ಇತ್ತೀಚಿನ ಸುದ್ದಿ
ತೀರ್ಥಹಳ್ಳಿ ಸಮೀಪದ ಅರೆಕಲ್ ಬಳಿ ಅಪಘಾತ: ಬೈಕ್ ಸವಾರನಿಗೆ ಗಂಭೀರ ಗಾಯ
19/10/2024, 13:43
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmil.com
ಬೆಳ್ಳಂ ಬೆಳಗ್ಗೆ ಬೈಕ್ ಹಾಗೂ ಲಾರಿ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ ಸವಾರನಿಗೆ ಗಂಭೀರ ಗಾಯವಾಗಿರುವ ಘಟನೆ ಅರೆಕಲ್ ಬಳಿ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಸಮೀಪದ ಅರೆಕಲ್ ಬಳಿ ಈ ಅವಘಡ ಸಂಭವಿಸಿದ್ದು ಹಾಲಾಡಿ ಶಿವರಾಮ್ ( 45 ) ಗಂಭೀರ ಗಾಯಗೊಂಡ ವ್ಯಕ್ತಿ. ಬೈಕ್ ನಲ್ಲಿ ಬರುತ್ತಿದ್ದ ಶಿವರಾಮ್ ಅವರಿಗೆ ಲಾರಿ ಗುದ್ದಿದೆ. ಲಾರಿ ಗುದ್ದಿದ ಪರಿಣಾಮ ಅವರಿಗೆ ಗಂಭೀರ ಗಾಯವಾಗಿದ್ದು ಅವರನ್ನು ತೀರ್ಥಹಳ್ಳಿ ಯ ಜಯಚಾಮರಾಜೇಂದ್ರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.