10:16 AM Wednesday7 - January 2026
ಬ್ರೇಕಿಂಗ್ ನ್ಯೂಸ್
ಇನ್ಫೋಸಿಸ್ ನಿಂದ 53.5 ಎಕರೆ ಭೂಮಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ: ತನಿಖೆಗೆ… ಕ್ವಾಂಟಮ್ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಸಹಭಾಗಿತ್ವಕ್ಕೆ ಪೆನಾಂಗ್ ಉಪಮುಖ್ಯಮಂತ್ರಿ ಒಲವು ಲಾರಿ- ಬೈಕ್ ಡಿಕ್ಕಿ: ಗಾಯಾಳು ಬೈಕ್ ಸವಾರ ಗೋಣಿಕೊಪ್ಪಲು ಲೋಪಮುದ್ರ ಆಸ್ಪತ್ರೆಯಲ್ಲಿ ಸಾವು ಸುದೀರ್ಘ ಅವಧಿಗೆ ಸಿಎಂ ಎಂಬ ದಾಖಲೆ ಜನರ ಆಶೀರ್ವಾದಿಂದ ಸಾಧ್ಯವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ; ಕಲಾವಿದರು,ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆ ಕಲ್ಪಿಸಿದೆ: ಮುಖ್ಯಮಂತ್ರಿ Kodagu | ಸಾರ್ವಜನಿಕವಾಗಿ ಬಂದೂಕು ಪ್ರದರ್ಶನ: 3 ಮಂದಿ ಆರೋಪಿಗಳ ಬಂಧನ ಸೋಶಿಯಲ್ ಮೀಡಿಯಾ ಪವರ್: 60 ವರ್ಷದ ವೃದ್ದನನ್ನು ಕುಟುಂಬದೊಂದಿಗೆ ಮತ್ತೆ ಒಂದಾಗಿಸಿದ ರೀಲ್ಸ್! ಜಗತ್ತಿನ 3ನೇ ಅತಿ ಎತ್ತರದ ಮೌಂಟ್ ಕೆನ್ಯಾ ಪರ್ವತ ಏರಿದ ಮಂಗಳೂರು ಮೂಲದ… Bangalore | ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನಕ್ಕೆ ಸಂಪುಟದ ಸಮ್ಮತಿ: 153 ಎಕರೆ… ಬಳ್ಳಾರಿ ಫೈಯರಿಂಗ್ | ಕೊಲೆ ಪ್ರಕರಣ ದಾಖಲಿಸಿ ಶಾಸಕರ ಕೂಡಲೇ ಬಂಧಿಸಿ: ಆರ್.ಅಶೋಕ್…

ಇತ್ತೀಚಿನ ಸುದ್ದಿ

ಶ್ರೀಕ್ಷೇತ್ರ ಕೇಮಾರಿನಲ್ಲಿ “ಟೆಲಿಬರವು” ತಂತ್ರಾಂಶ ಲೋಕಾರ್ಪಣೆ*

12/06/2023, 20:18

ಮಂಗಳೂರು(reporterkarnataka.com):ಸಂಸ್ಕೃತಿ ಮುಖ್ಯ, ದೇಶ ವಿದೇಶಕ್ಕೂ ಹೋದರೂ ತುಳು ಸಂಸ್ಕೃತಿಯನ್ನು ಮರೆಯಬಾರದು. ಆದರೆ ತುಳು ಭಾಷೆಯನ್ನು ಎಂಟನೇ ಪರೀಚ್ಛೇಧದಲ್ಲಿ ಸೇರಿಸುವಲ್ಲಿ ಈತನಕವೂ ಆಗದೇ ರಾಜಕಾರಣಿಗಳು ಕೇವಲ ಬಂಡಲ್ ಬಿಡುವಲ್ಲೇ ಕಾಲ ಕಳೆದರು ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಖೇದ ವ್ಯಕ್ತಪಡಿಸಿದರು.
ಜೈ ತುಲುನಾಡ್(ರಿ.) ಇದರ ನೇತೃತ್ವದಲ್ಲಿ ಶ್ರೀಕ್ಷೇತ್ರ ಕೇಮಾರಿನಲ್ಲಿ ಭಾನುವಾರ ‘ಟೆಲಿಬರವು’ ಎಂಬ ಆಪ್ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಈ ವೇಳೆ ‘ಟೆಲಿಬರವು’ ತಂತ್ರಾಂಶದ ರಚನೆಕಾರರಾದ ಜ್ಙಾನೇಶ ದೇರಳಕಟ್ಟೆ ಇವರನ್ನು ಸನ್ಮಾನಿಸಲಾಯಿತು. ಈ ತಂತ್ರಾಂಶದಲ್ಲಿ ಕನ್ನಡದಲ್ಲಿ ಬರೆದಂತಹ ಅಕ್ಷರಗಳು ತುಳು ಲಿಪಿಗೆ ಪರಿವರ್ತನೆಯಾಗುತ್ತದೆ ಎಂದು ಸನ್ಮಾನಿತರಾದ ಜ್ಞಾನೇಶ್ ಹೇಳಿದರು. ಸುಮಂತ್ ಹೆಬ್ರಿ ತಂತ್ರಾಂಶದ ಬಗ್ಗೆ ಮಾಹಿತಿ ನೀಡಿದರು..
ಈ ಸಂಧರ್ಭ ಕೇಮಾರ್ ಕ್ಷೇತ್ರದ ನಾಮಪಲಕವನ್ನು ತುಲುಲಿಪಿಯಲ್ಲಿ ಅಳವಡಿಸಿ ಉದ್ಘಾಟಿಸಲಾಯಿತು.
ಜೈ ತುಲುನಾಡ್ ಸಂಘಟನೆಯ ಅಧ್ಯಕ್ಷ ವಿಶು ಶ್ರೀಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಕಳ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೈ ತುಲುನಾಡ್ ಸಂಘಟನೆಯ ಉಪಾಧ್ಯಕ್ಷ ಉದಯ್ ಪೂಂಜಾ ಉಪಸ್ಥಿತರಿದ್ದರು. ಪೂರ್ಣಿಮಾ ಬಂಟ್ವಳಾ ಸನ್ಮಾನ ಪತ್ರ ವಾಚಿಸಿದರು. ಪವಿತ್ರ ಪೂಜಾರಿ ಸ್ವಾಗತಿಸಿ ಅಕ್ಷತ ಧನ್ಯವಾದ ಅರ್ಪಿಸಿದರು. ಕಿರಣ್ ತುಲುವೆ ಕಾರ್ಯಕ್ರಮ ನಿರೂಪಿಸಿದರು.

*ಟೆಲಿಬರವು*
ತುಲು ಭಾಷೆಗೆ ಯೂನಿಕೋಡ್ ಇಲ್ಲದಿರುವ ಕಾರಣ ಪರ್ಯಾಯವಾಗಿ ಆಂಗ್ಲ ಭಾಷೆಯ ಫಾಂಟ್ ಅನ್ನು ಜೈತುಲುನಾಡ್ ಸಂಘಟನೆಯು ಮರುವಿನ್ಯಾಸ ಗೊಳಿಸಿ ಸಿದ್ಧಪಡಿಸಿದಂತಃ ಫಾಂಟ್ ಮೂಲಕ ತುಲು ಅಕ್ಷರವನ್ನು ಬರೆಯಬಹುದು. ಆದರೆ ಅದನ್ನು ಬಳಸಲು ಜನಸಾಮಾನ್ಯರಿಗೆ ಅನಾನೂಕೂಲವಾಗುತ್ತಿತ್ತು. ಇದನ್ನರಿತ ಜೈತುಲುನಾಡ್ ಸಂಘಟನೆಯ ಉದಯೋನ್ಮುಖ ಯುವಕ ಜ್ಞಾನೇಶ್ ದೇರಳಕಟ್ಟೆ, ಎಲ್ಲರಿಗೂ ಸುಲಭವಾಗುವ ರೀತಿಯಲ್ಲಿ ಟೆಲಿಗ್ರಾಂ ಎನ್ನುವ ತಂತ್ರಾಂಶದಲ್ಲಿ ಟೆಲಿಬರವು ಅನ್ನು ಅಳವಡಿಸಿ ಸಿದ್ದಪಡಿಸಿದ ಈ ತಂತ್ರಾಂಶದ ವಿಶೇಷವೇನೆಂದರೆ, ಕನ್ನಡ ಅಕ್ಷರದಲ್ಲಿ ಬರೆದು ಕಳಿಸಿದರೆ ತುಳು ಅಕ್ಷರವಾ ಮಾರ್ಪಾಡಾಗಿ ಪಾರದರ್ಶಕ ಚಿತ್ರ(transparent png format image)ವಾಗಿ ನಿಮಗೆ ಸಿಗುತ್ತದೆ. ಈ ಚಿತ್ರವನ್ನು ಸುಲಭವಾಗಿ ಫೋಟೊ ಎಡಿಟಿಂಗ್ ಮಾಡಬಹುದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು