12:27 PM Saturday5 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

ಇತ್ತೀಚಿನ ಸುದ್ದಿ

ಬಸ್ಸಿನಲ್ಲೇ ಅಸ್ವಸ್ಥಗೊಂಡ ಯುವತಿ: ಬಾಯಿಗೆ ಶ್ವಾಸ ನೀಡಿ ಮಾನವೀಯತೆ ಮೆರೆದ ಮುಸ್ಲಿಂ ಯುವತಿ; ಬಸ್ಸನ್ನು ಆಸ್ಪತ್ರೆಗೆ ಒಯ್ದು ಸಿಬ್ಬಂದಿ

01/10/2024, 21:53

ಹೆಬ್ರಿ(reporterarnataka.com): ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಅಸ್ವಸ್ಥ ಗೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಸಿಬ್ಬಂದಿಗಳು ನೇರವಾಗಿ ಹೆಬ್ರಿಯ ಸರ್ಕಾರಿ ಸಮುದಾಯ ಕೇಂದ್ರ ಆಸ್ಪತ್ರೆಗೆ ದಾಖಲು ಮಾಡಿ ಜೀವ ಉಳಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಸರ್ಕಾರಿ ಬಸ್ ಶಿವಮೊಗ್ಗದಿಂದ ಉಡುಪಿಯತ್ತ ಬರುತ್ತಿತ್ತು. ಸುರಕ್ಷಾ ಎಂಬವರು ಮೇಗರವಳ್ಳಿಯಲ್ಲಿ ಬಸ್ ಹತ್ತಿದ್ದರು. ಆಗುಂಬೆ ಘಾಟಿಯಲ್ಲಿ ತೀವ್ರ ಅಸ್ವಸ್ಥಗೊಂಡಾಗ ನಿರ್ವಾಹಕ ವಾಸಿಮ್ ದೇಸಾಯಿ ಆಕೆಯ ಸಹಾಯಕ್ಕೆ ಬಂದಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಸೋಮೇಶ್ವರದ ಉಪ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದುಕೊಂಡು ಹೋದಾಗ, ಸುರಕ್ಷಾ ಯಾವುದೇ ರೀತಿಯ ಚೇತರಿಕೆ ಕಂಡು ಬಂದಿಲ್ಲ. ಅಲ್ಲಿಂದ ನೇರವಾಗಿ ಪ್ರಯಾಣಿಕರ ಸಹಕಾರದೊಂದಿಗೆ ಹೆಬ್ರಿಯ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಬಂದು ಅವರನ್ನು ದಾಖಲು ಮಾಡಲಾಗಿದೆ.
*ಬಸ್ ಸಿಬ್ಬಂದಿಗಳ ತುರ್ತು ಸ್ಪಂದನೆಗೆ ವ್ಯಾಪಕ ಶ್ಲಾಘನೆ:* ಚಾಲಕ ತಾರೇಶ್ ಹಾಗೂ ನಿರ್ವಾಹಕ ವಾಸಿಮ್ ದೇಸಾಯಿ ಸುರಕ್ಷಾ ಚೇತರಿಕೆಗೆ ಬಹಳಷ್ಟು ಶ್ರಮವಹಿಸಿದರು. ಬಸ್ಸಿನಲ್ಲಿ ಯಾವುದೇ ಮಹಿಳೆಯರಿಂದ ಜೀವ ಉಳಿಸಲು ಸಹಾಯ ಕೇಳಿದಾಗ ಸಹಾಯ ಸಿಗದಿದ್ದರೂ, ಮುಸ್ಲಿಂ ಯುವತಿಯೊಬ್ಬರು ಒಬ್ಬಳು ಬಾಯಿಗೆ ಶ್ವಾಸ ನೀಡಿ ಮಾನವೀಯತೆ ಮೆರೆದಿದ್ದಾಳೆ. ಇವರೊಂದಿಗೆ ಸಿಬ್ಬಂದಿಗಳು ತೋರಿದ ಸಕಾಲಿಕ ಶ್ರಮದಿಂದ ಜೀವ ಉಳಿದಿದೆ. ಹೆಬ್ರಿಯ ಪೊಲೀಸರು, ಸಾರ್ವಜನಿಕರು ಅಭಿನಂದಿಸಿದ್ದಾರೆ.
*ಸೀಟು ಸಿಗುವುದಿಲ್ಲವೆಂದು ಅಲ್ಲಾಡದ ಮಹಿಳೆಯರು:* ನನ್ನ ಸಹೋದ್ಯೋಗಿ ವಾಸಿಮ್ ದೇಸಾಯಿ ಯಾವುದನ್ನು ಲೆಕ್ಕಿಸದೆ ಯುವತಿಯನ್ನು ತುರ್ತಾಗಿ ಚಿಕಿತ್ಸೆ ನೀಡಲು ಹೊತ್ತುಕೊಂಡು ಹೋದ ರೀತಿ ನನಗೆ ಕಣ್ಣಲ್ಲಿ ಬರುತ್ತಿದೆ. ಮಹಿಳೆಯರು ಸಹಾಯಕ್ಕೆ ಬರಲೇ ಇಲ್ಲ. ಕುಳಿತುಕೊಳ್ಳಲು ಸೀಟು ತಪ್ಪಿ ಹೋಗುತ್ತದೆ ಎಂಬ ಭಯದಿಂದ ಯಾರೂ ಸಹಾಯಕ್ಕೆ ಬಂದಿಲ್ಲ. ಮುಸ್ಲಿಂ ಸಹೋದರ ಸಹೋದರಿಯಿಂದ ಸುರಕ್ಷಾ ಇಂದು ಚೇತರಿಸಿಕೊಳ್ಳುತ್ತಿದ್ದಾಳೆ. ಇದು ಸಮಾಜಕ್ಕೆ ಮಾದರಿಯಾಗಬೇಕು. ಹೆಬ್ರಿ ಪೊಲೀಸರು ಕೂಡ ಸೋಮೇಶ್ವರದಿಂದ ಹೆಬ್ರಿಯ ಆಸ್ಪತ್ರೆಯ ತನಕ ಟ್ರಾಪಿಕ್ ವ್ಯವಸ್ಥೆ ನೀಡಿ ಯುವತಿಯ ಜೀವ ಉಳಿಸಲು ಸಹಕಾರ ನೀಡಿದ್ದಾರೆ.

ದೇವರ ರೀತಿಯಲ್ಲಿ ಬಂದು ನನ್ನ ಮಗಳನ್ನು ಕಾಪಾಡಿದ ಸಿಬ್ಬಂದಿಗಳಿಗೆ ನನ್ನ ಮನಪೂರ್ವಕ ಕೃತಜ್ಞತೆ. ಉಸಿರಿರುವವರೆಗೆ ಅವರನ್ನು ನೆನಪು ಮಾಡುತ್ತೇನೆ. ಮುನಿಯಾಲಿನಲ್ಲಿ ದೊಡ್ಡಪ್ಪನ ಮನೆಯಲ್ಲಿ ಇದ್ದುಕೊಂಡು ನನ್ನ ಮಗಳು ವಿದ್ಯಾಭ್ಯಾಸ ಮಾಡುತ್ತಿದ್ದಳು.
ರೇಖಾ, ಸುರಕ್ಷಾ ಅವರ ತಾಯಿ.

ಘಟನೆ ಸಂಭವಿಸಿದಾಗ ನಾನು ಸೋಮೇಶ್ವರ ಚೆಕ್ ಪೋಸ್ಟ್ ನಲ್ಲಿದ್ದೆ.
ಬಸ್ ಸಿಬ್ಬಂದಿಗಳು ಕರ್ತವ್ಯ ಪ್ರಜ್ಞೆ ಮೆರೆದ ಹಿನ್ನೆಲೆಯಲ್ಲಿ ಅಪಾಯ ತಪ್ಪಿದೆ. ಇಂತಹ ಕೆಲಸಗಳು ಸಮಾಜಕ್ಕೆ ಮಾದರಿಯಾಗಬೇಕು.

ಮಹೇಶ್ ಟಿಎಂ, ಹೆಬ್ರಿ ಪಿಎಸ್ಐ.

ಆಗುಂಬೆ ತಿರುವಿನಲ್ಲಿ ಹುಡುಗಿ ತೀವ್ರ ಅಸ್ವಸ್ಥಗೊಂಡರು. ಬಹಳಷ್ಟು ಮಹಿಳೆಯರಲ್ಲಿ ಸಹಾಯ ಮಾಡಲು ಬೇಡಿಕೊಂಡರು, ಯಾರು ಮುಂದು ಬರಲಿಲ್ಲ. ಮುಸ್ಲಿಂ ಯುವತಿಯೊಬ್ಬಳು ಸಹಾಯ ಮಾಡಿ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರಯಾಣಿಕರ ಸಹಕಾರದೊಂದಿಗೆ ನೇರವಾಗಿ ಆಸ್ಪತ್ರೆಗೆ ಬಂದು ಒಂದು ಜೀವವನ್ನು ಉಳಿಸಿದ್ದೇವೆ. ನಮ್ಮ ಕರ್ತವ್ಯಕ್ಕೆ ಬಹಳಷ್ಟು ಮಂದಿ ಕರೆ ಮಾಡಿ ಶ್ಲಾಘಿಸುತ್ತಿದ್ದಾರೆ.
ವಾಸಿಮ್ ದೇಸಾಯಿ, ನಿರ್ವಾಹಕ, ಸರ್ಕಾರಿ ಬಸ್.

ಇತ್ತೀಚಿನ ಸುದ್ದಿ

ಜಾಹೀರಾತು