11:20 AM Tuesday23 - September 2025
ಬ್ರೇಕಿಂಗ್ ನ್ಯೂಸ್
Kodagu | ಐತಿಹಾಸಿಕ ಮಡಿಕೇರಿ ದಸರಾಕ್ಕೆ ಚಾಲನೆ: 4 ಶಕ್ತಿ ದೇವತೆಗಳಿಗೆ ವಿಶೇಷ… ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಸರ್ಕಾರದಿಂದ 6 ಕೋಟಿ ನಗದು ಬಹುಮಾನ: ಮುಖ್ಯಮಂತ್ರಿ… ಜಿಎಸ್ ಟಿ ಜಾರಿ ಮಾಡಿದ್ದೂ ಮೋದಿ, ಜಿಎಸ್ ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ,… ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ

ಇತ್ತೀಚಿನ ಸುದ್ದಿ

ತ್ರೇತಾಯುಗದಲ್ಲಿ ಸೀತೆ, ದ್ವಾಪರದಲ್ಲಿ ದ್ರೌಪದಿ, ಕಲಿಯುಗದಲ್ಲಿ ಸೌಜನ್ಯ; ಆಕೆ ಬರೇ ಹೆಣ್ಣಲ್ಲ, ಶಕ್ತಿ: ಮಹೇಶ್ ಶೆಟ್ಟಿ ತಿಮರೋಡಿ

20/08/2023, 21:44

ಮಂಗಳೂರು(reporterkarnataka.com): ಧರ್ಮಸ್ಥಳದ ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಮಾಡಿದವರು ಯಾರೆಂದು ಇಡೀ ದಕ್ಷಿಣ ಕನ್ನಡಕ್ಕೆ ಗೊತ್ತು. ನಾವು 11 ವರ್ಷಗಳಿಂದ ನ್ಯಾಯದ ಭಿಕ್ಷೆ ಬೇಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
ಸೌಜನ್ಯ ಹೋರಾಟ ಸಮಿತಿ ಮಂಗಳೂರು ವತಿಯಿಂದ ನಗರದ ಕದ್ರಿ ಬಯಲು ರಂಗ ಮಂದಿರದಲ್ಲಿ ಭಾನುವಾರ ನಡೆದ ಸೌಜನ್ಯ ಪರ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.


ಎಲ್ಲ ರಾಜಕೀಯ ಪಕ್ಷದವರೂ ಒಂದೇ. ನಾವು 11 ವರ್ಷಗಳಿಂದ ನ್ಯಾಯ ಕೊಡಿ ಅಂತ ಭಿಕ್ಷೆ ಬೇಡುತ್ತಿದ್ದೇವೆ. ಕಾನೂನಾತ್ಮಕವಾಗಿ ನೀವು ನ್ಯಾಯ ಕೊಡದಿದ್ದರೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯ ಹೇಗೆ ಪಡೆಯಬೇಕು ಎನ್ನುವುದು ನಮಗೆ ಗೊತ್ತು ಎಂದು ಅವರು ನುಡಿದರು.
ಸೌಜನ್ಯ ಬರೇ ಹೆಣ್ಣಲ್ಲ. ಅದೊಂದು ಶಕ್ತಿ. ತ್ರೇತಾಯುಗದಲ್ಲಿ ಸೀತೆ, ದ್ವಾಪರದಲ್ಲಿ ದ್ರೌಪದಿ ಇದ್ದ ಹಾಗೆ ಕಲಿಯುಗದಲ್ಲಿ ಸೌಜನ್ಯ. ಇದು ಇಲ್ಲಿಗೆ ನಿಂತು ಹೋಗುವುದಿಲ್ಲ. ಸೌಜನ್ಯ ನೆಪ ಮಾತ್ರ. ಸೌಜನ್ಯ ಪ್ರಕರಣ ನಡೆದ ಬಳಿಕ ಒಂದೊಂದಾಗಿ ಪ್ರಕರಣಗಳು ಹೊರಬರುತ್ತಿದೆ ಎಂದು ಅವರು ನುಡಿದರು.
ಹೋರಾಟ ಸಮಿತಿಯ ಸಂಚಾಲಕಿ, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ ಹಾಗೂ ಸೌಜನ್ಯ ತಾಯಿ ಕುಸುಮಾವತಿ ಉಪಸ್ಥಿತರಿದ್ದರು. ಇದಕ್ಕೆ ಮುನ್ನ ಕದ್ರಿ ದೇವಾಲಯದಿಂದ ಬಯಲು ರಂಗ ಮಂದಿರದ ವರೆಗೆ ಪಾದಯಾತ್ರೆ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು