ಇತ್ತೀಚಿನ ಸುದ್ದಿ
ಶ್ರೀ ಕ್ಷೇತ್ರ ಧರ್ಮಸ್ಥಳ ಟ್ರಸ್ಟ್ ನಿಂದ ಶಿವಾಪೂರ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ
12/08/2024, 18:32
ಸಂತೋಷ್ ಬೆಳಗಾವಿ
info.reporterkarnataka@gmail.com
ಶ್ರೀ ಕ್ಷೇತ್ರ ಧರ್ಮಸ್ಥಳ ಬಿ.ಸಿ. ಟ್ರಸ್ಟ್ ಮೂಡಲಗಿ ತಾಲೂಕಿನ ಮೂಡಲಗಿ ರೂರಲ್ ವಲಯದ ಕಾರ್ಯಕ್ಷೇತ್ರದಲ್ಲಿ ಶ್ರದ್ಧಾ ಸ್ವಚ್ಛತಾ ಕಾರ್ಯಕ್ರಮದ ನಿಮಿತ್ತ ಶಿವಾಪೂರ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಸ್ವಚ್ಛತೆ ಮಾಡುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.
ಒಕ್ಕೂಟದ ಅಧ್ಯಕ್ಷರಾದ ಮಹಾದೇವಿ, ಕುಂಬಳ್ಳಿ ಸಂಘದ ಸದಸ್ಯರು, ತಾಲೂಕಿನ ಯೋಜನಾಧಿಕಾರಿಗಳಾದ ರಾಜು ನಾಯ್ಕ, ವಲಯದ ಮೇಲ್ವಿಚಾರಕರರಾದ ರೇಣುಕಾ ತಿಳುವಳ್ಳಿ, ಸ್ಥಳೀಯ ಸೇವಾ ಪ್ರತಿನಿಧಿ ಕಸ್ತೂರಿ ಸವದಿ ಸೇರಿದಂತೆ ಸಂಘದ ಸದಸ್ಯರು ಭಾಗವಹಿಸಿದ್ದರು.