದಯಘಾತಕ್ಕೆ ಸಂಬಂಧಿಸಿದ ರೋಗಿಗಳು ಬಂದ್ರೆ ಅವರಿಗೆ ಯಾವುದೇ ತರಹದ ಚಿಕಿತ್ಸೆ ಲಭಿಸುವ ಔಷಧಿ ವ್ಯವಸ್ಥೆ ಇಲ್ಲ. ಆಕ್ಸಿಜನ್ ಒಂದು ಟೈಮ್ ಇರುತ್ತೆ. ಕೆಲವೊಂದು ಟೈಮ್ ಇರುವುದಿಲ್ಲ. ಶಸ್ತ್ರ ಚಿಕಿತ್ಸೆಗೆ ಬೇಕಾದ ವಸ್ತುಗಳು ಕೊಡಾ ಇಲ್ಲ. ಕೈ ಕಾಲು ಮುರಿದರೆ ಎಕ್ಸ್ ರೇ ಮಾಡಲು ಮಷಿನ್ ಇದ್ರೂ ಕೊಡಾ ಬಹಳ ದಿನದಿಂದ ಕೆಟ್ಟು ಹೋಗಿದೆ. ಅದನ್ನು ಸಾರ್ವಜನಿಕರೇ ರಿಪೇರಿ ಮಾಡಿಸುವಂತ ಸಂದರ್ಭ ಉಂಟಾಗಿದೆ. ಖಾಸಗಿ ಆಸ್ಪತ್ರೆಗೆ ಹೋಗಿ ಎಂದು ಕಳಿಸುವ ವಿಧಾನ ಈ ತಾಳಿಕೋಟಿಯ ಅರೋಗ್ಯ ಸಮುದಾಯ ಕೇಂದ್ರದಲ್ಲಿ ಇನ್ನು ಜೀವಂತವಿದೆ ಎಂದು ಆಸ್ಪತ್ರೆಗೆ ಬಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.














