ಇತ್ತೀಚಿನ ಸುದ್ದಿ
ವರ ಮಹಾಲಕ್ಷ್ಮಿ ಹಬ್ಬ: ಉಜ್ಜಿನಿಯಲ್ಲಿ ನೂರಾರು ಮುತ್ತೈದೆಯರ ಉಡಿ ತುಂಬಿದ ಜಗದ್ಗುರುಗಳು
21/08/2021, 17:23
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆ ಶ್ರೀಮದ್ ಉಜ್ಜಿಯನಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ, ಶ್ರೀ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶ್ರೀಮದ್ ಉಜ್ಜಿಯನಿ ಜಗದ್ಗುರುಗಳವರ ಸಾನಿಧ್ಯದಲ್ಲಿ ನೂರಾರು ಮುತ್ತೈದೆಯರಿಗೆ “ಉಡಿ ತುಂಬುವ ಕಾರ್ಯಕ್ರಮ” ನಡೆಯಿತು.
ಈ ಸಂದರ್ಭದಲ್ಲಿ ಧಾರ್ಮಿಕ ಶ್ರದ್ಧಾವಂತರು ಹಾಗೂ ಮಠದ ಭಕ್ತಮಂಡಳಿಯವರು ಉಪಸ್ಥಿತರಿದ್ದರು.ಕೋವಿಡ್ ನಿಯಮಗಳನ್ನು ಪಾಲಿಸಲಾಯಿತು. ಈ ಮೂಲಕ ಸ್ವಾಮೀಜಿಗಳ ಆಶೀರ್ವಾದ ಪಡೆದರು.