9:54 PM Tuesday22 - April 2025
ಬ್ರೇಕಿಂಗ್ ನ್ಯೂಸ್
ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ…

ಇತ್ತೀಚಿನ ಸುದ್ದಿ

ಸಿದ್ದರಾಮಯ್ಯ ಮಾಡಿರುವ ತಪ್ಪಿಗೆ ಕನಿಷ್ಠ ಶಿಕ್ಷೆ ಎಂದರೆ ಅವರು ರಾಜೀನಾಮೆ ಕೊಡುವುದು: ಆರಗ ಜ್ಞಾನೇಂದ್ರ

01/10/2024, 20:48

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಮುಡಾ ಹಗರಣದ ಬಗ್ಗೆ ನಾನು ನಿನ್ನೆ ರಾತ್ರಿ ಮಾಧ್ಯಮದಲ್ಲೇ ನೋಡುತ್ತಾ ಇದ್ದೆ. 14 ಸೈಟ್ ಗಳನ್ನು ನಾನು ಹಿಂತಿರುಗಿಸುತ್ತೇನೆಂದು ಪತ್ರ ಬರೆದಿದ್ದಾರೆ. ವಿಚಾರಣೆಯನ್ನು ಎದುರಿಸಲು ನಾನು ಸಿದ್ದ ನಾನು ಯಾವುದೇ ತಪ್ಪು ಮಾಡಿಲ್ಲ ಹೇಳುತ್ತಾ ಬರುತ್ತಿದ್ದರು. ಇದುವರೆಗೂ ಯಾಕೆ ಹೋರಾಟ ಮಾಡಿದ್ದರು ಎಂದು ಗೊತ್ತಿಲ್ಲ ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಮಂಗಳವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಿಎಂ ಪತ್ನಿ ಮುಡಾ ಸೈಟ್ ಹಿಂದಿರುಗಿಸಿದ ವಿಚಾರ ಮಾಧ್ಯಮದ ಜೊತೆಗೆ
ಮಾತನಾಡಿ,ಸಿದ್ದರಾಮಯ್ಯನವರನ್ನು ಅಪರಾಧಿ ಎಂದು ರಾಜ್ಯಪಾಲರು ಹೇಳಿಲ್ಲ. ನಿಮ್ಮ ಮೇಲೆ ತನಿಖೆ ಆಗಲಿ ಎಂದು ಒಪ್ಪಿಗೆ ನೀಡಿದ್ದರು
ರಾಜ್ಯಪಾಲರ ಸ್ಥಾನ ಒಂದು ಸಂವಿಧಾನದ ದತ್ತ ಪೀಠ. ಅಂತವರಿಗೆ ಪ್ರತಿಭಟನೆ ಮಾಡಿ ಚಪ್ಪಲಿ ಹಾರ ಹಾಕುವಂತಹ ಕೆಲಸಗಳನ್ನು ಮಾಡಿದ್ದರು.
ಹಳ್ಳಿ ಹಳ್ಳಿಗಳಲ್ಲೂ ಕಾಂಗ್ರೆಸ್ ಕಾರ್ಯಕರ್ತರ ಈ ರೀತಿ ಮಾಡಿದ್ದಾರೆ. ಕಾನೂನು ಸಂವಿಧಾನ ನಮಗೆ ಯಾವುದು ಅಪ್ಲೈ ಆಗುವುದಿಲ್ಲ ಎಂಬ ದೌರ್ಜನ್ಯದಿಂದ ಕಾಂಗ್ರೆಸ್ ನವರು ಮಾಡಿದ್ದಾರೆ ಎಂದರು.
ಕಾನೂನು ಸಂವಿಧಾನ ಎಲ್ಲವೂ ಬೇರೆಯವರಿಗೆ ಎಂದು ಭಾವಿಸಿದ್ದಾರೆ. ಆದರೆ ಸೋಮವಾರ ಅವರು ನಾವು ತಪ್ಪು ಮಾಡಿದ್ದೇವೆ ಎಂದು ಶರಣಾಗತಿ ಆದಂತೆ ಕಾಣುತ್ತಿದೆ. ಈ ಕೆಲಸವನ್ನ ಮೊದಲೇ ಮಾಡಬಹುದಿತ್ತಲ್ಲ.ನನ್ನ ನಲವತ್ತು ವರ್ಷದ ಸರ್ವಿಸ್ ನಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ, ಕಪ್ಪು ಚುಕ್ಕೆ ಇಲ್ಲ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಯಾಕೆ ಹಿಂಗೆ ಆಗೋದ್ರು
ನಾನು ಘರ್ಜನೆ ಮಾಡಿದರೆ ನಡೆಯುತ್ತದೆ, ನಾನು ನೂರು ಸಾರಿ ಸುಳ್ಳು ಹೇಳಿದರೆ ಅದು ಸತ್ಯ ಆಗುತ್ತದೆ ಎಂಬ ಎಂಬ ಭಾವನೆ ಅವರಲ್ಲಿತ್ತು.
ಈಗ ಅವರು ಒಪ್ಪಿಕೊಂಡಿದ್ದವರದಿಂದ ಅವರ ತಪ್ಪು ಹೊರಗೆ ಬಂದಿದೆ ಹಾಗೆ ಅವರ ತಪ್ಪು ಒಪ್ಪಿಕೊಂಡಂತಾಗಿದೆ. ಅವರು ಮಾಡಿರುವ ತಪ್ಪಿಗೆ ಕನಿಷ್ಠ ಶಿಕ್ಷೆ ಎಂದರೆ ಅವರು ರಾಜೀನಾಮೆ ಕೊಡುವುದು. ಅದು ಶಿಕ್ಷೆ ಅಲ್ಲ ಒಬ್ಬ ಅಪರಾಧಿ ಆ ಸ್ಥಾನದಲ್ಲಿ ನಿಂತು ರಾಜ್ಯಭಾರ ಮಾಡಬಾರದು ಎಂಬುದು ನಮ್ಮ ಅಭಿಪ್ರಾಯ ಎಂದರು.
ಎಲೆಕ್ಷನ್ ಬಾಂಡ್ ವಿಚಾರ ಮಾತನಾಡಿ ಪಾರ್ಟಿ ಫಂಡ್ಗೆ ಹಣ ತೆಗೆದುಕೊಳ್ಳುವುದು ಎಲ್ಲಾ ಪಕ್ಷಗಳು ತೆಗೆದುಕೊಂಡಿವೆ. ಕಾಂಗ್ರೆಸ್ ಅವರು ಕೂಡ ತೆಗೆದುಕೊಂಡಿದ್ದಾರೆ. ಹಾಗಾದ್ರೆ ಎಲ್ಲರೂ ರಾಜೀನಾಮೆ ಕೊಡಬೇಕು, ರಾಹುಲ್ ಗಾಂಧಿ, ಖರ್ಗೆ ಅವರು ಎಲ್ಲರೂ ಕೊಡಬೇಕು. ಮುಡಾ ಪ್ರಕರಣವನ್ನು ಪ್ರಸ್ತಾಪ ಮಾಡಿದ್ದಕ್ಕಾಗಿ ಈ ರೀತಿ ಹುಡುಕಿ ಎಫ್ಐಆರ್ ಮಾಡಿಸುವಂತ ಕೆಲಸ ಮಾಡುತ್ತಿದ್ದಾರೆ. ಇದು ಒಂದು ದುರಂತ ಎಲ್ಲ ಜನರಿಗೂ ಈ ವಿಚಾರ ಗೊತ್ತಾಗುತ್ತಿದೆ. ಬೇರೆ ಅವರಿಗೆ ಬೆರಳು ತೋರಿಸುವ ಮುನ್ನ ನಾನೇನು ಮಾಡಿದ್ದೇನೆ ಎಂಬುದನ್ನು ಯೋಚಿಸಬೇಕು ಮೊದಲು ನೀವು ರಾಜೀನಾಮೆ ಕೊಡಿ ಎಂದು ಸಿದ್ದರಾಮಯ್ಯನವರಿಗೆ ಒತ್ತಾಯಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು