ಇತ್ತೀಚಿನ ಸುದ್ದಿ
ವಿಜಯಪುರ: ಜೋಡೆತ್ತುಗಳಿಂದ ಮುಖ್ಯಮಂತ್ರಿ ಬೊಮ್ಮಾಯಿಯ ತಿವಿಯಲು ಯತ್ನ; ಇದಕ್ಕೆಲ್ಲ ಕಾರಣ ಏನು ಗೊತ್ತೇ?
26/04/2022, 16:29

ವಿಜಯಪುರ(reporterkarnataka.com): ಜನಜಂಗುಳಿಯ ಗದ್ದಲದಿಂದ ಬೆದರಿದ ಜೋಡೆತ್ತುಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತಿವಿಯಲು ಯತ್ನಿಸಿದ ಘಟನೆ ವಿಜಯಪುರದ ತಾಳಿಕೋಟೆಯ ಬಂಟನೂರಲ್ಲಿ ನಡೆದಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಬಂಟನೂರು ಸಮೀಪದ ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆ ಶಂಕು ಸ್ಥಾಪನೆಗೆ ಆಗಮಿಸಿದ್ದರು. ಬಳಿಕ ಸಿಎಂ ಅವರು ಬಂಟನೂರು ಗ್ರಾಮದ ರೈತರಿಂದ ಜೋಡೆತ್ತು ಹಾಗೂ ಹಸು ಕಾಣಿಕೆ ಕಾರ್ಯಕ್ರಮದಲ್ಲಿ ಜೋಡೆತ್ತುವನ್ನು ಕಾಣಿಕೆ ನೀಡುವ ಕಾರ್ಯಕ್ರಮವಿತ್ತು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಜೋಡೆತ್ತುವನ್ನು ನೋಡಲು ಹೋದಾಗ ಜನಜಂಗುಳಿ ಮತ್ತು ಗದ್ದಲದಿಂದ ಗಾಬರಿಗೊಂಡು ಬೊಮ್ಮಾಯಿ ಅವರನ್ನು ತಿವಿಯಲು ಮುಂದಾಯಿತು. ಸ್ಥಳದಲ್ಲೇ ಇದ್ದ ರೈತ ಎ. ಎಸ್. ಪಿ. ರಾಮ್ ಅರಸಿದ್ದಿ ಎಂಬುವವರು ತಕ್ಷಣ ಎತ್ತಿನ ಕೊಂಬನ್ನು ಹಿಡಿದು ಹಿಂದಕ್ಕೆ ಎಳೆದು ಮುಖ್ಯಮಂತ್ರಿಯವರನ್ನು ಪಾರು ಮಾಡಿದರು.