ಇತ್ತೀಚಿನ ಸುದ್ದಿ
ತುಂಬೆ: ನೇತ್ರಾವತಿಗೆ ಬಾಗಿನ ಅರ್ಪಣೆ, ಗಂಗಾ ಪೂಜೆ; ಜಲಸಿರಿ ಪೂರ್ಣಗೊಂಡಲ್ಲಿ ದಿನದ 24 ತಾಸು ನೀರು: ಮೇಯರ್ ಮನೋಜ್
26/02/2025, 22:33

ಜಯಾನಂದ ಪೆರಾಜೆ ಬಂಟ್ವಾಳ
info.reporterkarnataka@gmail.com
ತುಂಬೆ ಕಿಂಡಿ ಅಣೆಕಟ್ಟು ಬಳಿ ನೇತ್ರಾವತಿ ನದಿಗೆ ಬಾಗಿನ ಸಮರ್ಪಣೆ ಮಾಡಿ ಗಂಗಾ ಪೂಜೆಯನ್ನು ಮಂಗಳೂರು ಮೇಯರ್ ಮನೋಜ್ ಕುಮಾರ್ ನೆರವೇರಿಸಿದರು.
ಮಂಗಳೂರು ಮಹಾನಗರಕ್ಕೆ ಮತ್ತು ಬಂಟ್ವಾಳ ತಾಲೂಕಿನ ಹಲವು ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುತ್ತಿರುವ ನೇತ್ರಾವತಿ ನದಿ ಮಾತೆಗೆ ಸಮಾನ. ನದಿ ಪರಿಸರದ ಕೃಷಿಕರಿಗೆ ಅನ್ನದಾತೆಯಾಗಿದ್ದಾಳೆ. ನಿರಂತರವಾಗಿ ಹರಿದು ರೈತರ ಜೀವನಾಡಿಯಾಗಿದ್ದಾಳೆ.
ಸದ್ಯ 6 ಮೀಟರ್ ನೀರಿದ್ದು ನೀರಿನ ಕೊರತೆಯಾಗದು. ಎಡಿಬಿ 780 ಕೋಟಿ ವೆಚ್ಚದಲ್ಲಿ ಜಲಸಿರಿ ಕಾಮಗಾರಿ ನಡೆಯುತ್ತಿದೆ. ಅದು ಪೂರ್ಣಗೊಂಡಲ್ಲಿ ದಿನದ 24 ಗಂಟೆಯೂ ಮಂಗಳೂರಿಗೆ ನೀರು ಪೂರೈಕೆಯಾಗಲಿದೆ ಎಂದು ಮೇಯರ್ ಮನೋಜ್ ಕುಮಾರ್ ತಿಳಿಸಿದರು.
ಪಾಲಿಕೆ ವಿಪಕ್ಷ ನಾಯಕ ಅನಿಲ್ ಕುಮಾರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಉಪಮೇಯರ್ ಭಾನುಮತಿ, ಪಾಲಿಕೆ ಆಯುಕ್ತ ರವಿಚಂದ್ರ ನಾಯ್ಕ್,ಪಾಲಿಕೆ ಸಚೇತಕ ಪ್ರೇಮಾನಂದ ಶೆಟ್ಟಿ, ಜಯಾನಂದ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.