8:15 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

‘ದ ಜಂಗಲ್ ರಂಬಲ್’: ವೂಟ್‌ನಲ್ಲಿ ವೀಜೇಂದರ್ ಸಿಂಗ್ ಪ್ರೊ ಬಾಕ್ಸಿಂಗ್ ಸ್ಪರ್ಧೆ

12/08/2022, 20:30

*ವೂಟ್‌ನಲ್ಲಿ ನೇರ ಪ್ರಸಾರ ಮತ್ತು ಸ್ಪೋರ್ಟ್ಸ್ 18 ಖೇಲ್‌ನಲ್ಲಿ ಪ್ರಸಾರವಾಗಲಿದೆ. ವೀಜೇಂದರ್ ಸಿಂಗ್, ಪಶ್ಚಿಮ ಆಫ್ರಿಕಾದ ಬಾಕ್ಸಿಂಗ್ ಯೂನಿಯನ್ ಚಾಂಪಿಯನ್ ಘಾನದಾ ಎಲೈಸು ಸುಲಿ ಅವರನ್ನು ಆಗಸ್ಟ್ 17 ರಂದು ಎದುರಿಸಲಿದ್ದಾರೆ.

ಹೊಸದಿಲ್ಲಿ(reporterkarnataka.com):ಒಲಿಂಪಿಕ್ ಕಂಚಿನ ಪದಕ ವಿಜೇತ ವೀಜೇಂದರ್ ಸಿಂಗ್ ಇದೀಗ ಮತ್ತೊಮ್ಮೆ ವರ್ಷಗಳ ಬಳಿಕ ವೃತ್ತಿಪರ ಬಾಕ್ಸಿಂಗ್‌ಗೆ ವಾಪಸಾಗಲಿದ್ದಾರೆ. 

‘ದ ಜಂಗಲ್ ರಂಬಲ್’ ಹೋರಾಟದಲ್ಲಿ ಘಾನದಾ ಎಲೈಸು ಸುಲೀ ಅವರನ್ನು ಎದುರಿಸಲಿದ್ದಾರೆ. ಈ ಸ್ಪರ್ಧೆಯೂ ವೂಟ್‌ನಲ್ಲಿ ನೇರ ಪ್ರಸಾರವಾಗಲಿದ್ದು, ಅಭಿಮಾನಿಗಳು ಸ್ಪೋರ್ಟ್ಸ್ 18 ಖೇಲ್, ವಯಾಕಮ್‌ನ ಉಚಿತ ಹಿಂದಿ ಕ್ರೀಡಾ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು. 

ಛತ್ತೀಸ್‌ಗಢದ ರಾಯ್‌ಪುರದ ಬಾಲ್ಬೀರ್ ಸಿಂಗ್ ಜುನೆಜಾ ಒಳಾಂಗಣ ಸ್ಟೇಡಿಯಂನಲ್ಲಿ ಆಗಸ್ಟ್ 17 ರಂದು ಸಂಜೆ 6.30ಕ್ಕೆ ಸ್ಪರ್ಧೆಯಲ್ಲಿದೆ. ಇದು ಭಾರತದಲ್ಲಿ ನಡೆಯಲಿರುವ 6ನೇ ವೃತ್ತಿಪರ ಬಾಕ್ಸಿಂಗ್ ಸ್ಪರ್ಧೆಯಾಗಿದೆ. 

36 ವರ್ಷದ ವೀಜೇಂದರ್, 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಭಾರತದ ಮೊದಲ ಬಾಕ್ಸರ್ ಎನಿಸಿಕೊಂಡಿದ್ದರು. 2015ರ ವೃತ್ತಿಪರ ಬಾಕ್ಸರ್ ಆಗಿ ಬದಲಾದ ಬಳಿಕ 8 ನಾಕೌಟ್ ಸೇರಿದಂತೆ 12-1ರ ದಾಖಲೆ ಹೊಂದಿದ್ದಾರೆ. ಸತತ 12 ಗೆಲುವು ದಾಖಲಿಸಿದ್ದು, ಅಜೇಯ ಓಟ ಮುಂದುವರಿಸಿದ್ದಾರೆ. 2021ರ ಮಾರ್ಚ್‌ನಲ್ಲಿ ಗೋವಾದಲ್ಲಿ ಕಡೇ ಬಾರಿ ಸ್ಪರ್ಧೆ ಮಾಡಿದ್ದರು. 

ಛತ್ತೀಸ್‌ಗಡ ರಾಜ್ಯಸರ್ಕಾರದ ಸಹಯೋಗದಲ್ಲಿ ಮೊದಲ ಬಾರಿಗೆ ರಾಯ್‌ಪುರದಲ್ಲಿ ವೃತ್ತಿಯ ಬಾಕ್ಸಿಂಗ್ ನಡೆಯುತ್ತಿದೆ. 

‘ಈ ಸ್ಪರ್ಧೆಗೆ ಎದುರು ನೋಡುತ್ತಿದ್ದೇನೆ. ಇದಕ್ಕಾಗಿ ಸಾಕಷ್ಟು ತಯಾರಿ ನಡಸಿದ್ದು, ಮುಂಬರುವ ಜಂಗಲ್ ರಂಬಲ್ ಸ್ಪರ್ಧೆಗೆ ಸಂಪೂರ್ಣ ತಯಾರಿಯಾಗಿದ್ದೇನೆ. ಅಜೇಯ ಓಟ ಮುಂದುವರಿಸಲು ಉತ್ಸುಕನಾಗಿದ್ದೇನೆ. ಮುಂಬರುವ ಬಾಕ್ಸರ್‌ಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಈ ಸ್ಪರ್ಧೆ ನನ್ನ ಪಾಲಿಗೆ ಮಹತ್ವ ಪಡದಿದೆ. ಭಾರತದಲ್ಲಿ ಈ ಕ್ರೀಡೆ ಬೆಳೆದರೆ ಭಾರತದ ಬಾಕ್ಸರ್‌ಗಳಿಗೆ ಅನುಕೂಲವಾಗಲಿದೆ. ಎಲ್ಲರೂ ಈ ಸ್ಪರ್ಧೆಯನ್ನು ನೋಡಬೇಕು, ಆನಂದಿಸಬೇಕು ಎಂಬುದೇ ನನ್ನ ಉದ್ದೇಶ. ವೂಟ್ ಹಾಗೂ ಸ್ಪೋರ್ಟ್ಸ್18 ಖೇಲ್ ಮೂಲಕ ಈ ಸ್ಪರ್ಧೆ ವೀಕ್ಷಿಸಿ ಎಂದು ವೀಜೇಂದರ್ ತಿಳಿಸಿದ್ದಾರೆ. 

ಜಂಗಲ್ ರಂಬಲ್ ಜತೆಗೆ ೈಜಾನ್ ಅನ್ವರ್, ಸಚಿನ್ ನೌಟಿಯಾಲ್, ಕಾರ್ತಿಕ್ ಸತೀಶ್ ಕುಮಾರ್, ಅಶೀಶ್ ಶರ್ಮ, ಗುರ್‌ಪ್ರೀತ್ ಸಿಂಗ್ ಹಾಗೂ ಶೈಖೋಮ್ ರೆಬಾಲ್ಡೊ ಅವರ ಸ್ಪರ್ಧೆಯನ್ನು ಅಂದು ವೀಕ್ಷಿಸಬಹುದು. ವೀಜೇಂದರ್ ಸ್ಪರ್ಧೆ ಮಾತ್ರ ವೂಟ್ ನಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೆ, ಸ್ಪೋರ್ಟ್ಸ್ 18 ಖೇಲ್‌ನಲ್ಲೂ ವೀಕ್ಷಿಸಬಹುದು. 

ಮನರಂಜನೆಗಾಗಿ ದ ಜಂಗಲ್ ರಂಬಲ್ ಬಾಕ್ಸಿಂಗ್ ಸ್ಪರ್ಧೆಯನ್ನು ವೂಟ್ ಹಾಗೂ ಸ್ಪೋರ್ಟ್ಸ್ 18 ಖೇಲ್‌ನಲ್ಲಿ ವೀಕ್ಷಿಸಿ.

ಇತ್ತೀಚಿನ ಸುದ್ದಿ

ಜಾಹೀರಾತು