ಇತ್ತೀಚಿನ ಸುದ್ದಿ
ಆಸ್ತಿಗಾಗಿ ಸಾಕು ತಾಯಿಯನ್ನೇ ಕೊಂದ ಪಾಪಿ ಪುತ್ರಿ: ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ
13/11/2025, 18:34
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಆಸ್ತಿಗಾಗಿ ಸಾಕು ತಾಯಿಯನ್ನೇ ಪಾಪಿ ಮಗಳೊಬ್ಬಳು ಕೊಂದ ಘಟನೆ ಎನ್.ಆರ್.ಪುರ ತಾಲೂಕಿನ ಬಂಡಿಮಠ ಗ್ರಾಮದಲ್ಲಿ ನಡೆಯಿತು.

ಒಂದೂವರೆ ಎಕರೆ ಜಮೀನು ಹಾಗೂ ಮನೆಗಾಗಿ ಅಮ್ಮನನ್ನೇ ಕೊಲೆಗೈದಿದ್ದಾಳೆ ಎಂದು ಆರೋಪಿಸಲಾಗಿದೆ. ಕುಸುಮ (62) ಮಗಳಿಂದಲೇ ಕೊಲೆಯಾದ ನತದೃಷ್ಟ ತಾಯಿ.
ಸುಧಾ (35) ಆಸ್ತಿಗಾಗಿ ಅಮ್ಮನ ಕೊಂದ ಮಗಳು.
ಅಮ್ಮ ರಾತ್ರಿ ಮಲಗಿದ್ದಾಗ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂದು ದೂರಲಾಗಿದೆ. ಕೂಲಿಗಾಗಿ ಬೇರೆ ಊರಿನಿಂದ ಬಂದು ಬಂಡಿಮಠದಲ್ಲಿ ವಾಸವಿದ್ದ ಕುಟುಂಬ ಇದಾಗಿದೆ.
ಊರಿನಲ್ಲಿರೋ ಆಸ್ತಿ ಕೈತಪ್ಪುತ್ತೆ ಎಂದು ತಾಯಿಯನ್ನೇ ಮಗಳು ಕೊಂದು ಹಾಕಿದ್ದಾಳೆ.
ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.












