4:00 AM Monday15 - September 2025
ಬ್ರೇಕಿಂಗ್ ನ್ಯೂಸ್
ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ

ಇತ್ತೀಚಿನ ಸುದ್ದಿ

ಶ್ರೀ ಮಂಗಳಾದೇವಿ ಸೇವಾ ಸಮಿತಿಯ ವತಿಯಿಂದ ಶ್ರೀ ಮಂಗಳಾಂಬೆಗೆ ರಜತ ಹಸ್ತ ಸಮರ್ಪಣೆ

03/10/2024, 22:23

ಮಂಗಳೂರು(reporterkarnataka.com):ನಗರದ ಶ್ರೀ ಮಂಗಳಾದೇವಿ ದೇವಸ್ಥಾನದ ಸೇವೆಯನ್ನೇ ಮೂಲ ಧ್ಯೆಯವನ್ನಾಗಿಸಿಕೊಂಡು ಸ್ಥಾಪನೆಯಾದಂತಹ ಶ್ರೀ ಮಂಗಳಾದೇವಿ ಸೇವಾ ಸಮಿತಿಯ ವತಿಯಿಂದ ನವರಾತ್ರಿಯ ಆರಂಭದ ದಿನವಾದ ಇಂದು ಕ್ಷೇತ್ರದ ತಂತ್ರಿಗಳಾದ ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಯವರ ಸಮ್ಮುಖದಲ್ಲಿ ರಜತ ಹಸ್ತಗಳನ್ನು ಸಮರ್ಪಿಸಲಾಯಿತು. ಶ್ರೀಮಂಗಳಾದೇವಿ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿರುವಂತಹ ಶ್ರೀಮಂಗಳಾದೇವಿ ಸೇವಾ ಸಮಿತಿಯು ಕ್ಷೇತ್ರದಲ್ಲಿ ನಡೆಯುವ ನವರಾತ್ರಿ ಮಹೋತ್ಸವ ಜಾತ್ರಾ ಮಹೋತ್ಸವ ಸೇರಿದಂತೆ ಎಲ್ಲಾ ಅನ್ನ-ಸಂತರ್ಪಣೆಯ ದಿವಸಗಳಂದು ಮಾತ್ರವಲ್ಲದೆ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ಆತ್ಮೀಯವಾಗಿ ತೊಡಗಿಸಿಕೊಂಡಿರುತ್ತದೆ, ಮಾತ್ರವಲ್ಲದೆ ಸಂದರ್ಭನುಸಾರವಾಗಿ ಶ್ರೀ ಕ್ಷೇತ್ರದ ಅನುಕೂಲಕ್ಕೆ ಅನುಗುಣವಾಗಿ ಸದಾಕಾಲ ತಮ್ಮಿಂದ ಆಗುವ ಸೇವೆಯಲ್ಲಿ ಪಾಲ್ಗೊಂಡಿರುತ್ತದೆ.
ಸಮಿತಿಯ ಅಧ್ಯಕ್ಷರಾದ ದಿಲ್ ರಾಜ್ ಆಳ್ವ ಮಾತನಾಡಿ ನಮ್ಮ ಸಮಿತಿಯು ಅನೇಕ ವರ್ಷಗಳಿಂದ ತಾಯಿಯ ಸೇವೆಯಲ್ಲಿ ಪಾಲ್ಗೊಂಡಿದೆ. ಈ ವರ್ಷ ವಿಷೇಷವಾಗಿ ರಜತ ಹಸ್ತ ಸಮರ್ಪಣೆ ಮಾತ್ರವಲ್ಲದೆ ವಿಜಯ ದಶಮಿಯಂದು ಸಮಿತಿಯ ವತಿಯಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ತಿಳಿಸಿದರು.
ಹಿರಿಯ ಸದಸ್ಯರಾದ ಎ. ಸೀತಾರಾಮ, ಬಿ. ಅಶೋಕ್ ಕುಮಾರ್, ಕೇಶವ , ತುಕಾರಾಮ್, ಪ್ರಧಾನ ಕಾರ್ಯದರ್ಶಿ ತಿಲಕ್ ರಾಜ್ ಕೋಶಾಧಿಕಾರಿ ವಿಶ್ವನಾಥ್, ದೇವಸ್ತಾನದ ಆಡಳಿತ ಮಂಡಳಿ ಸದಸ್ಯರು, ಅರ್ಚಕ ವೃಂದ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು