2:37 AM Thursday23 - January 2025
ಬ್ರೇಕಿಂಗ್ ನ್ಯೂಸ್
7-8 ವರ್ಷ ಕಳೆದರೂ ಹಸ್ತಾಂತರವಾಗದ ಶಾಲಾ ಕೊಠಡಿ: ಮಾಹಿತಿ ಇಲ್ಲವೆಂದ ಬಿಇಒ; ಶಿಕ್ಷಣ… ಯುನಿಸೆಕ್ಸ್ ಸೆಲೂನ್ ದಾಳಿಕೋರರ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದೇನೆ: ಉಡುಪಿಯಲ್ಲಿ ಗೃಹ ಸಚಿವ… ಏಪ್ರಿಲ್ ಅಂತ್ಯದೊಳಗೆ 3 ಸಾವಿರ ಲೈನ್ ಮೆನ್ ಗಳ ನೇಮಕ: ಬೀದರ್ ನಲ್ಲಿ… ವರ್ಷದಲ್ಲಿ 2 ಲಕ್ಷ ಅಕ್ರಮ ಪಂಪ್ ಸೆಟ್ ಗಳು ಸಕ್ರಮ: ಇಂಧನ ಸಚಿವ… ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ: ಜಿಲ್ಲೆಯ ಶಾಸಕರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಭಿನಂದನೆ ವಿಜಯಪುರ: ಫೇಕ್ ಡಾಕ್ಟರ್ ಇದ್ದಾರೆ ಎಚ್ಚರ; ನಾಲತವಾಡದಲ್ಲೂ ನಕಲಿ ವೈದ್ಯರುಗಳ ಹಾವಳಿ ಸ್ಥಳ ಮಹಜರು: ಕೋಟೆಕಾರು ದರೋಡೆ ಪ್ರಕರಣದ ಆರೋಪಿ ಪರಾರಿಗೆ ಯತ್ನ; ಪೊಲೀಸರ ಗುಂಡೇಟು,… ಕೋಟೆಕಾರು ದರೋಡೆ ಪ್ರಕರಣ: ಮಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; 3 ಮಂದಿ ಆರೋಪಿಗಳ… ಗಾಂಧಿ ಭಾರತ ಮರು ನಿರ್ಮಾಣ ಕನ್ನಡ- ಆಂಗ್ಲ ಪುಸ್ತಕ ಬಿಡುಗಡೆ: ಬೃಹತ್ ಗಾಂಧಿ… ಕಾಂತಾರ: ಚಾಪ್ಟರ್ 1 ಸಿನಿಮಾ ತಂಡ ಷರತ್ತು ಉಲ್ಲಂಘಿಸಿದರೆ ಚಿತ್ರೀಕರಣ ಸ್ಥಗಿತ: ಅರಣ್ಯ…

ಇತ್ತೀಚಿನ ಸುದ್ದಿ

ವಿಜಯಪುರ: ಫೇಕ್ ಡಾಕ್ಟರ್ ಇದ್ದಾರೆ ಎಚ್ಚರ; ನಾಲತವಾಡದಲ್ಲೂ ನಕಲಿ ವೈದ್ಯರುಗಳ ಹಾವಳಿ

22/01/2025, 21:06

ಶಿವು ರಾಠೋಡ ಹುಣಸಗಿ ವಿಜಯಪುರ

info.reporterkarnataka@gmail.com

ರಾಜ್ಯದ ಹಲವೆಡೆ ನಕಲಿ ವೈದ್ಯರ ಕಾಟ ಜಾಸ್ತಿಯಾಗಿದ್ದು,
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ‌
ನಾಲತವಾಡ ಪಟ್ಟಣದಲ್ಲಿಯೂ ಫೇಕ್ ಡಾಕ್ಟರ್ ಗಳ ಹಾವಳಿ ಹೆಚ್ಚಾಗಿದೆ.
ನಾಲತವಾಡ ಪಟ್ಟಣವು ಸುಮಾರು 20 ಸಾವಿರ ಜನಸಂಖ್ಯೆ ಹೊಂದಿದೆ.
ಈ ನಾಲತವಾಡ ಪಟ್ಟಣವು ವ್ಯಾಪಾರ ಕೇಂದ್ರವಾಗಿರುವುದರಿಂದ ಪಟ್ಟಣಕ್ಕೆ ಪ್ರತಿ ದಿನ ಸುತ್ತ-ಮುತ್ತಲಿನ ಹಳ್ಳಿಗಳಿಂದ ಸಾವಿರಾರು ಜನರು ವ್ಯಾಪಾರ ವಹಿವಾಟಿಗೆ ಪ್ರತಿದಿನ ಬರುತ್ತಾರೆ. ಅಲ್ಲದೇ ಸುತ್ತ-ಮುತ್ತ ಹಳ್ಳಿಗಳ ಜನರು ಆರೋಗ್ಯ ಸಮಸ್ಯೆ ಎಂದು ಪಟ್ಟಣಕ್ಕೆ ಆಗಮಿಸುವರು ಇದ್ದಾರೆ. ಇಷ್ಟೊಂದು ದೊಡ್ಡ ಪಟ್ಟಣದಲ್ಲಿ ಸರಕಾರಿ ಸಮುದಾಯ ಆರೋಗ್ಯ ಆಸ್ಪತ್ರೆ ಇದೆ. ಹಲವು ಖಾಸಗಿ ಆಸ್ಪತ್ರೆಗಳು ಕೂಡ ಇವೆ.
ಅದರ ನಡುವೆ ಪಟ್ಟಣದಲ್ಲಿ ನಕಲಿ ವೈದ್ಯರುಗಳ ಹಾಗೂ ಅನಧಿಕೃತ ಪ್ರಯೋಗಾಲಯಗಳ ಹಾವಳಿಯು ಕೂಡಾ ಜಾಸ್ತಿಯಾಗಿದೆ. ವೈದ್ಯಕೀಯ
ವೃತ್ತಿಗೆ ಬೇಕಿರುವ ಶಿಕ್ಷಣ ಪಡೆಯದೆ ವೃತ್ತಿ ನಡೆಸಿ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬಿರುವ ಚಿಕಿತ್ಸೆ ನೀಡಿ ಸಾರ್ವಜನಿಕರ ಜೀವನದ ಜತೆ ಚಲ್ಲಾಟವಾಡುತ್ತಿದ್ದಾರೆ.
ಇವರುಗಳ ಬಗ್ಗೆ ಧ್ವನಿ ಎತ್ತಬೇಕೆಂದು ಹಲವು ಸಂಘಟನೆಯ ಹೋರಾಟಗಾರಾದ ಮಲ್ಲಿಕಾರ್ಜುನ್ ರಾಂಪೂರ- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತಾಲೂಕು ಅಧ್ಯಕ್ಷ ಶಿವು ರಾಠೋಡ ಅವರು ತಾಲೂಕು ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಆರೋಗ್ಯಾಧಿಕಾರಿ ಡಾ. ಸತೀಶ ತಿವಾರಿ ಅವರಿಗೆ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದಾಗ ನಾಲತವಾಡ ಪಟ್ಟಣದಲ್ಲಿ ಇಂತಿಷ್ಟು ಜನ ನಕಲಿ ವೈದ್ಯರುಗಳು ಕಾರ್ಯನಿರ್ವಹಿಸುತ್ತಿರುವರು ಎಂದು ಅವರುಗಳ ಹೆಸರನ್ನು ನಮೋದಿಸಿ, ಧೃಢಿಕರಿಸಿ ಮಾಹಿತಿ ಹಕ್ಕಿನಡಿ ಮಾಹಿತಿ ನೀಡಿದ್ದಾರೆ.
…..

ಸದರಿ ಮಾಹಿತಿಯನ್ನೆ ಬೆನ್ನತ್ತಿ ಮಾನ್ಯ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಪ್ರಶ್ನೇ ಮಾಡಿ ಇವರ ವಿರುದ್ದ ಕಾನೂನು ಕ್ರಮ ಯಾಕೆ… ಕೈಗೊಂಡಿರುವದಿಲ್ಲ ಎಂದು ಪ್ರಶ್ನಿಸಿದಾಗ… ಸದರಿಯವರಿಗೆ ಇಗಾಗಲೆ ಸುಮಾರು ಸಾರಿ *ನೋಟಿಸ್* ಜಾರಿ ಮಾಡಿರುವೆವು…. ತಮ್ಮ ಕ್ಲಿನಿಕ್ ಗಳು ಅನಧಿಕೃತವಾಗುದ್ದು ತಾವು ನಕಲಿ ವೈದ್ಯರಾಗಿದ್ದು ತಮ್ಮ ಕ್ಲಿನಿಕ್ ಗಳನ್ನು ಬಂದ್ ಮಾಡಬೇಕೆಂದು ತಿಳಿಸಿರುವೆವು, ಆದರೆ ಇವರುಗಳು ಇಲ್ಲಿಯವರೆಗೆ ಬಂದ್ ಮಾಡಿರುವದಿಲ್ಲ… ನಾನೇನು ಮಾಡಲಿ ಎಂದು ಸಂಘಟನೆ ಮುಖಂಡರುಗಳಿಗೆ ಹಾರಿಕೆ ಉತ್ತರ ಕೊಟ್ಟು ಸುಮ್ಮನಾಗುತ್ತಿರುವರು….

ಇವರ ಉತ್ತರವನ್ನು ಪ್ರಶ್ನಿಸಿ *ಮಾನ್ಯ ಅಪರ ನಿರ್ದೇಶಕರು ಉತ್ತರ ಕರ್ನಾಟಕ ವಿಜಯಪುರ* ರವರಿಗೆ ನಕಲಿ ವೈದ್ಯರುಗಳ ಮೇಲೆ *ಮಾನ್ಯ ತಾಲೂಕಾ ಆರೋಗ್ಯಾಧಿಕಾರಿಗಳು* ಯಾವುದೇ ರೀತಿ ಕಾನೂನು ಕ್ರಮ ಕೈಗೊಳ್ಳದೆ… ಹಾರಿಕೆ ಉತ್ತರ ನೀಡುತ್ತಾ.. ಅವರ ಬೆಂಬಲವಾಗಿ ನಿಂತಂತೆ ಕಾಣುತ್ತದೆ ಎಂದು ತಿಳಿಸದಾಗ… *ಮಾನ್ಯ ಅಪರ ನಿರ್ದೇಶಕರು ಉತ್ತರ ಕರ್ನಾಟಕ ವಿಜಯಪುರ* ರವರು *ಮಾನ್ಯ ತಾಲುಕಾ ಆರೋಗ್ಯಾಧಿಕಾರಿಗಳು ಮುದ್ದೇಬಿಹಾಳ* ರವರಿಗೆ *ದಿನಾಂಕ……* ರಂದು ಒಂದು ಆದೇಶ ಮಾಡುವರು ಮಾನ್ಯ ತಾಲೂಕಾ ಆರೋಗ್ಯಾಧಿಕಾರಿಗಳೆ ತಾವು *ತಾಲೂಕಿನ KPME ಪ್ರಾಧಿಕಾರದ ಅಧ್ಯಕ್ಷರು* ಇರುವಿರಿ.. ಮತ್ತು ತಾವೇ ನಾಲತವಾಡ ಪಟ್ಟಣದಲ್ಲಿ ಇಂತಿಷ್ಟು ಜನ *ನಕಲಿ ವೈದ್ಯರು* ಇರುವರು ಎಂದು ಅವರ ಹೆಸರುಗಳನ್ನು *ನಮೊದಿಸಿ, ದೃಢೀಕರಿಸಿ… ಮಾಹಿತಿ ಹಕ್ಕಿನಡಿ ವರದಿ ನೀಡಿರುವಿರಿ*… ಆದ್ದರಿಂದ ಈ ಕೂಡಲೆ ಸದರಿ *ನಕಲಿ ವೈದ್ಯರುಗಳ ವಿರುದ್ದ ಸ್ಥಳೀಯ ಪೋಲಿಸ್ ಠಾಣೆಗೆ ಮಾಹಿತಿ ನೀಡಿ… ಸದರಿಯವರ ನಕಲಿ ಕ್ಲಿನಿಕ್ ಗಳನ್ನು ಬಂದ್ ಮಾಡಿಸಿದ ವರದಿಯನ್ನು ಕೂಡಲೆ ಲಿಖಿತ ರೂಪದಲ್ಲಿ ನಮ್ಮ ಕಾರ್ಯಾಲಯಕ್ಕೆ ವರದಿ ಸಲ್ಲಿಸಲು ಸೂಚಿಸಿ 6 ತಿಂಗಳ ಹಿಂದೆಯೇ ಆದೇಶ ಮಾಡಿರುವರು.*

ಆದರೆ ಮಾನ್ಯ ತಾಲೂಕಾ ಆರೋಗ್ಯಾಧಿಕಾರಿಗಳು ಮುದ್ದೇಬಿಹಾಳ ರವರು ಸದರಿ ನಕಲಿ ವೈದ್ಯರು ಗಳ ಮೇಲ ಯಾವುದೆ ಕ್ರಮ ಕೈಗೊಳ್ಳದೆ.. ಇರುವದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ…. ಸದರಿ ಅಧಿಕಾರಿಗಳು ನಕಲಿ ವೈದ್ಯರುಗಳಿಂದ ಪ್ರತಿ ತಿಂಗಳು ಮಾಮೂಲಿ ಪಡೆದುಕೊಂಡು ಅವರ ರಕ್ಷಣೆಗೆ ನಿಂತಿದ್ದಾರೆ ಎನ್ನುವ ಗುನಾಮಿಗಳು ಕೇಳಿಬರುತ್ತಿವೆ… ಈ ಬಗ್ಗೆ ಸತ್ಯಾ-ಸತ್ಯೆತೆ ಅರಿಯಬೇಕಿದೆ. ಹಾಗೂ ಮೇಲಾಧಿಕಾರಿಗಳ ಆದೇಶವನ್ನು ನಿರ್ಲಕ್ಷ ಮಾಡಿರುವದು ಮೇಲ್ನೋಟಕ್ಕೆ ಕಂಡು ಬಂದಿದೆ… ಇಂತಃ ನಿರ್ಲಕ್ಷತನದ ಅಧಿಕಾರಿಗಳಿಂದ.. ಸಾರ್ವಜನಿಕರ ಆರೋಗ್ಯದ ಮೇಲೆ ತೊಂದರೆಯಾಗುವದಕ್ಕೆ ಸದರಿ ಅಧಿಕಾರಿಗಳೆ ಕಾರಣವಾಗಿದ್ದು… ನಕಲಿ ವೈದ್ಯರುಗಳ ಮೇಲೆ ಕ್ರಮ ಆಗುವದಕಿಂತಃ ಇಂತಃ ನಿರ್ಲಕ್ಷ್ಯ ತನದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳಬೇಕೆಂಬುದು ಸಾರ್ವಜನಿಕರ ವತ್ತಾಯವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು