ಇತ್ತೀಚಿನ ಸುದ್ದಿ
ಉಡುಪಿ ಮಠಾಧೀಶರಿಂದ ವಿರೋಧ: ಸರಕಾರದಿಂದ ಮುದ್ರಾಧಾರಣೆ ನಿಷೇಧ ಸುತ್ತೋಲೆ ವಾಪಸ್
11/11/2022, 14:11
ಬೆಂಗಳೂರು(reporterkarnataka.com): ಧಾರ್ಮಿಕ ಸ್ಥಳಗಳಲ್ಲಿ ಮುದ್ರಾಧಾರಣೆ ಮಾಡುವುದನ್ನು ನಿಷೇಧಿಸಿ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ . ಉಡುಪಿಯ ಮಠಾಧೀಶರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಸುತ್ತೋಲೆ ವಾಪಾಸು ಪಡೆದಿದೆ.
ಉಡುಪಿ ಮಠಗಳಲ್ಲಿ ಮುದ್ರಾಧಾರಣೆ ಸಂಪ್ರದಾಯವಾಗಿದೆ. ಸರಕಾರದ ಸುತ್ತೋಲೆಯನ್ನು ಉಡುಪಿ ಶಾಸಕ ರಘುಪತಿ ಭಟ್ , ಮಠಾಧಿಶರು ಹಾಗು ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದರು
ದೇವಾಲಯಗಳಲ್ಲಿ ಚಾಲ್ತಿಯಲ್ಲಿರುವ ಚಾಲ್ತಿಯಲ್ಲಿರುವ ಪದ್ಧತಿ, ನಡೆಸುವಂತಿಲ್ಲ. ಸಂಪ್ರದಾಯಗಳಿಗೆ ವಿರುದ್ಧ ಆಚರಣೆ ಸಂಪ್ರದಾಯಗಳಿಗೆ ವಿರುದ್ಧವಾಗಿ ಭಾವಚಿತ್ರ, ವಿಗ್ರಹಗಳನ್ನು ಅಳವಡಿಸುವಂತಿಲ್ಲ. ಮುದ್ರಾಧಾರಣೆಗೆ ಅವಕಾಶವಿಲ್ಲ. ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಸುತ್ತೋಲೆಯಲ್ಲಿ ಹೇಳಲಾಗಿತ್ತು.