ಇತ್ತೀಚಿನ ಸುದ್ದಿ
ಸಂಗೀತ ಲೋಕದ ಮಹಾನ್ ಗಾಯಕಿ ಆಶಾ ಬೋಸ್ಲೆ ಇನ್ನಿಲ್ಲ
12/04/2026, 19:14
ಮುಂಬೈ(reporterkarnataka.com): ಭಾರತೀಯ ಚಲನಚಿತ್ರ ಸಂಗೀತದ ಜೀವಂತ ದಂತಕಥೆಯಾದ ಗಾಯಕಿ ಆಶಾ ಭೋಸ್ಲೆ ಅವರು ಭಾನುವಾರ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು.
ಹೃದಯ ಮತ್ತು ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿ ಶನಿವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
92 ವರ್ಷ ವಯಸ್ಸಿನ ಅವರು 70 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಇಡೀ ರಾಷ್ಟ್ರದ ಹೃದಯಚನ್ನು ತನ್ನ ಸಂಗೀತ ಮೂಲಕ ಗೆದ್ದಿದ್ದರು. ವಾಸ್ತವವಾಗಿ ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಆಕೆಯ ನಿರ್ಗಮನವು ಸಂಗೀತ ಲೋಕದ ಸುವರ್ಣ ಯುಗದ ಅಂತ್ಯ ಎನ್ನಲಾಗುತ್ತಿದೆ.
ಆಶಾ ಭೋಂಸ್ಲೆ ಅವರ ನಿಧನವನ್ನು ಆಕೆಯ ಪುತ್ರ ಆನಂದ್ ಭೋಂಸ್ಲೆ ಅವರು ದೃಢಪಡಿಸಿದ್ದಾರೆ.
ಅವರ ಪಾರ್ಥಿವ ಶರೀರವನ್ನು ಲೋವರ್ ಪರೇಲ್‌ನ ಕಾಸಾ ಗ್ರಾಂಡೆಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಬೆಳಿಗ್ಗೆ 11:00 ಗಂಟೆಗೆ ಇಡಲಾಗುವುದು ಎಂದು ಹೇಳಿದ್ದಾರೆ. ನಾಳೆ ಸಂಜೆ 4:00 ಗಂಟೆಗೆ ಶಿವಾಜಿ ಪಾರ್ಕ್‌ನಲ್ಲಿ ಸಕಲ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳು ನಡೆಯಲಿವೆ.












