ಇತ್ತೀಚಿನ ಸುದ್ದಿ
ವಿದೇಶಕ್ಕೆ ಪ್ರಯಾಣಿಸುವ ಭಾರತೀಯರಿಗೆ ಶೀಘ್ರವೇ 3ನೇ ಡೋಸ್ ಕೋವಿಡ್ ಲಸಿಕೆ
13/05/2022, 07:54
ಹೊಸದಿಲ್ಲಿ(reporterkarnataka.com)
ಭಾರತದಿಂದ ವಿದೇಶಕ್ಕೆ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ನಾಗರೀಕರು ಶೀಘ್ರವೇ ಕೋವಿಡ್ ಲಸಿಕೆಯ ಮೂರನೇ ಡೋಸ್ ಪಡೆಯಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ತಾವು ಹೋಗಬೇಕಾಗಿರುವ ದೇಶಗಳಲ್ಲಿನ ಮಾರ್ಗಸೂಚಿಗಳಿಗೆ ಅನುಗುಣವಾಗಿ ವಿದೇಶಕ್ಕೆ ಪ್ರಯಾಣಿಸುವ ಭಾರತೀಯರು ಮೂರನೇ ಡೋಸ್ ಲಸಿಕೆ ಪಡೆಯಬಹುದಾಗಿದ್ದು ಶೀಘ್ರವೇ ಕೋವಿನ್ ವೆಬ್ ಸೈಟ್ ನಲ್ಲಿ ಈ ವ್ಯವಸ್ಥೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಎರಡನೇ ಡೋಸ್ ಪಡೆದು ಒಂಭತ್ತು ತಿಂಗಳು ಪೂರ್ಣವಾಗಿರುವ 18 ವರ್ಷ ಮೇಲ್ಪಟ್ಟವರು ಮಾತ್ರ ಮೂರನೇ ಡೋಸ್ ಪಡೆಯಬಹುದು ಎಂದು ಸೂಚಿಸಲಾಗಿತ್ತು. ಆದರೆ ಈಗ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದ್ದು ವಿದೇಶಕ್ಕೆ ಪ್ರಯಾಣಿಸುವವರು ಮೂರನೇ ಡೋಸ್ ಪಡೆಯಬಹುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ.