12:29 PM Friday20 - February 2026
ಬ್ರೇಕಿಂಗ್ ನ್ಯೂಸ್
ಐರ್ಲೆಂಡ್‌ನಲ್ಲಿ ಕಡಬ ಕುಟ್ರುಪಾಡಿಯ ಯುವಕ ನಿಗೂಢವಾಗಿ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಶವ… Kodagu | ಸಿದ್ದಾಪುರ: ಟ್ರ್ಯಾಕ್ಟರ್ ಮಗುಚಿ ಬಾದಾಮಿಯ ಕಾರ್ಮಿಕ ದುರ್ಮರಣ Kodagu | ಸಿದ್ದಾಪುರ ಬಳಿ ಕಾರು ಮೇಲೆ ಕಾಡಾನೆ ದಾಳಿ: ಜಖಂ ಕುಖ್ಯಾತ ರೌಡಿ ಶೀಟರ್ ಸಫ್ವಾನ್ ಬಂಧನ: ಮಂಗಳೂರು ಸಿಸಿಬಿ ಪೊಲೀಸರಿಂದ 26 ಪ್ರಕರಣಗಳ… ಆಗುಂಬೆ ಬಸ್ ನಿಲ್ದಾಣ ಬಳಿ ಎರಡು ಪ್ರತ್ಯೇಕ ಅಪಘಾತ: ಇಬ್ಬರಿಗೆ ಗಾಯ ಪ್ರೇಮಿಗಳ ದಿನಾಚರಣೆಯ ಎಫೆಕ್ಟ್ ?: ಪ್ರೇಮ ನಿವೇದನೆ ಒಪ್ಪಿಕೊಳ್ಳದ ಯುವತಿಗೆ ಬಿಯರ್ ಬಾಟ್ಲಿಯಿಂದ… ಕೊಪ್ಪಳದಲ್ಲಿ ವಿದೇಶಿ ಮಹಿಳೆಯ ಅತ್ಯಾಚಾರ, ಕೊಲೆ ಪ್ರಕರಣ: 3 ಮಂದಿ ಆರೋಪಿಗಳಿಗೆ ಗಲ್ಲು ಸಿದ್ದರಾಮಯ್ಯನವರ ಸರ್ಕಾರ ಜೀರೋ ಅಭಿವೃದ್ಧಿಯ ಸರ್ಕಾರ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಹಾಶಿವರಾತ್ರಿ | ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಎಣ್ಣೆ ಮಜ್ಜನ: ವಿಶೇಷ ಪೂಜೆ ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ದ ಭಾರತಕ್ಕೆ 61 ರನ್ ಜಯ; ಸೂಪರ್ 8…

ಇತ್ತೀಚಿನ ಸುದ್ದಿ

ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದಲ್ಲಿ ನವ ದಿನಗಳ ನೊವೆನಾಕ್ಕೆ ಚಾಲನೆ: ಡಿ.8ರಂದು ವಾರ್ಷಿಕ ಹಬ್ಬ

28/11/2024, 23:38

ಮಂಗಳೂರು(reporterkarnataka.com): ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಅಧಿಕೃತ ಮಾತೆ ಮೇರಿಗೆ ಸಮರ್ಪಿಸಿದ ನಗರದ ಲೇಡಿಹಿಲ್ ಉರ್ವ ಚರ್ಚಿನ ದೇವಾಲಯದಲ್ಲಿರುವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ ಡಿ.8ರಂದು ನಡೆಯಲಿದ್ದು ಇದಕ್ಕೆ ಪೂರ್ವಭಾವಿಯಾಗಿ ನವದಿನಗಳ ನೊವೆನಾಕ್ಕೆ ಗುರುವಾರ ಚಾಲನೆ ನೀಡಲಾಯಿತು.


ಮಂಗಳೂರು ಎಪಿಸ್ಕೋಪಲ್ ಸಿಟಿ ಡೀನರಿಯ ಮುಖ್ಯಗುರು ಹಾಗೂ ಮಿಲಾಗ್ರಿಸ್ ಚರ್ಚಿನ ಪ್ರಧಾನ ಧರ್ಮಗುರು ಫಾ.ಬೊನವೆಂಚರ್ ನಜರೇತ್ ಅವರು ನವದಿನಗಳ ನೊವೆನಾಕ್ಕೆ ಚಾಲನೆಯನ್ನು ನೀಡಿದರು. ನೊವೆನಾಕ್ಕೂ ಮೊದಲು ಪುಣ್ಯ ಕ್ಷೇತ್ರದಲ್ಲಿ ಹಬ್ಬದ ಅಂಗವಾಗಿ ಧ್ವಜರೋಹಣವನ್ನು ನಡೆಸಲಾಯಿತು. ಈ ಸಂದರ್ಭ ಉರ್ವ ಲೇಡಿಹಿಲ್ ಚರ್ಚಿನ ಪ್ರಧಾನ ಧರ್ಮಗುರು ಫಾ. ಬೆಂಜಮಿನ್ ಪಿಂಟೋ, ಸಹಾಯಕ ಧರ್ಮಗುರು ಫಾ. ಲ್ಯಾನ್ಸನ್ ಪಿಂಟೋ, ವಿಶ್ರಾಂತ ಧರ್ಮಗುರು ಫಾ. ಹೆನ್ರಿ ಸಿಕ್ವೇರಾ, ಚರ್ಚಿನ ಪಾಲನಾ ಸಮಿತಿ ಉಪಾಧ್ಯಕ್ಷ ಲೋಯ್ಡ್ ಲೋಬೋ, ಕಾರ್ಯದರ್ಶಿ ಸಿಲ್ವಿಯಾ ಮಸ್ಕರೇನಸ್, 21 ಆಯೋಗದ ಸಂಯೋಜಕ ಕೆವಿನ್ ಮಾರ್ಟಿಸ್ ಸೇರಿದಂತೆ ನೂರಾರು ಭಕ್ತಾದಿಗಳು ಹಾಜರಿದ್ದರು. ಡಿ.7ರ ವರೆಗೆ ನಾನಾ ವಿಷಯಗಳಲ್ಲಿ ಒಂಬತ್ತು ಧರ್ಮಗುರುಗಳ ನೇತೃತ್ವದಲ್ಲಿ ನವ ದಿನಗಳ ನೊವೆನಾಗಳು ಸಾಗಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು