7:41 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ವೀರ ಸ್ವಾತಂತ್ರ್ಯ ಹೋರಾಟಗಾರನ ವೀರಸೌಧ ಸ್ಮಾರಕಕ್ಕೆ ಕಾಯಕಲ್ಪ: ಶಾಸಕ ಟಿ.ರಘುಮೂರ್ತಿ ಸಂಕಲ್ಪ

24/01/2022, 09:28

ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com

ವೀರ ಸ್ವಾತಂತ್ರ್ಯ ಹೋರಾಟಗಾರನ ವೀರಸೌಧ ಸ್ಮಾರಕಕ್ಕೆ ಕಾಯಕಲ್ಪ ನೀಡಲು ಶಾಸಕ ಟಿ.ರಘುಮೂರ್ತಿ ಮುಂದಾಗಿದ್ದಾರೆ.

ಹೌದು ಚಳ್ಳಕೆರೆ ನಗರದ ಬ್ರೀಟೀಷರ ಕಾಲದಲ್ಲಿ ನಿರ್ಮಿಸಿದ್ದ ಹಳೆ ತಾಲೂಕು ಕಚೇರಿ ಮುಂಭಾಗದಲ್ಲಿ ಬ್ರೀಟಿಷ್ ಸರಕಾರ ರೈತರಿಂದ ವಸೂಲಿ ಮಾಡಿದ್ದ ಕಂದಾಯವನ್ನು ಮರಳಿ ರೈತರಿಗೆ ತಲುಪಿಸುವ ಯೋಜನೆ ರೂಪಿದ್ದರು. ಅದರಂತೆ ಅರ್ಥಂಸುಬ್ಬಯ್ಯಶೆಟ್ಟಿ ಹೋರಾಟಗಾರೊಂದಿಗೆ ಬ್ರಿಟಿಸ್  ಆಳ್ವಿಕೆಯ ಕಾಲದಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಚಳುವಳಿಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅನೇಕ ಜನರು ಪಾಲ್ಗೊಂಡಿದ್ದರು. 

ಬ್ರಿಟೀಸ್ ಅಧಿಕಾರಿಗಳು ಹೋರಾಟಗಾರ ಮೇಲೆ ಗೋಲಿ ಬಾರ್ ಹಾಗೂ ಗುಂಡಿನ  ದಾಳಿ ಮಾಡಲು ಮುಂದದಾಗ ಚಳುವಳಿಯಲ್ಲಿ ಭಾಗವಹಿಸಿದ್ದ ಅನೇಕ ಜನರು ಗುಂಡಿನ ಸದ್ದಿಗೆ ಲಾಟಿ ಏಟಿಗೆ ಭಯಬೀತರಾಗಿ ಕಾಲ್ಕಿತ್ತರು. ಆದರೆ ಅರ್ಥಂಸುಬ್ಬಯ್ಯಶೆಟ್ಟಿ ಮತ್ತಿಬ್ಬರು ಜಾಗ ಬಿಡದೆ ಬ್ರಿಟೀಷರ ಗುಂಡಿನ ದಾಳಿಗೆ ಸಿಲುಕಿದರು.

ಅರ್ಥಂಸುಬ್ಬಯ್ಯಶೆಟ್ಟಿ ಸ್ಥಳದಲ್ಲೇ ಮೃತ ಪಟ್ಟರೆ ಇನ್ನಿಬ್ಬರು ಹೆಚ್ಚಿನ ಚಿಕಿತ್ಸೆಗಾಗಿ ಚಿಲ್ಲಾ ಆಸ್ಪತ್ರೆಗೆ ಸೇರಿಸಿದಾಗ ಚಿಕಿತ್ಸೆ ಫಲಕಾರಿಯಾದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರು  ಎನ್ನಲಾಗಿದೆ. ಇವರ ನೆನಪಿಗಾಗಿ 25 ನೇ ಸ್ವಾತಂತ್ರ್ಯೋತ್ಸವದ ವರ್ಷದ ಅಂಗವಾಗಿ 1972 ರಲ್ಲಿ ಹಳೆ ತಾಲೂಕು ಕಚೇರಿ ಮುಂಭಾಗದಲ್ಲಿ ಕೇಂದ್ರ ಸರಕಾರ 10 ಅಡಿ ಎತ್ತರದ ಸ್ಮಾರಕವನ್ನು 1973 ರಲ್ಲಿ ಅನಾವರಣಗೊಳಿಸಿ, ಅರ್ಥಂ ಸುಬ್ಬಯ್ಯಶೆಟ್ಟಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ ಎಂಬ ಸ್ಮಾರಕ ಕಂಬವನ್ನು ನೆಟ್ಟು ಕೈತೊಳೆದುಕೊಂಡಿತ್ತು. 

ಅರ್ಥಂ ಸುಬ್ಬಯ್ಯಶೆಟ್ಟಿ ಮಗ ರಾಮಕೃಷ್ಣಶೆಟ್ಟಿ ಸ್ಮಾರಕದ ಸುತ್ತ ಕಟ್ಟೆ ನಿರ್ಮಿಸಿ ಗ್ರಿಲ್ ಅಳವಡಿಸಿ ಪ್ರತಿ ತಿಂಗಳು ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಕುಟುಂಬಸ್ಥರು ಪೂಜೆ ಸಲ್ಲಿಸುತ್ತಾರೆ, ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ  ಸ್ವಾತಂತ್ರ್ಯ ಯೋಧರ ಸ್ಮಾರಕಕ್ಕೆ ಪೂಜೆ ಸಲ್ಲಿಸದೆ ನಿರ್ಲಕ್ಷ ತೋರುತ್ತಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದವು.

ಶಾಸಕ ಟಿ.ರಘುಮೂರ್ತಿ ಬ್ರಿಟಿಸ್ ಕಾಲದ ಶಿಥಿಲವಾದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಸುಮಾರು 12.5 ಕೋಟಿ ವೆಚ್ಚದ ಅನುದಾನದಲ್ಲಿ ಸುಸಜ್ಜಿತ ಹಾಗೂ ಹೈಟೆಕ್ ಮಿನಿ ವಿಧಾನ ಸೌದಕಟ್ಟಡವನ್ನು ನಿರ್ಮಿಸಿರುವ ಕಾರಣ ಮುಖ್ಯ ರಸ್ತೆಯಿಂದ ಮಿನಿವಿಧಾನಸೌದದವರೆಗೆ   ದ್ವಿಪಥ

 ರಸ್ತೆ ನಿರ್ಮಾಣ ಮಾಡುವ ಉದ್ದೇಶದಿಂದ ಸ್ಮರಕವನ್ನು ಇರುವ ಸ್ಥಳದಲ್ಲಿ ಮಾರುದ್ದ ಸ್ಥಳಾಂತರಿಸಿ ಸ್ಮಾರಕದ ಸುತ್ತ ಉಧ್ಯಾನವನ, ಸಾರ್ವಜನಿಕರು ಕುಳಿತು ಕೊಂಡು ವಿಶ್ರಾಂತಿ ಪಡೆಯಲು ಹಾಸನಗಳ ವ್ಯವಸ್ಥೆ ಕಲ್ಲಿಸುವ ಮೂಲಕ  ಸ್ವತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ವೀರಮರಣ ಹೊಂದಿದ ಅರ್ಥಂ ಸುಬ್ಬಯ್ಯಶೆಟ್ಟಿ ವೀರಸ್ವಾತಂತ್ರ ಹೋರಾಟಗಾರನ ಸ್ಮಾರಕಕ್ಕೆ ಹೊಸ ರೂಪ ನೀಡಲು ಶಾಸಕ ಟಿ. ರಘುಮೂರ್ತಿ ಮುಂದಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು