6:52 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ತುಷಾರ್ ಹೆಗ್ಡೆ ವೇಣೂರು ನಿರ್ದೇಶನದ ತುಳು ವೆಬ್ ಸೀರೀಸ್ ‘ಕಸರತ್ತ್’ ಮೊದಲ ಪೋಸ್ಟರ್ ಬಿಡುಗಡೆ

20/10/2023, 22:12

ಮಂಗಳೂರು(reporterkarnataka.com): ತುಷಾರ್ ಹೆಗ್ಡೆ ವೇಣೂರು ನಿರ್ದೇಶನದ ಮೊದಲ ಪ್ರಯತ್ನ ತುಳು ವೆಬ್ ಸೀರೀಸ್ ‘ಕಸರತ್ತ್’ ಮೊದಲ ಪೋಸ್ಟರ್ ಬಿಡುಗಡೆಗೊಂಡಿದೆ.
ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಜೀ ಕನ್ನಡ ಕಾಮಿಡಿ ಖಿಲಾಡಿಗಳು ಖ್ಯಾತಿಯ ಹಿತೇಶ್ ಕಾಪಿನಡ್ಕ, ಸೂರಜ್ ಕುಮಾರ್, ರಾಕೇಶ್ ಪೂಜಾರಿ ಮುಖ್ಯ ಭೂಮಿಕೆಯ ಈ ಸೀರೀಸ್ ನಲ್ಲಿ ನವ್ಯಾ ಪೂಜಾರಿ ನಾಯಕಿಯಾಗಿ ನಟಿಸಿದ್ದಾರೆ . ಮೊದಲ ಬಾರಿಗೆ ಜೀ ಕನ್ನಡ ಕಾಮಿಡಿ ಖಿಲಾಡಿ ಅನೀಶ್ ಅಮೀನ್ ವೇಣೂರು ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ ಜೊತೆ ಗೆ ಮುಖ್ಯ ಪಾತ್ರಗಳಲ್ಲಿ ಜೀ ಕನ್ನಡ ಕಾಮಿಡಿ ಖಿಲಾಡಿ ಖ್ಯಾತಿಯ ಪ್ರವೀಣ್ ಜೈನ್, ಧೀರಜ್ ನೀರುಮಾರ್ಗ, ರಾಧೇಶ್ ಶೆಣೈ, ದಿವ್ಯ ಅಂಚನ್ ವೇಣೂರು ನಟಿಸಿದ್ದಾರೆ.
ಜೊತೆಗೆ ಚಂದ್ರಶೇಖರ್ ಹೊಕ್ಕಡಿಗೋಳಿ, ಮನೀಶ್ ಶೆಟ್ಟಿ, ಸುಕೇಶ್ ವೇಣೂರು, ದೀಕ್ಷಿತ್ ಅಂಡಿಂಜೆ, ನಿಶಿತ್ ಶೆಟ್ಟಿ ಮುಂತಾದ ಕಲಾವಿದರು ನಟಿಸಿದ್ದಾರೆ.
ಬೋಧಿ ಪ್ರೊಡಕ್ಷನ್ ಪ್ರಸ್ತುತ ಪಡಿಸುವ, ಟಾಕೀಸ್ ಆಪ್ ನಿರ್ಮಿಸಿದ, ಗಣೇಶ್ ಎಂ ಉಜಿರೆ, ರಿತೇಶ್ ಗೌಡ ವೇಣೂರು,ನೆಲ್ವಿಸ್ಟರ್ ಗ್ಲಾನ್ ಪಿಂಟೋ ಸಹಕಾರದ ಚಿತ್ರಕ್ಕೆ ಮಾನಸ ಹೊಳ್ಳ ಅವರ ಸಂಗೀತ, ಸಂತೋಷ್ ಗುಂಪಾಲಜೆ ಅವರ ಛಾಯಾಗ್ರಾಹಣ, ಗಣೇಶ್ ನಿರ್ಚಲ್ ಅವರ ಸಂಕಲನ, ಸುಕೇಶ್ ಶೆಟ್ಟಿ ಅವರ ಸಾಹಿತ್ಯ, ಕಾಮಿಡಿ ಕಿಲಾಡಿ ಸೂರಜ್ ಕುಮಾರ್ ಅವರ ನೃತ್ಯ ನಿರ್ದೇಶನ, ಅವಿನಾಶ್ ನಾತು ಮತ್ತು ಪ್ರಣೀತ್ ಜೈನ್ ಅವರ ಕಲೆ ಈ ಚಿತ್ರಕ್ಕಿದೆ. ಸ್ಮಿತೇಶ್ ಎಸ್ ಬಾರ್ಯ ಮತ್ತು ಅನೀಶ್ ಅಮೀನ್ ವೇಣೂರು ತಾಂತ್ರಿಕ ಮೇಲ್ವಿಚಾರಣೆಯ ಚಿತ್ರಕ್ಕೆ ದೀಕ್ಷಿತ್ ಕೆ ಅಂಡಿಂಜೆ ನಿರ್ಮಾಣ ನಿರ್ವಹಣೆ ಇದೆ. ವಿನಯ್ ಕುಮಾರ್ ಉಜಿರೆ, ನಿರಾಜ್ ಕುಂಜಾರ್ಪ, ದೀಕ್ಷಿತ್ ಭಂಡಾರಿ, ನಿಶಿತ್ ಶೆಟ್ಟಿ ನಿರ್ದೇಶನ ತಂಡದಲ್ಲಿ ಸಹಕರಿಸಿದ್ದಾರೆ.
ಈ ಸೀರೀಸ್ ಆದಷ್ಟು ಶೀಘ್ರದಲ್ಲಿ ಟಾಕೀಸ್ ಆಪ್ ನಲ್ಲಿ ಬಿಡುಗಡೆಗೊಳ್ಳಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು