6:46 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಸುರತ್ಕಲ್ ನಲ್ಲಿ ಮಿ. ದಕ್ಷಿಣ ಕನ್ನಡ-2023 ದೇಹದಾರ್ಡ್ಯ ಸ್ಪರ್ಧೆ: ಶಾಸಕ ಡಾ. ಭರತ್ ಶೆಟ್ಟಿ ಉದ್ಘಾಟನೆ

09/12/2023, 22:32

ಸುರತ್ಕಲ್(reporterkarnataka.com): ಝೆನ್ ಜಿಮ್ ಸುರತ್ಕಲ್ ಹಾಗೂ ದ.ಕ. ಅಶೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಮಂಗಳೂರು ಜಂಟಿ ಆಶ್ರಯದಲ್ಲಿ ಮಿ. ದಕ್ಷಿಣ ಕನ್ನಡ 2023 ದೇಹದಾರ್ಡ್ಯ ಸ್ಪರ್ಧೆಯನ್ನು ಶನಿವಾರ ಇಲ್ಲಿನ ಕರ್ನಾಟಕ ಸೇವಾ ವೃಂದ ಸಭಾಂಗಣದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ವೈ. ಉದ್ಘಾಟಿಸಿದರು.


ಉದ್ಘಾಟನೆ ನೆರವೇರಿಸಿ ಮಾತಾಡಿದ ಡಾ.ವೈ. ಭರತ್ ಶೆಟ್ಟಿ ಅವರು “ಬಾಡಿ ಬಿಲ್ಡರ್ಗಳಿಗೆ ನಿರ್ದಿಷ್ಟ ನಿಯಮಗಳು ಅಗತ್ಯವಾಗಿದೆ. ತೆಗೆದುಕೊಳ್ಳುವ ಆಹಾರ, ಸಪ್ಲಿಮೆಂಟ್ ಗಳಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ದೇಹದಾರ್ಡ್ಯ ಅನ್ನುವುದು ಸುಲಭದ ಮಾತಲ್ಲ. ಇನ್ನು ಇಂತಹ ಸ್ಪರ್ಧೆ ಆಯೋಜನೆ ಮಾಡುವುದು ಕೂಡ ಕಷ್ಟ. ಯಾಕೆಂದರೆ ದೇಶದಲ್ಲಿ ಕ್ರಿಕೆಟ್ ನಂತಹ ಕ್ರೀಡೆಗಳಿಗೆ ಇರುವಷ್ಟು ಪ್ರೋತ್ಸಾಹ ಇಂತಹ ಕ್ರೀಡೆಗಳಿಗಿಲ್ಲ. ಹೀಗಿದ್ದರೂ ಪುಂಡಲೀಕ ಹೊಸಬೆಟ್ಟು ಮತ್ತವರ ತಂಡ ಸಾಕಷ್ಟು ಶ್ರಮವಹಿಸಿ ಸ್ಪರ್ಧೆಯನ್ನು ಆಯೋಜನೆ ಮಾಡಿದೆ. ಇದಕ್ಕಾಗಿ ಅವರಿಗೆ ಅಭಿನಂದನೆಗಳು. ಮುಂದೆಯೂ ಇಂತಹ ಸ್ಪರ್ಧೆ ನಿತ್ಯ ನಿರಂತರವಾಗಿ ನಡೆಯಲಿ” ಎಂದು ಶುಭ ಹಾರೈಸಿದರು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಜಿ. ಶಂಕರ್ , ಸ್ಪರ್ಧಾ ಸಮಿತಿ ಅಧ್ಯಕ್ಷ ಪುಂಡಲೀಕ ಹೊಸಬೆಟ್ಟು, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು