ಇತ್ತೀಚಿನ ಸುದ್ದಿ
ಉಡುಪಿ: ನಡು ರಸ್ತೆಯಲ್ಲೇ ಗ್ಯಾಂಗ್ ವಾರ್ ವೀಡಿಯೊ ವೈರಲ್; ಕೊನೆಗೂ ಎಚ್ಚೆತ್ತ ಪೊಲೀಸರಿಂದ ಇಬ್ಬರ ಬಂಧನ
25/05/2024, 12:09
ಉಡುಪಿ(reporterkarnataka.com): ಉಡುಪಿಯ ನಡು ರಸ್ತೆಯಲ್ಲಿ ಎರಡು ತಂಡಗಳ ನಡುವೆ ನಡೆದ ಗ್ಯಾಂಗ್ ವಾರ್ ಸಂಬಂಧಿಸಿದ ವೀಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಉಡುಪಿ- ಮಣಿಪಾಲ ರೋಡಿನ ನಡು ರಸ್ತೆಯಲ್ಲಿಯೇ ಎರಡು ತಂಡಗಳ ನಡುವೆ ಕಾದಾಟ ನಡೆದಿತ್ತು. ಎರಡು ಕಾರುಗಳಲ್ಲಿ ಬಂದ ತಂಡ ಹೊಡೆದಾಟಕ್ಕೆ ನಿರತವಾಗಿತ್ತು. ಒಬ್ಬನಿಗೆ ಕಾರು ಡಿಕ್ಕಿ ಹೊಡೆದು ರಸ್ತೆಗೆ ಉರುಳಿ ಬಿದ್ದಿರುವುದು. ಬೆನ್ನಟ್ಟಿ ಓಡಿಸುವುದು ವೀಡಿಯೊದಲ್ಲಿ ಕಂಡು ಬರುತ್ತದೆ. ಮೇ 18ರಂದು ಈ ಘಟನೆ ನಡೆದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಮೇ 20ರಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಉಡುಪಿ ನಗರ ಪೊಲೀಸರು ಆಶಿಕ್ ಮತ್ತು ರಕೀಬ್ ಎಂಬವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೃತ್ಯಕ್ಕೆ ಬಳಸಿದ ಎರಡು ಸ್ವಿಫ್ಟ್ ಕಾರುಗಳು ಮತ್ತು ಎರಡು ಬೈಕ್‌ಗಳು, ಒಂದು ತಲ್ವಾರ್ ಮತ್ತು ಒಂದು ಡ್ರ್ಯಾಗರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗ್ಯಾಂಗ್ ನಲ್ಲಿದ್ದ ಉಳಿದವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.