ಇತ್ತೀಚಿನ ಸುದ್ದಿ
ವಿದ್ಯುತ್ ಬಿಕ್ಕಟ್ಟು: 1ನೇ ಶ್ರೇಣಿ ನಗರಗಳ ಪೈಕಿ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ನಲ್ಲಿ ಇನ್ವರ್ಟರ್‌ಗಳ ಬೇಡಿಕೆ ಶೇ. 35ರಷ್ಟು ಹೆಚ್ಚಳ
12/05/2022, 22:34
* ಎಸಿಅಗಳಿಗೆ ಅಖಿಲ ಭಾರತ ಮಟ್ಟದಲ್ಲಿ ಬೇಡಿಕೆಯು ಶೇಕಡ 53 ಮತ್ತು ಇನ್ವರ್ಟರ್‌ಗಳಿಗೆ ಬೇಡಿಕೆ ಶೇಕಡ 101 ರಷ್ಟು ಹೆಚ್ಚಾಗಿದೆ
* 2ನೇ ಶ್ರೇಣಿ ನಗರಗಳು ಇನ್ವರ್ಟರ್‌ಗಳ ಹುಡುಕಾಟದಲ್ಲಿ ಶೇಕಡ 146ರಷ್ಟು ಏರಿಕೆ ಕಂಡಿವೆ.
ಬೆಂಗಳೂರು(reporterkarnataka.com): ಭಾರತವು ವಿದ್ಯುತ್ ಬಿಕ್ಕಟ್ಟಿನಿಂದ ಹೊರಬರಲು ಹೋರಾಡುತ್ತಿರುವಾಗ, ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ನಗರಗಳಲ್ಲಿ ಇನ್ವರ್ಟರ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ದೇಶದಲ್ಲಿ 1ನೇ ಶ್ರೇಣಿ ನಗರಗಳ ಒಟ್ಟು ಹುಡುಕಾಟದ ಪೈಕಿ ಈ ಮೂರು ನಗರಗಳು ಸುಮಾರು ಶೇಕಡ 35ರಷ್ಟು ಕೊಡುಗೆ ನೀಡಿವೆ ಎಂದು ಇತ್ತೀಚಿನ ಜೆಸ್ಟ್ ಡಯಲ್ ಗ್ರಾಹಕ ಒಳನೋಟಗಳ ವರದಿ ಹೇಳಿದೆ.
2022 ರ ಏಪ್ರಿಲ್‌ನಲ್ಲಿ ಎಸಿಗಳು ಮತ್ತು ಇನ್ವರ್ಟರ್‌ಗಳಿಗಾಗಿ ಅಖಿಲ ಭಾರತ ಮಟ್ಟದಲ್ಲಿ ಒಟ್ಟು ಹುಡುಕಾಟಗಳು ಶೇಕಡ 62 (ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ) ರಷ್ಟು ಹೆಚ್ಚಾಗಿದೆ ಆದರೆ ಎಸಿ ಗಳ ಬೇಡಿಕೆಯು ಜಸ್ಟ್ಡಯಲ್‌ನಲ್ಲಿ ಗಣನೀಯವಾಗಿ (3 ಪಟ್ಟು) ಅಂದರೆ ಇನ್ವರ್ಟರ್‌ಗಳಿಗಿಂತ ಅಧಿಕವಾಗಿದೆ. 2022ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಎಸಿಗಳು ಮತ್ತು ಇನ್ವರ್ಟರ್‌ಗಳ ಬೇಡಿಕೆಯಲ್ಲಿ ಶೇಕಡ 23ರಷ್ಟು ಏರಿಕೆ ಕಂಡುಬಂದಿದೆ. ತ್ರೈಮಾಸಿಕದಲ್ಲಿ ಎಸಿ ಸೇವೆಯ ಬೇಡಿಕೆಯು ಶೇಕಡ 18 ರಷ್ಟು (ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ) ಏರಿಕೆಗೆ ಸಾಕ್ಷಿಯಾಗಿದೆ.
2022 ರ ಮೊದಲ ತ್ರೈಮಾಸಿಕದಲ್ಲಿ ಭಾರತದಾದ್ಯಂತ ಇನ್ವರ್ಟರ್‌ಗಳ ಬೇಡಿಕೆಯು ಶೇಕಡ 48 ರಷ್ಟು (ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ) ಹೆಚ್ಚಾಗಿದೆ ಮತ್ತು 2022ರ ಮೊದಲ ಮೂರು ತಿಂಗಳಲ್ಲಿ ಶೇಕಡ 100ರಷ್ಟು ಅಧಿಕವಾಗಿದೆ. 1ನೇ ಶ್ರೇಣಿಯ ನಗರಗಳಿಗೆ ಹೋಲಿಸಿದರೆ ಭಾರತದ 2ನೇ ಶ್ರೇಣಿ ಶ್ರೇಣಿ ನಗರಗಳಲ್ಲಿ ಇನ್ವರ್ಟರ್‌ಗಳ ಬೇಡಿಕೆ ಬೆಳವಣಿಗೆ ದರವು ಗಣನೀಯವಾಗಿ ಹೆಚ್ಚಿದೆ. ಶ್ರೇಣಿ-2
ನಗರಗಳು 2022 ರ ತ್ರೈಮಾಸಿಕದಲ್ಲಿ ಶೇಕಡ 75 ರಷ್ಟು ಬೇಡಿಕೆಯನ್ನು ಕಂಡವು ಮತ್ತು 2022ರ ಏಪ್ರಿಲ್‌ನಲ್ಲಿ ಇದು ಶೇಕಡ 146ರಷ್ಟು ಏರಿಕೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, 2022ನೆ ಮೊದಲ ತ್ರೈಮಾಸಿಕದಲ್ಲಿ 1ನೇ ಶ್ರೇಣಿಯ ನಗರಗಳಲ್ಲಿ ಇನ್ವರ್ಟರ್‌ಗಳ ಬೇಡಿಕೆಯು ಸ್ಥಿರವಾಗಿದೆ ಆದರೆ ಏಪ್ರಿಲ್’22 ರಲ್ಲಿ ಅದು ಶೇಕಡ 19 ರಷ್ಟು ಹೆಚ್ಚಾಗಿದೆ.
ಈ ಪ್ರವೃತ್ತಿಯ ಕುರಿತು ಪ್ರತಿಕ್ರಿಯಿಸಿದ ಜೆಸ್ಟ್ ಡಯಲ್ ಸಿಎಂಒ ಪ್ರಸೂನ್ ಕುಮಾರ್ ಅವರು, “ಬೇಡಿಕೆಯಲ್ಲಿ ಗಣನೀಯ ಹೆಚ್ಚಳವು ನಮ್ಮ ನೆರೆ ಹೊರೆಯ ಇ-ಕಾಮರ್ಸ್ ಪರಿಸರದಲ್ಲಿ ಉತ್ತಮವಾಗಿ ನಿಂತಿದ್ದು, ಜೆಸ್ಟ್ ಡಯಲ್ ಇದರ ಪರವಾಗಿ ನಿಂತಿದೆ ಮತ್ತು ಸಶಕ್ತಗೊಳಿಸಿದೆ. ಹೊಸ ಗ್ರಾಹಕರು ಮತ್ತು ಆದಾಯವನ್ನು ತರಲು ಸ್ಥಳೀಯ ಅಂಗಡಿಗಳು ಮತ್ತು ನೆರೆಹೊರೆಯ ಅಂಗಡಿಗಳು ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದನ್ನು ನಾವು ಹೆಚ್ಚಾಗಿ ನೋಡುತ್ತಿದ್ದೇವೆ. ಪ್ಲಾಟ್‌ಫಾರ್ಮ್ನಲ್ಲಿ ಎಲೆಕ್ಟ್ರಾನಿಕ್ ಸರಕುಗಳ ಎಲ್ಲ ವಿತರಕರನ್ನು ಒಟ್ಟುಗೂಡಿಸಲು ನಾವು ಪ್ರಯತ್ನಿಸಿದ್ದೇವೆ, ನಮ್ಮ ಗ್ರಾಹಕರಿಗೆ ತಿಳುವಳಿಕೆಯುಳ್ಳ ಆಯ್ಕೆಯನ್ನು ತೆಗೆದುಕೊಳ್ಳಲು ಮತ್ತು ಉತ್ತಮ ವ್ಯವಹಾರವನ್ನು ಪಡೆಯಲು ಅನುವು ಮಾಡಿಕೊಡುತ್ತದೆ” ಎಂದು ಹೇಳಿದರು.
ಇನ್ವರ್ಟರ್‌ಗಳಿಗಾಗಿ, ದೆಹಲಿಯು ಶ್ರೇಣಿ-1 ನಗರಗಳಲ್ಲಿ ಗರಿಷ್ಠ ಬೇಡಿಕೆಯನ್ನು ಸೃಷ್ಟಿಸಿದೆ, ಒಟ್ಟು ಹುಡುಕಾಟಗಳಲ್ಲಿ ಶೇಕಡ 28 ರಷ್ಟು ಕೊಡುಗೆಯನ್ನು ದಹೆಲಿ ನೀಡಿದರೆ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರು ಶೇಕಡ
35ರಷ್ಟು ಹುಡುಕಾಟಗಳನ್ನು ಮಾಡಿದೆ. 2ನೇ ಶ್ರೇಣಿ ನಗರಗಳ ಪೈಕಿ ಜೈಪುರ, ಚಂಡೀಗಢ, ಲಕ್ನೋ, ಸೂರತ್, ಲುಧಿಯಾನ, ಕಾನ್ಪುರ್, ವಡೋದರಾ, ಇಂದೋರ್, ರಾಜ್‌ಕೋಟ್ ಮತ್ತು ವಿಜಯವಾಡ ನಗರಗಳಿಂದ ಗರಿಷ್ಠ ಹುಡುಕಾಟಗಳೊಂದಿಗೆ ಇನ್ವರ್ಟರ್‌ಗಳ ಬೇಡಿಕೆಯಲ್ಲಿ ಶೇಕಡ 146 ರಷ್ಟು ಜಿಗಿತವನ್ನು ಕಂಡಿವೆ.
ಎಸಿಗಳಿಗೆ ಅಖಿಲ ಭಾರತ ಮಟ್ಟದಲ್ಲಿ ಬೇಡಿಕೆಯು ಶೇಕಡ 53 ರಷ್ಟು ಮತ್ತು ಇನ್ವರ್ಟರ್‌ಗಳ ಬೇಡಿಕೆಯು ಶೇಕಡ 101 ರಷ್ಟು ಹಾಗೂ ಎಸಿ ಸೇವೆಯ ಬೇಡಿಕೆ ಶೇಕಡ 54ರಷ್ಟು ಹೆಚ್ಚಿದೆ. ವೋಲ್ಟಾಸ್, ಡೈಕಿನ್, ಬ್ಲೂ ಸ್ಟಾರ್, ಓ ಜನರಲ್, ಮಿತ್ಸುಬಿಷಿ ಎಲೆಕ್ಟ್ರಿಕ್, ಹಿಟಾಚಿ, ಎಲ್‌ಜಿ ಮತ್ತು ಲಾಯ್ಡ್ಗಳು ದೇಶದಲ್ಲಿ ಹೆಚ್ಚು ಬೇಡಿಕೆಯಿರುವ ಟಾಪ್- 10 ಎಸಿ ಬ್ರ‍್ಯಾಂಡ್‌ಗಳಾಗಿವೆ. ಇನ್ವರ್ಟರ್‌ಗಳಲ್ಲಿ, ಲುಮಿನಸ್, ಮೈಕ್ರೊಟೆಕ್, ವಿ ಗಾರ್ಡ್, ಸು-ಕಾಮ್, ಜೆನಸ್, ಎಕ್ಸೈಡ್, ಅಮರೋನ್, ಯುಟಿಎಲ್, ಎಪಿಸಿ ಮತ್ತು ಸ್ಮಾರ್ಟೆನ್ ಜಸ್ಟ್ಡಿಯಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ಬ್ರ‍್ಯಾಂಡ್‌ಗಳಾಗಿವೆ.
1ನೇ ಶ್ರೇಣೀ ನಗರಗಳಲ್ಲಿ, ಏಪ್ರಿಲ್’22 ರಲ್ಲಿ ಎಸಿಗಳ ಬೇಡಿಕೆಯು ಶೇಕಡ 30 ರಷ್ಟು ಏರಿಕೆಯಾಯಿತು, ದೆಹಲಿಯು ಸುಮಾರು ಶೇಕಡ 46 ರಷ್ಟು ಹುಡುಕಾಟಗಳನ್ನು ಸೃಷ್ಟಿಸುವ ಮೂಲಕ ಮುಂಚೂಣಿಯಲ್ಲಿದ್ದರೆ, ಮುಂಬೈ, ಅಹಮದಾಬಾದ್ ಮತ್ತು ಹೈದರಾಬಾದ್ ಒಟ್ಟಾಗಿ ಶೇಕಡ 36 ರಷ್ಟು ಕೊಡುಗೆ ನೀಡಿವೆ. 2ನೇ ಶ್ರೇಣಿ ಪಟ್ಟಣಗಳು ಮತ್ತು ನಗರಗಳಲ್ಲಿ ಎಸಿಗಳಿಗಾಗಿ ಹುಡುಕಾಟಗಳು, 2022ರ ಏಪ್ರಿಲ್ ಅವಧಿಯಲ್ಲಿ ಶೇಕಡ 77 (ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ) ಮತ್ತು 2022ರ ಮೊದಲ ತ್ರೈಮಾಸಿಕದಲ್ಲಿ ಶೇಖಡ 23 (ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ) ರಷ್ಟು ಏರಿಕೆಯಾಗಿದೆ. ಜೈಪುರ, ಚಂಡೀಗಢ, ಲಕ್ನೋ, ಸೂರತ್, ಲೂಧಿಯಾನ, ಕಾನ್ಪುರ, ವಡೋದರಾ, ಇಂದೋರ್, ರಾಜ್‌ಕೋಟ್ ಮತ್ತು ವಿಜಯವಾಡಗಳು ಟಾಪ್-10, 2ನೇ ಶ್ರೇಣಿ ನಗರಗಳಾಗಿವೆ. ಈ ನಗರಗಳು ಎಸಿಗಳಿಗೆ ಗರಿಷ್ಠ ಬೇಡಿಕೆಯನ್ನು ಹೊಂದಿವೆ. ವೋಲ್ಟಾಸ್ ಶ್ರೇಣಿ-2 ನಗರಗಳಲ್ಲಿ ಹೆಚ್ಚು ಹುಡುಕಲ್ಪಟ್ಟ ಬ್ರ‍್ಯಾಂಡ್ ಆದರೆ ಶ್ರೇಣಿ-1ನಗರಗಳಲ್ಲಿ ಡೈಕಿನ್ ಶೇಕಡ 30 ಹೆಚ್ಚಿನ ಹುಡುಕಾಟಗಳೊಂದಿಗೆ ವೋಲ್ಟಾಸ್‌ಗಿಂತ ಮುಂದಿದೆ.
ಎಸಿ ಸೇವೆಯ ಬೇಡಿಕೆಯು 2022ರ ಏಪ್ರಿಲ್ ಅವಧಿಯಲ್ಲಿ ಶೇಕಡ 53 ಮತ್ತು ಶ್ರೇಣಿ-1 ನಗರಗಳಲ್ಲಿ 2022ರ ಅವಧಿಯಲ್ಲಿ ಶೇಕಡ 11
ರಷ್ಟು ಏರಿಕೆಯಾಗಿದೆ. ದೆಹಲಿ ಮತ್ತು ಹೈದರಾಬಾದ್ ಮೂರನೇ ಸ್ಥಾನದಲ್ಲಿರುವ ಮುಂಬೈ ನಂತರದ ಸ್ಥಾನಗಳಲ್ಲಿವೆ. ಶ್ರೇಣಿ -1 ನಗರಗಳಲ್ಲಿ ಎಸಿ ಸೇವೆಯ ಬೇಡಿಕೆಯ ಸುಮಾರು ಶೇಕಡ. 46 ರಷ್ಟು ಗೆ ಕೊಡುಗೆ ನೀಡಿವೆ. ಶ್ರೇಣಿ-2 ಪಟ್ಟಣಗಳು ಮತ್ತು ನಗರಗಳಲ್ಲಿ, 2022ರ ಏಪ್ರಿಲ್ ಬೇಡಿಕೆಯು ಶೇಕಡ 61 ರಷ್ಟು ಮತ್ತು ಹಣಕಾಸು ವರ್ಷ ’22 ತ್ರೈಮಾಸಿಕದಲ್ಲಿ ಶೇಖಡ 28 ಆಗಿತ್ತು. ಜೈಪುರ, ಚಂಡೀಗಢ, ಲಕ್ನೋ, ಸೂರತ್, ಲುಧಿಯಾನ, ಕಾನ್ಪುರ್, ವಡೋದರಾ, ಇಂದೋರ್, ರಾಜ್‌ಕೋಟ್ ಮತ್ತು ವಿಜಯವಾಡಗಳು ಗರಿಷ್ಠ ಬೇಡಿಕೆಯನ್ನು ಹೊಂದಿರುವ ಟಾಪ್-10 ಶ್ರೇಣಿ-2 ನಗರಗಳಾಗಿವೆ.