8:24 PM Tuesday17 - March 2026
ಬ್ರೇಕಿಂಗ್ ನ್ಯೂಸ್
Kodagu | ಅಕಾಲಿಕ ಮಳೆ: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಾನಿ ಸ್ಪೀಕರ್‌ ಸಭಾತ್ಯಾಗ ಪ್ರಕರಣ: ಖಾದರ್ ಸಿಟ್ಟಿಗೆ 8 ಹಿರಿಯ ಐಎಎಸ್‌ ಅಧಿಕಾರಿಗಳಿಗೆ ಶೋಕಾಸ್… Mangaluru | ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್ ಗೆ 2025 ಕೇಂದ್ರ ಸಾಹಿತ್ಯ… ಉತ್ತರಿಸದ ಸಚಿವರು: ಇದೇ ಮೊದಲ ಬಾರಿಗೆ ಸ್ಪೀಕರ್ ಸಭಾತ್ಯಾಗ; ಮೂವರು ಅಧಿಕಾರಿಗಳಿಗೆ ತಲೆದಂಡ ರಾಜ್ಯ ಉಪ ಚುನಾವಣೆ: ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಏಪ್ರಿಲ್ 9ರಂದು ಮತದಾನ, ಮೇ… ಕಾರಿನ ಮೇಲೆ ಉರುಳಿದ ಕಟ್ಟಿಗೆ ತುಂಬಿದ ಲಾರಿ: ಮಗು ಸಹಿತ ದಂಪತಿ ಪವಾಡಸದೃಶ… ಕಲಬುರಗಿ; ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್… ವಿವಿಧ ಬೇಡಿಕೆ ಆಗ್ರಹಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಫ್ರೀಡಂ… ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ

ಇತ್ತೀಚಿನ ಸುದ್ದಿ

ಕ್ರಿಕೆಟ್ ಕ್ಷೇತ್ರದಲ್ಲಿ ತೀರ್ಥಹಳ್ಳಿ ಹುಡುಗ ನಿತಿನ್ ಸಾಧನೆ!: ಐಪಿಎಲ್ ಗೆ ಆಯ್ಕೆಯಾಗುವ ಸಾಧ್ಯತೆ

18/07/2025, 10:32

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com

ಕರ್ನಾಟಕ ಪ್ರೀಮಿಯರ್ ಲೀಗ್ (KPL ) ಪಂದ್ಯಕ್ಕೆ ಇದೀಗ ತೀರ್ಥಹಳ್ಳಿ
ತಾಲೂಕಿನ ನಿತಿನ್ ಆಯ್ಕೆ ಆಗಿದ್ದು, ಹುಬ್ಬಳ್ಳಿ ತಂಡದಲ್ಲಿ ಅಡಲಿದ್ದಾರೆ.
ನಿತಿನ್ ಅವರು ಮೂಲತಃ ತೀರ್ಥಹಳ್ಳಿ ತಾಲೂಕಿನ ಆರಗ ಮೂಲದ ಶಾಂತವೇರಿಯವರು.
ತಂದೆ ನಾಗರಾಜ , ತಾಯಿ ಗಾಯತ್ರಿ, ಸಹೋದರಿ ನೇಹಾ.
ತೀರ್ಥಹಳ್ಳಿಯ ಅಬ್ದುಲ್ ಕಲಾಂ ಅವರ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಯಲ್ಲಿ ತರಬೇತಿ ಪಡೆದ ಆರಗ ಶಾಂತವೇರಿ ಗ್ರಾಮದ ನಿತಿನ್ ಕರ್ನಾಟಕ ಪ್ರೀಮಿಯರ್ ಲೀಗ್ (KPL ) ಆಯ್ಕೆ ಆಗಿರುವುದು ಇದೀಗ ತೀರ್ಥಹಳ್ಳಿಯ ಹಾಗೂ ಮಲೆನಾಡ ಜನರಿಗೆ ಹೆಮ್ಮೆಯ ವಿಷಯವಾಗಿದೆ.
ನಿತಿನ್ ಮೊದಲು ಕ್ರಿಕೆಟ್ ಆರಂಭಿಸಿದ್ದು ನ್ಯಾಷನಲ್ ಸಂಸ್ಥೆಯ ಅಬ್ದುಲ್ ಕಲಾಂ ಅವರ ತೀರ್ಥಹಳ್ಳಿಯ ಬಾಳೆಬೈಲಿನ ಸಿಟಿ ಕ್ಲಬ್ ಅಲ್ಲಿ. ಇಲ್ಲಿ ಈತನಿಗೆ ಲೆದರ್ ಆಡುವ ಅವಕಾಶ ಕಲ್ಪಿಸಿತು, ನಂತರ ಬೆಂಗಳೂರಿನಲ್ಲಿ ಇವನ ಬೌಲಿಂಗ್‌ ಮಾಡೋ ರೀತಿ ನೋಡಿ ಅಭಿಮನ್ಯು ಮಿಥುನ್ ಅವರ ತಮ್ಮ ರನ್ ಅಪ್ ಅಕಾಡೆಮಿ ಯಲ್ಲಿ ಉಚಿತ ಕೋಚ್ ಜೀಮ್ ಬೇಕಾದ ಪ್ರೋಟಿನ್ ಗಳನ್ನು ಒದಗಿಸುವುದರ ಮೂಲಕ ಕೈ ಹಿಡಿಯುತ್ತಾರೆ. ಕಠಿಣ ತರಬೇತಿ ಬಳಿಕ ಈಗಾಗಲೇ 140 ಸ್ಪೀಡ್ ನಲ್ಲಿ ಬಾಲ್ ಎಸೆಯುವ ಸಾಮರ್ಥ್ಯ ಇರುವ ನಿತಿನ್ ಅವರನ್ನು ಹುಬ್ಬಳ್ಳಿ ಟೈಗರ್ಸ್ ಗುರುತಿಸಿ 25 ಲಕ್ಷಕ್ಕೆ ಬಿಡ್ ಮಾಡಿದೆ.
6.3 ಎತ್ತರದ ನೀಳಕಾಯದ ಈ ಯುವಕನಿಗೆ ಭಾರತ ತಂಡವನ್ನು ಪ್ರತಿನಿಧಿಸುವ ಎಲ್ಲಾ ಅರ್ಹತೆ ಇದೆ.
ನಿತಿನ್ ಅವರನ್ನು ಕಳೆದ ಬಾರಿಯ ಕೆಪಿಎಲ್ ವಿನ್ನಿಂಗ್ ತಂಡ ವಾದ ಹುಬ್ಬಳ್ಳಿ ಟೈಗರ್ಸ್ ಬಿಡ್ ಮಾಡಿ ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಅತ್ಯುತ್ತಮ ಕ್ರಿಕೆಟ್ ಕ್ರೀಡಾ ಪಟುವಾಗಿರುವ ನಿತಿನ್ ಕೆಪಿಎಲ್ ನಲ್ಲಿ ಚೆನ್ನಾಗಿ ಆಟವಾಡಿದರೆ ಐಪಿಎಲ್ ಕದ ತಟ್ಟುವ ಸಾಧ್ಯತೆ ಕೂಡ ಹೆಚ್ಚಿದೆ. ಈತನ ಸಾಧನೆಯನ್ನು ಪೋಷಕರು, ಸ್ನೇಹಿತರು, ಅಭಿಮಾನಿಗಳು, ಪಟ್ಟಣದ ಸಾರ್ವಜನಿಕರು ಪ್ರಶಂಶಿಸಿ ಶುಭ ಕೋರಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು