2:56 AM Friday4 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

ಇತ್ತೀಚಿನ ಸುದ್ದಿ

ಸಿದ್ಧಿ ಸಮುದಾಯದ ನಾಯಕ, ಕರ್ನಾಟಕದ ನೆಲ್ಸನ್ ಮಂಡೇಲಾ ಎಂದೇ ಖ್ಯಾತರಾದ ಡಿಯಾಗೋ ಇನ್ನಿಲ್ಲ

13/08/2021, 10:46

ಕಾರವಾರ(reporterkarnataka.com):

ಸಿದ್ಧಿ ಸಮುದಾಯದ ನಾಯಕ, ಹೋರಾಟಗಾರ, ಕರ್ನಾಟಕದ ನೆಲ್ಸನ್ ಮಂಡೇಲಾ ಎಂದೇ ಖ್ಯಾತರಾದ ಯಲ್ಲಾಪುರ ತೊಟ್ಟಿಲ್ಗುಂಡಿಯ ( ಹಳಿಯಾಳ ) ಡಿಯಾಗೋ ಬಸ್ತ್ಯಾವ್ ಸಿದ್ಧಿ ನಿಧನರಾಗಿದ್ದಾರೆ.

ಡಿಯಾಗೋ ಅವರು ತನ್ನ ಬದುಕಿನ ಪೂರ್ತಿ ಸಿದ್ಧಿ ಸಮುದಾಯದ ವಿಕಸನ, ಪಶ್ಚಿಮ ಘಟ್ಟ ಸಂರಕ್ಷಣೆ, ಸಮಾಜ ಸುಧಾರಣೆ ಬಗ್ಗೆ ಹೋರಾಟ ನಡೆಸಿದ್ದಾರೆ.

ತನ್ನ ವೈಯಕ್ತಿಕ ಬದುಕಿನ ಬಗ್ಗೆ ಚಿಂತಿಸದೇ ತನ್ನ ಸಮುದಾಯದ ಮತ್ತು ಸಮಾಜ, ಪ್ರಕೃತಿ ಸಂರಕ್ಷಣೆಯ ಬಗ್ಗೆ ಚಿಂತಿಸುತ್ತಾ ಮತ್ತು ಅದರ ಬಗ್ಗೆ ಕಾರ್ಯ ಪ್ರವೃತ್ತರಾಗಿ ಬಂದಿದ್ದಾರೆ. ಅವರು ಯಲ್ಲಾಪುರದಿಂದ ಆರಂಭಗೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸಿದ್ದಾರೆ.

ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಅವರು ಡಿಯಾಗೋ ಅವರನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಅವರ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡ ಅನುಭವ ಹೊಂದಿದ್ದಾರೆ. ಡಿಯಾಗೋ ಅವರು ಇತ್ತೀಚೆಗೆ ಅನಾರೋಗ್ಯಪೀಡಿತರಾದ ಬಳಿಕವೂ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ ಬಂದಿದ್ದಾರೆ.

ಡಿಯಾಗೋ ಅವರ ಸಾವಿನ ಸುದ್ದಿ ಕೇಳಿ ಸಹಿಸಲು ಬಹಳ ಕಷ್ಟವಾಯಿತು. ಅವರ ಹೋರಾಟದ ದಿನಗಳು, ಕೆಚ್ಚೆದಯ ಕ್ಷಣಗಳು , ಸಮುದಾಯದ ಏಳಿಗೆಯ ಬಗ್ಗೆ ಅವರು ತೆಗೆದುಕೊಂಡ ನಿರ್ಣಯಗಳು ನಮ್ಮನ್ನು ಯಾವಾಗಲೂ ಎಚ್ಚರಿಸುವಂತಿದೆ. ಅವರ ಕೊನೆಯ ಆಶೋತ್ತರಗಳನ್ನು ನೆರವೇರಿಸಲು ಪ್ರಯತ್ನ ಆಗಲೇ ಬೇಕಾದ ಅನಿವಾರ್ಯತೆ ಈಗ ನಮ್ಮ ಮುಂದೆ ಇದೆ. 

– ದಿನೇಶ್ ಹೊಳ್ಳ, ಪರಿಸರಪರ ಹೋರಾಟಗಾರ

ಇತ್ತೀಚಿನ ಸುದ್ದಿ

ಜಾಹೀರಾತು