4:26 AM Thursday12 - March 2026
ಬ್ರೇಕಿಂಗ್ ನ್ಯೂಸ್
ವಿವಿಧ ಬೇಡಿಕೆ ಆಗ್ರಹಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಫ್ರೀಡಂ… ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್‌: ಮೌಲ್ಯ 10 ಪಟ್ಟು ಹೆಚ್ಚು,… ಪೆಟಾ ಮೇಲ್ಮನವಿ ವಜಾ: ರಾಜ್ಯದೆಲ್ಲೆಡೆ ಕಂಬಳ ಆಯೋಜನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನಿಗಮಗಳಿಗೆ ಅನುದಾನ ಕಡಿತ, ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕೆ ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ

ಇತ್ತೀಚಿನ ಸುದ್ದಿ

ವಂಚನೆ ಆರೋಪ: ಬಾಲಿವುಡ್ ನಟಿ, ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿಗೆ ಬಂಧನ ಭೀತಿ?

10/08/2021, 08:48

ಮುಂಬೈ(reporterkarnataka.com): ಬಾಲಿವುಡ್ ಖ್ಯಾತ ನಟಿ, ಕರಾವಳಿ ಮೂಲದ ಬೆಡಗಿ ಶಿಲ್ಪಾ ಶೆಟ್ಟಿ ಹಾಗೂ ಅವರ ತಾಯಿ ಸುನಂದಾ ಶೆಟ್ಟಿ ಅವರಿಗೆ ಬಂಧನ ಭೀತಿ ಎದುರಾಗಿದೆ. ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪದಲ್ಲಿ ತಾಯಿ- ಮಗಳನ್ನು ಬಂಧಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಶಿಲ್ಪಾ ಶೆಟ್ಟಿ ಅವರು ನಡೆಸುತ್ತಿರುವ ಇವೋಸಿಸ್​ ವೆಲ್​ನೆಸ್​ ಫಿಟ್ನೆಸ್​ ಕೇಂದ್ರವೇ ಅವರಿಗೆ ಉರುಳಾಗಿ ಪರಿಣಮಿಸಿದೆ. ಫಿಟ್ನೆಸ್ ಕೇಂದ್ರಕ್ಕೆ ಶಿಲ್ಪಾ ಶೆಟ್ಟಿ ಮುಖ್ಯಸ್ಥೆ. ತಾಯಿ ಸುನಂದಾ ಅವರು ನಿರ್ದೇಶಕಿ ಆಗಿದ್ದಾರೆ. ಅದರ ಶಾಖೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ತೆರೆಯುವುದಾಗಿ ಹೇಳಿ ಇಬ್ಬರು ವ್ಯಕ್ತಿಗಳಿಂದ ಕೋಟ್ಯಂತರ ರೂಪಾಯಿ ಪಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ಜೋಸ್ನಾ ಚೌಹಾಣ್​ ಮತ್ತು ರೋಹಿತ್​ ವೀರ್​ ಸಿಂಗ್​ ಎಂಬುವವರು ಲಖನೌನ ಹಜರತ್​ಗಂಜ್​ ಮತ್ತು ವಿಭೂತಿ ಖಂಡ್​​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಸಲು ಲಖನೌ ಪೊಲೀಸರು ಮುಂಬೈಗೆ ಆಗಮಿಸಿದ್ದಾರೆ ಎಂಬ ಮಾಹಿತಿ ಇದೆ. ಆರೋಪಕ್ಕೆ ಸಂಬಂಧಿಸಿದ್ದಂತೆ ಮೇಲ್ನೋಟಕ್ಕೆ ಸಾಕ್ಷ್ಯ ಗಳು ದೊರೆತರೆ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ನೀಲಿ ಚಿತ್ರ ತಯಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರು ಈಗಾಗಲೇ ಜೈಲಿನಲ್ಲಿದ್ದಾರೆ. 

ಜುಲೈ 19 ರಂದು ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು