ಇತ್ತೀಚಿನ ಸುದ್ದಿ
ಶ್ರೀಹರಿಕೋಟ: ಭಾರತದ ಜಿಯೋ ಇಮೇಜಿಂಗ್ ಉಪಗ್ರಹ ಯಶಸ್ವಿ ಉಡಾವಣೆ
12/08/2021, 09:24
ಶ್ರೀಹರಿಕೋಟಾ(reporterkarnataka.com): ಇಸ್ರೋ ತನ್ನ ಅತ್ಯಾಧುನಿಕ ಜಿಯೋ ಇಮೇಜಿಂಗ್ ಉಪಗ್ರಹ ಜಿಎಸ್ ಎಲ್ ವಿ- ಎಫ್ 10/ಇಒಎಸ್ -03ಯನ್ನು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ಮುಂಜಾನೆ 5.43ಕ್ಕೆ ಯಶಸ್ವಿಯಾಗಿ ಉಡಾಯಿಸಿದೆ.
ಉಪಗ್ರಹವು 2.268 ಕೆಜಿ ತೂಕ ಹೊಂದಿದೆ. 10 ಸಂಕೇತನಾಮ ಉಪಗ್ರಹಗಳ ಹೊಸ ಸರಣಿಯ ಭಾಗ ಇದಾಗಿದೆ. ಭಾರತ ನಿರ್ಮಿತ ಪ್ರಮುಖ ಉಪಗ್ರಹದ ಈ ವರ್ಷದ ಮೊದಲ ಉಡಾವಣೆ ಆಗಿದೆ.
ಉಪಗ್ರಹ ಉಡಾವಣೆ ಈ ಮುನ್ನ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ನಡೆಯಿತು. ಉಪಗ್ರಹದ ಮೊದಲ ಮತ್ತು ಎರಡನೇ ಹಂತಗಳ ಕಾರ್ಯಕ್ಷಮತೆ ಸಾಮಾನ್ಯವಾಗಿದೆ. ಆದರೂ ಕ್ರಯೋಜೆನಿಕ್ ಮೇಲಿನ ಹಂತದ ದಹನವು ತಾಂತ್ರಿಕ ತೊಂದರೆಯಿಂದ ಉದ್ದೇಶಿತ ಗುರಿಯನ್ನು ಸಾಧಿಸಲು ವಿಫಲವಾಗಿದೆ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.