11:21 PM Wednesday24 - September 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲಿ 3.25 ಎಕರೆ ಭೂಮಿಯಲ್ಲಿ ಟೆಕ್ ಪಾರ್ಕ್: ಐಟಿ ಮತ್ತು ಬಿಟಿ ಸಚಿವ… ಪದ್ಮಭೂಷಣ ಪುರಸ್ಕೃತ ಹಿರಿಯ ಸಾಹಿತಿ ಎಸ್​​​.ಎಲ್. ಭೈರಪ್ಪ ನಿಧನ Kodagu | ವಿರಾಜಪೇಟೆ, ಕುಶಾಲನಗರ ಮತ್ತು ಹುದಿಕೇರಿ ಆಸ್ಪತ್ರೆ ಮೇಲ್ದರ್ಜೆಗೆ: ಆರೋಗ್ಯ ಸಚಿವ… ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮಹಿಳೆಯರ ಬದುಕು ಸುಧಾರಣೆ: ಮಹಿಳಾ ದಸರಾ ಉದ್ಘಾಟಿಸಿ… ಪೊನ್ನಂಪೇಟೆ ಕೋಣಗೇರಿಯಲ್ಲಿ ಸೈನಿಕ ಪತಿಯಿಂದಲೇ ಪತ್ನಿಗೆ ಗುಂಡು: ಮೈಸೂರಿಗೆ ರವಾನೆ ಗೋಣಿಕೊಪ್ಪಲು ಬಿಟ್ಟಂಗಾಲ ಮುಖ್ಯರಸ್ತೆಯಲ್ಲಿ ಖಾಸಗಿ ಬಸ್ – ಜೀಪು ಅಪಘಾತ: ಅದೃಷ್ಟವಶಾತ್ ಎಲ್ಲರೂ… Kodagu | ಐತಿಹಾಸಿಕ ಮಡಿಕೇರಿ ದಸರಾಕ್ಕೆ ಚಾಲನೆ: 4 ಶಕ್ತಿ ದೇವತೆಗಳಿಗೆ ವಿಶೇಷ… ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಸರ್ಕಾರದಿಂದ 6 ಕೋಟಿ ನಗದು ಬಹುಮಾನ: ಮುಖ್ಯಮಂತ್ರಿ… ಜಿಎಸ್ ಟಿ ಜಾರಿ ಮಾಡಿದ್ದೂ ಮೋದಿ, ಜಿಎಸ್ ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ,… ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ 3.25 ಎಕರೆ ಭೂಮಿಯಲ್ಲಿ ಟೆಕ್ ಪಾರ್ಕ್: ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ

24/09/2025, 22:49

ಚಿತ್ರ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಮಂಗಳೂರಿನಲ್ಲಿ 3.25 ಎಕರೆ ಭೂಮಿಯಲ್ಲಿ ಟೆಕ್ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದು 3.5 ಲಕ್ಷ ಚದರ ಅಡಿ ವಿಸ್ತೀರ್ಣದ ಕಟ್ಟಡ ಮತ್ತು 3500 ಕೋಟಿ ರೂ.ಗಳ ಕಾರ್ಯಕಾರಿ ಬಂಡವಾಳದೊಂದಿಗೆ ಟೆಕ್‌ಪಾರ್ಕ್ ಅಸ್ತಿತ್ವಕ್ಕೆ ಬರಲಿದ್ದು, ಮುಂದಿನ ಐದು ವರ್ಷದೊಳಗೆ ಮಂಗಳೂರನ್ನು ಐಟಿ ಕ್ಷೇತ್ರದಲ್ಲಿ ಮತ್ತೊಂದು ಬೆಂಗಳೂರು ಆಗಿ ರೂಪಿಸಲು ಪ್ರಯತ್ನವಾಗಲಿದೆ ಎಂದು ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಟಿಎಂಎ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಬುಧವಾರ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ)ನ ಐದನೇ ಆವೃತ್ತಿಯ ಟೆಕ್ನೋವಾಂಜಾ 2025 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮಂಗಳೂರಿನಲ್ಲಿ ಅತಿ ದೊಡ್ಡ ಟೆಕ್ ಪಾರ್ಕ್ ನಿರ್ಮಾಣದ ಪ್ರಸ್ತಾವನೆಯು ನಾಳೆ ಅಥವಾ ಮುಂದಿನ ವಾರ ಅನುಮೋದನೆಗಾಗಿ ಸಚಿವ ಸಂಪುಟದ ಮುಂದೆ ಬರಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ನುಡಿದರು.
ಮಂಗಳೂರಿನ ಅಭಿವೃದ್ಧಿಯ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಬೇಧ ಮರೆತು ಜತೆಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಕರೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಸರಕಾರದ ವೀಕ್ಷಿತ್ ಭಾರತ್, ಮೇಕ್ ಇನ್ ಇಂಡಿಯಾ ಮೊದಲಾದ ಕಾರ್ಯಕ್ರಮಗಳಿಗೆ ರಾಜ್ಯ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಿದ್ಧವಿದ್ದು, ಸಂಸದರು ಈ ಬಗ್ಗೆ ಕಾರ್ಯಪ್ರವೃತ್ತರಾಗುವಂತೆ ಮನವಿ ಮಾಡಿದರು.



ಕರ್ನಾಟಕದ ಜಾಗತಿಕ ಸಾಮರ್ಥ್ಯ ಕೇಂದ್ರ(ಜಿಸಿಸಿ)ಗಳ ನೀತಿಯು ಮಹಾತ್ವಾಕಾಂಕ್ಷೆಯಿಂದ ಕೂಡಿದ್ದು, 2029ರೊಳಗೆ ರಾಜ್ಯದ್ಲಿ 500 ಹೊಸ ಜಿಸಿಸಿಗಳನ್ನು ಆಕರ್ಷಿಸುವ ಗುರಿ ಹೊಂದಿರುವುದಾಗಿ ಹೇಳಿದರು. ಈ ಮೂಲಕ 3.5ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಿದ್ದು, ಇದಕ್ಕಗಾಗಿ ಮುಂದಿನ ತಿಂಗಳು ಸರಕಾರವು ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಆರ್ಥಿಕ ನೀತಿಯನ್ನು ರೂಪಿಸಲಿದೆ ಎಂದವರು ಹೇಳಿದರು.
ಈ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ಯುವ ಉದ್ಯಮಿಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಇನೋಸಿಸ್‌ನ ಮಾಜಿ ಸಿಎ-ಒ ಮೋಹನದಾಸ್ ಪೈ ಅವರು ಕರ್ನಾಟಕದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಪೋಷಿಸಲು ಮತ್ತು ರಾಜ್ಯವನ್ನು ಎಐ ಹಬ ಆಗಿಸಲು ‘ಎಲಿವೇಟ ಎಐ 100 ಕಾರ್ಯಕ್ರಮ’ದ ಅಗತ್ಯತೆ ಬಗ್ಗೆ ತಿಳಿಸಿದಾಗ, ನವೆಂಬರ್ 18 ರಿಂದ 20 ರವರೆಗೆ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ 3025 ರಲ್ಲಿ ಈ ವಿಚಾರವನ್ನು ಚರ್ಚಿಸಲಾಗುವುದು ಎಂದರು.
ಎಐ ಎಲಿವೇಟ್ 100 ಗಾಗಿ ನಾನು 5 ಕೋಟಿ ರೂ.ಗಳ ಪ್ರತಿಜ್ಞೆ ಮಾಡಲುಸಿದ್ಧ. ದೇಶದ ಇತರ ಉದ್ಯಮ ಸಂಸ್ಥೆಗಳು ಮುಂಬರುವ ಸಭೆಯಲ್ಲಿ ಭಾಗವಹಿಸಿ ತಲಾ 5 ಕೋಟಿ ರೂ.ಗಳ ವಾಗ್ದಾನ ಮಾಡುವುದನ್ನು ಖಾತರಿಪಡಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಲಹೆ ನೀಡಿದರು.
ಕರ್ನಾಟಕ ಡಿಜಿಟಲ ಎಕಾನಮಿ ಮಿಷನ್‌ನ ಅಧ್ಯಕ್ಷ ಬಿ.ವಿ. ನಾಯ್ಡು, ಕೇಂದ್ರ ಸರಕಾರದಿಂದ ಕರ್ನಾಟಕದಲ್ಲಿ ಗಿ- ಸಿಟಿ ಘೋಷಣೆಗೆ ಪ್ರಯತ್ನಿಸಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ಕರ್ನಾಟಕದಿಂದ ಈಗಾಗಲೇ ಕೇಂದ್ರಕ್ಕೆ ಸಲ್ಲಿಕೆಯಾದ ಬೇಡಿಕೆ ತಿರಸ್ಕರಿಸಲ್ಪಟ್ಟಿದೆ. ದೇಶಕ್ಕೆ ಒಂದೇ ಗಿಫ್ಟ್ ಸಿಟಿ ಹಬ್ ನೀಡಲು ಸಾಧ್ಯ ಎಂದು ಹೇಳಿ ಅದನ್ನು ಗುಜರಾತ್‌ಗೆ ಮಾನ್ಯ ಮಾಡಲಾಗಿದೆ. ಆದರೆ, ಯುವ ಸಂಸದ ಬ್ರಿಜೇಶ್ ಚೌಟ ಅಂತಹವರು ಈ ಬಗ್ಗೆ ಒತ್ತು ನೀಡಿ ಕೇಂದ್ರದ ಮನವೊಲಿಸಿದರೆ ಸಾಧ್ಯವಾಗಬಹುದು. ಕರ್ನಾಟಕದ ಎಲ್ಲಾ ಸಂಸದರು ಈ ಬಗ್ಗೆ ಕೇಂದ್ರದ ಹಣಕಾಸು ಸಚಿವರು ಹಾಗೂ ಪ್ರಧಾನಿ ಜತೆ ಮಾತನಾಡಿ ಒತ್ತಡ ಹೇರಬೇಕಾಗಿದೆ ಎಂದವರು ಹೇಳಿದರು.

ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಕೆಡಿಇಎಂ ಮೂಲಕ ರಾಜ್ಯ ಸರಕಾರವು ಟೆಕ್ನೋವಾಂಜಾ ಕಾಯರ್ಕಕ್ರಮಕ್ಕೆ ಉತ್ತೇಜನ ನೀಡಿರುವುದು ಅಭಿನಂದನೀಯ. ಜಿಲ್ಲೆಯ ಬಂದರು ಸೇರಿದಂತೆ ಸಾಮರ್ಥ್ಯ ಇರುವ ಇತರ ಉದ್ದಿಮೆ ವಲಯಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಿ, ಅಭಿವೃದ್ಧಿಯ ದಿಸೆಯಲ್ಲಿ ಜನಪ್ರತಿನಿಧಿಗಳು ಒಂದಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಅವರು ನುಡಿದರು.
ಕೆಡಿಇಎಂನ ಅಧ್ಯಕ್ಷ ಬಿ.ವಿ. ನಾಯ್ಡು, ಬೆಂಗಳೂರಿನ ಎಸ್‌ಟಿಪಿಐ ಸಂಸ್ಥೆಯ ಸಂಜಯ್ ತ್ಯಾಗಿ ಮಾತನಾಡಿದರು.
ಶಾಸಕರಾದ ವೇದವ್ಯಾಸ ಕಾಮತ್, ಡಾ. ಮಂಜುನಾಥ ಭಂಡಾರಿ, ಹಿರಿಯ ಅಧಿಕಾರಿ ಎಲ್.ಕೆ. ಅತೀಕ್ ಮತ್ತಿತರರು ಉಪಸ್ಥಿತರಿದ್ದರು.




ಲವಿಟ ಮೆನೆಜಸ್ ಕಾರ್ಯಕ್ರಮ ನಿರೂಪಿದರು.

ಇತ್ತೀಚಿನ ಸುದ್ದಿ

ಜಾಹೀರಾತು