ಇತ್ತೀಚಿನ ಸುದ್ದಿ
ವಿಜಯಪುರ: ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಯುವಕನ ಅಮಾನುಷ ಹತ್ಯೆ; ಹಣಕಾಸಿನ ವ್ಯವಹಾರ ಸಂಬಂಧ ಗುಮ್ಮಟನಗರಿಯಲ್ಲಿ ಬಿತ್ತೇ ಹೆಣ?
20/05/2024, 14:01
ಭೀಮಣ್ಣ ಪೂಜಾರ್ ಶಿರನಾಳ ವಿಜಯಪುರ
info.reporterkarnataka@gmail.com
ವಿಜಯಪುರದ ಎಪಿಎಂಸಿ ಬಳಿ ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಯುವಕನೊಬ್ಬನನ್ನು ಅಮಾನುಷವಾಗಿ ಕೊಲೆ ಮಾಡಲಾಗಿದೆ.
ಕೊಲೆಯಾದ ಯುವಕನನ್ನು ನಗರದ ಕಂಬಾರ ಓಣಿ ನಿವಾಸಿ ರೋಹಿತ್ ಸುಭಾಶ್ ಪವಾರ(23) ಎಂದು ಗುರುತಿಸಲಾಗಿದೆ.
ವಿಜಯಪುರದ ಎಪಿಎಂಸಿ ಆವರಣದಲ್ಲಿನ ಮಾಂಸ ಮಾರುಕಟ್ಟೆಯ ಬಳಿ ರೋಹಿತ್ ನನ್ನು ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ. ಕೊಲೆ ಬಳಿಕ ಯವಕನ ಶವವನ್ನು ಅಲ್ಲೇ ಪಕ್ಕದ ಮುಳ್ಳುಕಂಟಿಯಲ್ಲಿ ಹಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಕೊಲೆ ನಡೆದ ಸ್ಥಳದಲ್ಲಿ ಒಂದು ಮಚ್ಚು, ಒಂದು ಚಾಕೂ, ಕಲ್ಲು ಹಾಗೂ ಖಾರದ ಪುಡಿ ದೊರಕಿದೆ. ಹಣಕಾಸಿನ ವ್ಯವಹಾರ ಕೊಲೆಗೆ ಕಾರಣ ಎನ್ನಲಾಗಿದೆ. ಆದರೆ ನಿಖರವಾದ ಕಾರಣ ತನಿಖೆಯಿಂದ ಇನ್ನು ಹೊರ ಬರಬೇಕಾಗಿದೆ.
ಕಳೆದ ರಂಜಾನ್ ಹಬ್ಬದ ವೇಳೆ ರೌಡಿ ಶೀಟರ್ ಹತ್ಯೆ ನಡೆದಿತ್ತು.
ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಂತಕರ ಪತ್ತೆಗೆ ಖಾಕಿ ಪಡೆ ಬಲೆ ಬೀಸಿದೆ.