5:40 PM Monday15 - September 2025
ಬ್ರೇಕಿಂಗ್ ನ್ಯೂಸ್
ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ…

ಇತ್ತೀಚಿನ ಸುದ್ದಿ

ಹರಿದ್ವಾರದಲ್ಲಿ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವ ವೈಭವ: 1008 ವಿಶೇಷ ಪವಮಾನಾಭಿಷೇಕ ಸೇವೆ

14/04/2025, 23:20

ಮಂಗಳೂರು(reporterkarnataka.com): ಕಾಶೀಮಠದ ಹಿರಿಯ ಯತಿವರ್ಯರೂ, ಭಕ್ತರ ಪಾಲಿನ ಮಾತನಾಡುವ ದೇವರೆಂದೇ ಜನಜನಿತರಾಗಿರುವ, ಮಹಾತಪಸ್ವಿಗಳಾಗಿರುವ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವ ಆಚರಣೆ ಏಪ್ರಿಲ್ 8ರಿಂದ 14 ರ ತನಕ ಜರುಗಿದ್ದು, ಎಪ್ರಿಲ್ 14 ರಂದು ಶ್ರೀಗಳ ನೂರನೇ ಜನ್ಮನಕ್ಷತ್ರದಂದು ವಿಶೇಷ ಕಾರ್ಯಕ್ರಮಗಳು ಉತ್ತರಾಖಂಡದ
ಹರಿದ್ವಾರದಲ್ಲಿರುವ ವ್ಯಾಸಾಶ್ರಮದಲ್ಲಿ ನಡೆದವು.


ಬೆಳಿಗ್ಗೆ 1008 ವಿಶೇಷ ಪವಮಾನಾಭಿಷೇಕ ಸೇವೆ ನಡೆಯಿತು. ಭಾರತದ ವಿವಿಧ ದಿಕ್ಕುಗಳಲ್ಲಿ ಹರಿಯುತ್ತಿರುವ ಪವಿತ್ರ ನದಿಗಳ ತೀರ್ಥವನ್ನು ಸಂಗ್ರಹಿಸಿ ಅದನ್ನು ಹರಿದ್ವಾರದ ವ್ಯಾಸಾಶ್ರಮಕ್ಕೆ ತರಲಾಗಿತ್ತು. ಇದು ಚಾರಿತ್ರಿಕವಾಗಿರುವ ದಾಖಲೆಯಾಗಿದೆ. ಎಲ್ಲಾ ಪವಿತ್ರ ನದಿಗಳ ತೀರ್ಥವನ್ನು ಸ್ವಾಮೀಜಿಯವರ ವೃಂದಾವನದಲ್ಲಿ ಅಭಿಷೇಕ ಮಾಡಲಾಯಿತು. ಇನ್ನು 1008 ಬೆಳ್ಳಿ ನಾಣ್ಯಗಳನ್ನು ಸೇವಾದಾರರಿಗೆ ವಿತರಿಸಲಾಯಿತು. ಆ ಬಳಿಕ ಸ್ವರ್ಣ ಪುಷ್ಪಾರ್ಚನಾ ಕಾರ್ಯಕ್ರಮ ನಡೆಯಿತು. ಮೊದಲಿಗೆ ವೃಂದಾವನದಲ್ಲಿರುವ ಹನುಮಂತ ದೇವರ ಪಾದಗಳಿಗೆ ಸ್ವರ್ಣ ಪುಷ್ಪಾಚನೆ ನಡೆಸಲಾಯಿತು. ಬಳಿಕ ಗುರುಪಾದುಕೆಗೆ ಸ್ವರ್ಣ ಪುಷ್ಪಾಚನೆ ನಡೆಯಿತು. ಆ ಸ್ವರ್ಣ ಪುಷ್ಪಗಳನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸಲಾಯಿತು. ಆಗಮಿಸಿದ ಎಲ್ಲಾ ಭಕ್ತರಿಗೆ ಕಾಶೀಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಗಂಧ ಪ್ರಸಾದ ನೀಡಲಾಯಿತು. ತಿರುಪತಿ ಲಾಡು, ಫಲವಸ್ತು, ಮಹಿಳೆಯರಿಗೆ ಸೀರೆ, ಗಂಡಸರಿಗೆ ಧೋತಿ, ಹೆಣ್ಣುಮಕ್ಕಳಿಗೆ, ಗಂಡುಮಕ್ಕಳಿಗೆ ವಸ್ತ್ರಗಳನ್ನು ವಿತರಿಸಲಾಯಿತು. ಸುಧೀಂದ್ರ ವೇದಿಕೆಯಲ್ಲಿ ವಿಷ್ಣು ಸಹಸ್ರನಾಮ ಪಠಣ, ಸಾಮೂಹಿಕ ಕುಂಕುಮಾರ್ಚನೆ, ಸಾಮೂಹಿಕ ದುರ್ಗಾ ನಮಸ್ಕಾರ, ಸಹಸ್ರ ಚಂಡಿಕಾಯಾಗ, ಋತ್ಮಿಕಾ ಯಾಗ, ಗುರುಗುಣಗಾನ, ಭಜನಾ ಕಾರ್ಯಕ್ರಮಗಳು ನಡೆಯಿತು. ಸಂಜೆ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಆರ್ಶೀವಚನ ನೀಡಿದರು. ದೇಶ, ವಿದೇಶದಿಂದ ನಾಲ್ಕು ಸಾವಿರಕ್ಕೂ ಮಿಕ್ಕಿ ಭಕ್ತರು ಈ ಪುಣ್ಯಕಾರ್ಯದಲ್ಲಿ ಭಾಗವಹಿಸಿ ಧನ್ಯರಾದರು. ಮುಂಬೈಯ ಜಿಎಸ್ ಬಿ ಸೇವಾ ಮಂಡಲ, ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಟಾನ, ದೆಹಲಿ ಸಮಾಜ, ಬೆಂಗಳೂರು ಸಮಾಜ ಸಹಿತ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ವೈದಿಕ ವೃಂದ ಈ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು