9:21 PM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ವೈದ್ಯೋ ನಾರಾಯಣೋ ಹರಿಃ: ಇದಕ್ಕೆ ತಕ್ಕ ಹೆಸರು ಮಂಗಳಾ ಆಸ್ಪತ್ರೆಯ ಸಂಸ್ಥಾಪಕ ಡಾ. ಗಣಪತಿ

01/07/2021, 11:57

ಏಪ್ರಿಲ್ 28, 2021ರ ಬುಧವಾರ ರಾತ್ರಿ 11ರ ಸಮಯ. ಸುಮಾರು ದಿನಗಳಿಂದ ಜ್ವರ ಮೈಕೈನೋವು ಎಂದು ಚಡಪಡಿಸುತ್ತಿದ್ದ ನನ್ನ ಪತ್ನಿ ಹಾಗೂ ಮಗ ಇಬ್ಬರಿಗೂ ಅಂದು ತಡೆಯಲಾರದ ವೇದನೆ. ಇದು ಕೋವಿಡ್ ಎಂದು ಆಗಲೇ ತಿಳಿದಿದ್ದ ನಮಗೆ ಗಾಬರಿ. ಮನೆಯಲ್ಲಿ ಚಿಕ್ಕಮಕ್ಕಳು.  ಸಣ್ಣ ಊರುಗಳಲ್ಲಿ ಸರಿಯಾದ ವ್ಯವಸ್ಥೆ ಇರದ ಕಾರಣ, ದೂರದ ಮಂಗಳೂರು/ ಮಣಿಪಾಲವೇ ಗತಿ. ಆಗ ನಮಗೆ ಸಹಾಯಕ್ಕೆ ಬಂದವರು ಮಂಗಳೂರಿನ ಪ್ರಸಿದ್ಧ, ಮಂಗಳ ಆಸ್ಪತ್ರೆ ಮತ್ತು ಕಿಡ್ನಿ ಫೌಂಡೇಶನ್ ನ ಸಂಸ್ಥಾಪಕರಾದ ಡಾ। ಗಣಪತಿ. ವಿಷಯ ತಿಳಿದ ಕೂಡಲೇ ತಮ್ಮ ಸಂಸ್ಥೆಯ ಅಂಬುಲೆನ್ಸ್ ಅನ್ನು ಕಾರ್ಕಳದಲ್ಲಿರುವ ನಮ್ಮ ಮನೆಗೆ ಕಳುಹಿಸಿ ಆಸ್ಪತ್ರೆಗೆ ದಾಖಲಿಸಿ ನುರಿತ ವೈದ್ಯರ ತಂಡದ ಸಹಾಯದೊಂದಿಗೆ ಸೂಕ್ತ ಚಿಕಿತ್ಸೆಯನ್ನು ಕೊಟ್ಟರು. ತೀವ್ರ ನಿಗಾ ವಹಿಸಿದ ಪರಿಣಾಮ, ಕೇವಲ ಎರಡೇ ದಿನಗಳಲ್ಲಿ ಸೋಂಕು ಕಡಿಮೆಯಾಯಿತು. ನನ್ನಂತಹ  ಸಾವಿರಾರು ಫಲಾನುಭವಿಗಳ ಭಾವನೆಗಳ ಸಂಕೇತವಾಗಿರುವ ಈ ನಮನಗಳು ಡಾ. ಗಣಪತಿ ಹಾಗೂ ಅವರ ಎಲ್ಲ ಸಿಬ್ಬಂದಿ ವರ್ಗಕ್ಕೆ  ಹಾಗೂ ಸಮಸ್ತ ವೈದ್ಯ ಲೋಕಕ್ಕೆ ಸಮರ್ಪಿತ. 

ವೈದ್ಯೋ ನಾರಾಯಣೋ ಹರಿಃ 

ಇತ್ತೀಚಿನ ಸುದ್ದಿ

ಜಾಹೀರಾತು