ಇತ್ತೀಚಿನ ಸುದ್ದಿ
ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂ. ವಂಚನೆ ಆರೋಪ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಹೋದರನ ಬಂಧನ
19/10/2024, 19:36
ಬೆಂಗಳೂರು(reporterkarnataka.com): ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸುತ್ತೇನೆ ಎಂದು ನಂಬಿಸಿ 2 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಸಹೋದರ ಗೋಪಾಲ್ ಜೋಷಿ ಅವರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ.
ಲೋಕಸಭೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಿಜಯಪುರ ಜಿಲ್ಲೆಯ ನಾಗಾಠಾಣ ಕ್ಷೇತ್ರದ ಜೆಡಿಎಸ್ ನ ಮಾಜಿ ಶಾಸಕರಿಂದ 2 ಕೋಟಿ ಹಣ ಪಡೆದು, ವಂಚನೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದೀಗ ಗೋಪಾಲ್ ಜೊಷಿ ಬಂಧನವಾಗಿದೆ. ಅವರು ಯಾರ ಹೆಸರೇಳಿ ಹಣ ಪಡೆದಿದ್ದಾರೆ? ಎಂಬಿತ್ಯಾದಿ ಅಂಶಗಳೆಲ್ಲ ಹೊರಬರಬೇಕಿದೆ. ಇದು ಬಿಜೆಪಿ ಹಾಗೂ ಪ್ರಹ್ಲಾದ್ ಜೋಷಿ ಅವರಿಗೆ ಮುಜಗರ ಉಂಟು ಮಾಡಿದೆ.