ಇತ್ತೀಚಿನ ಸುದ್ದಿ
ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ: 11 ದಲಿತ ಸಂಘಟನೆಗಳಿಂದ 11 ಕಿಮೀ. ಕಾಲ್ನಡಿಗೆ ಜಾಥಾ
21/09/2021, 09:10
ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ಶ್ರೀನಿವಾಸಪುರ ತಾಡಿಗೋಳ್ ಬಳಿ ವಿದ್ಯಾರ್ಥಿನಿಯರ ಮೇಲೆ ನಡೆದ ಹಲ್ಲೆ
ಘಟನೆಯನ್ನು ಖಂಡಿಸಿ ಸೋಮವಾರ 11 ದಲಿತ ಸಂಘಟನೆಗಳ ಕಾರ್ಯಕರ್ತರು 11 ಕಿ.ಮೀಟರ್ ಕಾಲ್ನಡಿಗೆ ಜಾಥಾ ನಡೆಸಿದರು.
ಮತ್ತೊಂದು ಬಾರಿ ಯಾವ ಹೆಣ್ಣು ಮಗುವಿನ ಮೇಲೆಯೂ ಈ ರೀತಿಯ ದಬ್ಬಾಳಿಕೆ , ದೌರ್ಜನ್ಯ ನಡೆಯಬಾರದು ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ಬೃಹತ್ ಶಕ್ತಿ ಪ್ರದರ್ಶನ ನಡೆಸಿದರು. ಬೆಳಿಗ್ಗೆ 10 ಗಂಟೆಗೆ ತಾಡಿಗೋಲ್ ಗ್ರಾಮದಿಂದ ಹೊರಟ ದಲಿತ ಸಂಘಟನೆಗಳ ನೂರಾರು ಕಾರ್ಯಕರ್ತರು ಜಾಥಾ ಹಮ್ಮಿಕೊಂಡರು. ರಸ್ತೆಯುದ್ದಕ್ಕೂ ಜಾಥಾದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಬಂದ ದಲಿತ ಸಂಘಟನೆಗಳ ಮುಖಂಡರುಗಳು ಸಾಥ್ ನೀಡಿದರು.
ಕೋಲಾರ ಮದನಪಲ್ಲಿ ರಸ್ತೆ ಮೂಲಕ ಜಾಥ ಸಾಗಿ ಬರುತ್ತಿದ್ದಾಗ ಟ್ರಾಫಿಕ್ ಜಾಮ್ ಆಗದಂತೆ ಪೊಲೀಸರು ಹರಸಾಹಸ ಪಡುತ್ತಿದ್ದರು.
ಶ್ರೀನಿವಾಸಪುರಕ್ಕೆ ಜಾಥಾ ಬರುವೊಳಗಾಗಿ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಜಮಾ ಆದರು. ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿಯ ತನಕ ಬೃಹತ್ ಪ್ರತಿಭಟನೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಈ ಎರಡು ಸರ್ಕಾರಗಳನ್ನು ಕಿತ್ತೊಗೆಯ ತನಕ ನಮ್ಮ ಮೇಲೆ ದೌರ್ಜನ್ಯಗಳು ನಡೆಯುತ್ತಲೆ ಇರುತ್ತವೆ. ಮುಂದಿನ ದಿನಗಳಲ್ಲಿ ಇದಕ್ಕೆ ಒಂದು ಇತಿಶ್ರೀ ಹಾಡಲೇಬೇಕು ದಲಿತ ಮುಖಂಡರಿಂದ ಕೇಳಿ ಬರುತ್ತಿತ್ತು . ರಸ್ತೆಯುದ್ದಕ್ಕೂ ಕ್ರಾಂತಿಗೀತೆಗಳನ್ನು ಹಾಡುತ್ತಾ ತಮಟೆ ವಾದ್ಯಗಳ ಸದ್ದು ಕೇಳಿ ಬರುತ್ತಿತ್ತು .