12:52 PM Saturday6 - June 2026
ಬ್ರೇಕಿಂಗ್ ನ್ಯೂಸ್
ಆನೆ ತುಳಿತಕ್ಕೆ ಪತ್ನಿ ಬಲಿ: ಐಪಿಎಸ್ ಅಧಿಕಾರಿ ಸುನಿಲ್ ಅಚ್ಚಯ್ಯಗೆ ಸಿಎಂ ಡಿ… ಮುಲಾಜಿಲ್ಲದೇ ಕ್ರಮ ಎಂದ ರಾಗಾ: ರಾಗವೇ ಬದಲಿಸಿ ‘ಐ ಆಯಮ್ ಹ್ಯಾಪಿ’ ಎಂದ… ಯಾವ ಟ್ರಬಲ್ ಶೂಟರೂ ಇಲ್ಲ; ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗ್ಲಿಲ್ಲ:… ಆರೋಗ್ಯ ಕ್ಷೇತ್ರದಲ್ಲಿ ಸಚಿವ ಯು.ಟಿ. ಖಾದರ್ ಹೊಸ ಮೈಲಿಗಲ್ಲು: ವೈದ್ಯರ ನೇರ ನೇಮಕಾತಿಗೆ… ಹೊಸ ರಾಜಕೀಯ ಹಾದಿಯತ್ತ ಅಣ್ಣಾಮಲೈ: ಕರ್ನಾಟಕದ ಸಿಂಗಂನಿಂದ ಹೊಸ ಪಕ್ಷ ಘೋಷಣೆ ತಿತಿಮತಿ | ಕಾಡಾನೆ ದಾಳಿ: ಕಾಫಿ ತೋಟ ವೀಕ್ಷಿಸಲು ಹೋಗಿದ್ದ ಐಜಿ ಪತ್ನಿ… ಚಿಕ್ಕಮಗಳೂರು: ಕರೆದ ಕೂಡಲೇ ಬರಲಿಲ್ಲವೆಂದು ಕೆಫೆ ಕಾರ್ಮಿಕನ ಮೇಲೆ ಹಲ್ಲೆ ಡಿಕೆಶಿ ಸಂಪುಟದ ಖಾತೆ ಹಂಚಿಕೆ: ಖಾದರ್ ಗೆ ಆರೋಗ್ಯ; ಉಳಿದಂತೆ ಯಾರು ಯಾರಿಗೆ… ನಿಜವಾಯ್ತು ಮಿಥನ್ ರೈ ಭವಿಷ್ಯವಾಣಿ!: ಕೊನೆಗೂ ಡಿಕೆಶಿ ಆದ್ರು ಸಿಎಂ!!; ಇದೀಗ ವೀಡಿಯೊ… ಸಾಮೂಹಿಕ ನಾಯಕತ್ವದಲ್ಲೇ ಮುಂದುವರಿಯಿರಿ: ಸಿಎಂ ಡಿಕೆಶಿಗೆ ಹೈಕಮಾಂಡ್‌ ಕಟ್ಟುನಿಟ್ಟಿನ ಸೂಚನೆ

ಇತ್ತೀಚಿನ ಸುದ್ದಿ

ವರುಣ ಕ್ಷೇತ್ರದಲ್ಲಿ ವರುಣನ ಅಬ್ಬರಕ್ಕೆ ತುಂಬಿದ ಕೆರೆ-ಕಟ್ಟೆಗಳು; ಬಾಗಿನ ಅರ್ಪಿಸಿದ ಗ್ರಾಮಸ್ಥರು

24/05/2024, 17:22

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ವರುಣ ವಿಧಾನಸಭಾ ಕ್ಷೇತ್ರದಲ್ಲಿ ವರುಣನ ಅಬ್ಬರಕ್ಕೆ ಕೆರೆ-ಕಟ್ಟೆಗಳು ತುಂಬಿ ಕೋಡಿ ಬಿದ್ದು ಹರಿದಿದ್ದು, ಗ್ರಾಮಸ್ಥರ ಮುಖದಲ್ಲಿ ಮಂದಹಾಸ ಮೂಡಿದೆ.


ನಂಜನಗೂಡು ತಾಲ್ಲೂಕಿನ ತಾಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಶ್ವರಗೌಡನಹಳ್ಳಿ ಗ್ರಾಮದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದ್ದು, ಗ್ರಾಮಸ್ಥರು ಬಾಗಿನ ಅರ್ಪಿಸಿ ಪೂಜೆಯನ್ನು ಸಲ್ಲಿಸಿದ್ದಾರೆ.
ಕಳೆದ ಮೂರು ನಾಲ್ಕು ತಿಂಗಳಿಂದ ಬಿಸಿಲಿನ ತಾಪ ಹೆಚ್ಚಾಗಿತ್ತು, ಜನ-ಜಾನುವಾರುಗಳಿಗೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾತ್ರಿ ಸುರಿದ ಧಾರಾಕಾರ ಮಳೆಗೆ ಕೆರೆ ಭರ್ತಿಯಾಗಿದೆ. ಅಲ್ಲದೆ ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡು ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಈ ದಿನವೇ ನಮ್ಮ ಕ್ಷೇತ್ರದಲ್ಲಿ ಎಲ್ಲಾ ಕೆರೆಗಳು ತುಂಬಿವೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ರೈತರು ಕೃಷಿ ಚಟುವಟಿಕೆ ನಡೆಸಲು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಕೆರೆ-ಕಟ್ಟೆಗಳು ತುಂಬುವುದರಿಂದ ಕುಡಿಯುವ ನೀರಿಗೆ ಮತ್ತು ಕೃಷಿ ಚಟುವಟಿಕೆ ನಡೆಸಲು ಯಾವುದೇ ರೀತಿ ತೊಂದರೆಯಾಗುವುದಿಲ್ಲ ಎಂದು ಗ್ರಾಮಸ್ಥರು ತುಂಬಿದ ಕೆರೆಗೆ ಬಾಗಿನ ಅರ್ಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ರೇವಣ್ಣ, ಬಸವಣ್ಣ, ಕೇಬಲ್ ಶಿವಣ್ಣ, ನಿಂಗರಾಜು, ಶೇಖರ್ ಚಂದ್ರಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು