1:41 PM Wednesday22 - January 2025
ಬ್ರೇಕಿಂಗ್ ನ್ಯೂಸ್
ಸ್ಥಳ ಮಹಜರು: ಕೋಟೆಕಾರು ದರೋಡೆ ಪ್ರಕರಣದ ಆರೋಪಿ ಪರಾರಿಗೆ ಯತ್ನ; ಪೊಲೀಸರ ಗುಂಡೇಟು,… ಕೋಟೆಕಾರು ದರೋಡೆ ಪ್ರಕರಣ: ಮಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; 3 ಮಂದಿ ಆರೋಪಿಗಳ… ಗಾಂಧಿ ಭಾರತ ಮರು ನಿರ್ಮಾಣ ಕನ್ನಡ- ಆಂಗ್ಲ ಪುಸ್ತಕ ಬಿಡುಗಡೆ: ಬೃಹತ್ ಗಾಂಧಿ… ಕಾಂತಾರ: ಚಾಪ್ಟರ್ 1 ಸಿನಿಮಾ ತಂಡ ಷರತ್ತು ಉಲ್ಲಂಘಿಸಿದರೆ ಚಿತ್ರೀಕರಣ ಸ್ಥಗಿತ: ಅರಣ್ಯ… ನಂಗೆ ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ, ಪಕ್ಷಕ್ಕಾಗಿ ತ್ಯಾಗ ಮಾಡಿಕೊಂಡೇ ಬಂದಿದ್ದೇನೆ: ಡಿಸಿಎಂ ಡಿ.ಕೆ.… ಮಹಾತ್ಮ ಗಾಂಧಿ ರಿಯಲ್ ಗಾಂಧಿ, ಸೋನಿಯಾ, ರಾಹುಲ್, ಪ್ರಿಯಾಂಕ ಅವರು ನಕಲಿ ಗಾಂಧಿಗಳು:… ಬೆಂಗಳೂರು ಐಟಿ ಹಬ್, ವ್ಯೂಹಾತ್ಮಕ ನಗರ; ಇಲ್ಲೇ ಐಕ್ಯಾಟ್ ಕೇಂದ್ರ ಖಚಿತ: ಕೇಂದ್ರ… ಮುಡಾ ಕುರಿತು ಇಡಿ ಪತ್ರಿಕಾ ಪ್ರಕಟಣೆ ರಾಜಕೀಯ ಪ್ರೇರಿತ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ 5ರ ಹರೆಯದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಸೂಕ್ತ ಕ್ರಮಕ್ಕೆ ಜನವಾದಿ ಮಹಿಳಾ… ಮಂಗಳೂರಿನ ಜನತೆಗೆ ಕಲುಷಿತ ನೀರು ಪೂರೈಕೆ: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ…

ಇತ್ತೀಚಿನ ಸುದ್ದಿ

ತೀರ್ಥಹಳ್ಳಿ: ಚುನಾವಣೆ ಸಮಯದಲ್ಲಿ ರಾಮ ರಾಮ; ವರ್ಷವಾದ ನಂತರ ರಾಮನಿಗೆ ನಾಮ..!?

22/01/2025, 13:35

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಕಳೆದ ವರ್ಷ 2024ರ ಜನವರಿ 22ರಂದು ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿತ್ತು.
ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠೆ ಅತ್ಯಂತ ವೈಭವದಿಂದ ನಡೆದಿತ್ತು. ಇದರ ಹಿನ್ನಲೆ ಪ್ರತಿ ಊರು, ಗ್ರಾಮ ಹಳ್ಳಿ ಹಳ್ಳಿಗಳಲ್ಲಿ ರಾಜಕೀಯ ಮುಖಂಡರ ನೇತೃತ್ವದಲ್ಲಿ ಪೂಜೆ ಪುನಸ್ಕಾರ ನಡೆದವು. ಆದರೆ ಈ ಬಾರಿ ಅವೆಲ್ಲವೂ ಮಾಯವಾಗಿವೆ.!
ಹೌದು, ತೀರ್ಥಹಳ್ಳಿಯ ರಥಬೀದಿಯಲ್ಲಿರುವ ಸಮಗೋಡು ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಕಳೆದ ಬಾರಿ ರಾಜಕೀಯ ಮುಖಂಡರ ನೇತೃತ್ವದಲ್ಲಿ ಪೂಜೆ, ಹೋಮ, ಹವನ, ದೇವರಿಗೆ ವಿಶೇಷ ಅಲಂಕಾರ ಎಲ್ಲವನ್ನು ಮಾಡಲಾಗಿತ್ತು. ಅಷ್ಟೇ ಅಲ್ಲದೆ ದೇವಸ್ಥಾನದ ಸುತ್ತ ಮುತ್ತಲೂ ಸ್ವಚ್ಛತೆ ಮಾಡಲಾಗಿತ್ತು. ಆದರೆ ಈ ಬಾರಿ ದೇವಸ್ಥಾನ ಸಂಪೂರ್ಣ ಖಾಲಿ ಖಾಲಿ ಆಗಿದೆ. ಶ್ರೀ ರಾಮನ ವಾರ್ಷಿಕೋತ್ಸವದ ಹಿನ್ನಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಇದೆ ಎಂದು ಭಾವಿಸಿದ್ದ ಹಲವಾರು ಭಕ್ತರು ವಾಪಸಾಗಿದ್ದಾರೆ. ಅಲ್ಲಿಗೆ ರಾಜಕೀಯ ಮುಖಂಡರಿಗೆ ದೇವರು ಬರಿ ಚುನಾವಣೆ ಸಮಯದಲ್ಲಿ ಮಾತ್ರ ನೆನಪಾಗುವುದು, ಚುನಾವಣೆ ಸಮಯದಲ್ಲಿ ಪೂಜೆ ಪುನಸ್ಕಾರ ಮಾಡುವುದು ಅದನ್ನು ಬಿಟ್ಟರೆ ಮತ್ತೆ ಐದು ವರ್ಷದ ನಂತರ ಎಂದು ಅಲ್ಲಿಗೆ ಆಗಮಿಸಿದ್ದ ಭಕ್ತರು ಹೇಳಿದ್ದಾರೆ. ಕಳೆದ ಬಾರಿ ಕೋದಂಡರಾಮ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡುತ್ತೇವೆ. ಇಲ್ಲಿಗೂ ಭಕ್ತರು ಆಗಮಿಸಬೇಕು, ಪೂಜೆ ಪುನಸ್ಕಾರ ನಡೆಯಬೇಕು ಎಂದೆಲ್ಲಾ ಹೇಳಿದ್ದರು. ಈಗ ಅದ್ಯಾವುದು ಇಲ್ಲವಾಗಿದೆ.
ಒಟ್ಟಿನಲ್ಲಿ ಚುನಾವಣೆ ಸಮಯದಲ್ಲಿ ರಾಮ ರಾಮ ಎನ್ನುತ್ತಾರೆ ಅದೇ ಒಂದೇ ವರ್ಷದ ನಂತರ ರಾಮನಿಗೆ ನಾಮ ಹಾಕುತ್ತಾರೆ ಎಂದು ರಾಜಕೀಯ ಮುಖಂಡರಿಗೆ ಅಲ್ಲಿನ ಭಕ್ತರೊಬ್ಬರೋ ಆಕ್ರೋಶಭರಿತರಾಗಿ ಮಾತನಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು