11:23 PM Sunday2 - February 2025
ಬ್ರೇಕಿಂಗ್ ನ್ಯೂಸ್
ನಂಜನಗೂಡು: ಸಾಲ ತೀರಿಸದ ಸ್ನೇಹಿತ; ಮನನೊಂದು ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಭಾರೀ ಗಾಳಿಗೆ ರಸ್ತೆಗೆ ಬಿದ್ದ ಬೃಹತ್ ಮರ; ಚಿಕ್ಕಮಗಳೂರು-ಶೃಂಗೇರಿ ರಸ್ತೆ ಸಂಚಾರ ಅಸ್ತವ್ಯಸ್ತ;… ಅನಗತ್ಯ ವೆಚ್ಚ, ಲೂಟಿಗೆ ಕಡಿವಾಣ ಹಾಕಿ ಅತ್ಯಧಿಕ ಗಾತ್ರದ ಬಜೆಟ್‌ ಮಂಡಿಸಿದ ಕೇಂದ್ರ… ಸಾಲಬಾಧೆ: ಮನನೊಂದ ಯುವಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮೈಕ್ರೋ ಫೈನಾನ್ಸ್ ಹಾವಳಿಯಿಂದ ನಲುಗಿದ ಜನರಿಗೆ ಮತ್ತೊಂದು ಶಾಕ್: ಸಾಲ ಕೊಡಿಸುವ ಆಮಿಷ;… ಚೀಟಿಯಲ್ಲಿ ಖುಲಾಯಿಸಿದ ಅದೃಷ್ಟ: ಬಿಜೆಪಿ- ಕಾಂಗ್ರೆಸ್ ಸಮಬಲವಿರುವ ಕಿತ್ತೂರು ಪಟ್ಟಣ ಪಂಚಾಯತಿ ‘ಕೈ’ವಶ ತರೀಕೆರೆ ಹೋಗೋ ಪ್ರವಾಸಿಗರೇ ಎಚ್ಚರ!: ಕಲ್ಲತ್ತಿಗರಿ-ಕೆಮ್ಮಣ್ಣುಗುಂಡಿ ರಸ್ತೆಯಲ್ಲಿ ಹೊಂಚು ಹಾಕಿ ಕೂತಿದ್ದಾನೆ ಹುಲಿರಾಯ! 88.32 ಕೋಟಿ ಮೊತ್ತದ ಬೃಹತ್ ಸೈಬರ್ ವಂಚನೆ ಜಾಲ ಪತ್ತೆ: 52 ಮಂದಿ… ಆರ್ಥಿಕ ಸಂಕಷ್ಟದಿಂದ ವೈಜಾಗ್ ಸ್ಟೀಲ್ ಕಾರ್ಖಾನೆ ಪಾರು: 11,440 ಕೋಟಿ ರೂ. ಪುನಶ್ಚೇತನ… ಕೇಂದ್ರ – ರಾಜ್ಯ ಸೇರಿ ಹೊಸ ಕೃಷಿ ಆರ್ಥಿಕ ನೀತಿ ತರಬೇಕು: ಮಾಜಿ…

ಇತ್ತೀಚಿನ ಸುದ್ದಿ

ಶ್ರೀ ಆದಿನಾಥ ತೀರ್ಥಂಕರರ ಬಾಳ್ತಿಲ ಬಸದಿಯಲ್ಲಿ ಮೃತ್ಯುಂಜಯ ಆರಾಧನೆ

30/09/2024, 21:03

ಬಂಟ್ವಾಳ(reporterkarnataka.com): ಕಲ್ಲಡ್ಕ ಸಮೀಪದ ಶ್ರೀ ಆದಿನಾಥ ತೀರ್ಥಂಕರ ಬಸದಿ ಬಾಳ್ತಿಲದಲ್ಲಿ ಶ್ರೀ ಜ್ಞಾನೇಶ್ವರ ಮುನಿಮಹಾರಾಜ್ ಅವರ ಶಿಷ್ಯೆ ಕ್ಷುಲ್ಲಿಕಾ‌ ವಿಶುದ್ಧ ಮತಿ ಮಾತಾಜಿಯವರು ಭವ್ಯ ಮಂಗಳ ವರ್ಷಾ ಯೋಗದ ನಿಮಿತ್ತ ಮೊಕ್ಕಾಂ ಹೂಡಿದ್ದು ಪ್ರತಿದಿನ ಶ್ರೀ ಆದಿನಾಥ ಸ್ವಾಮಿಗೆ ವಿಶೇಷ‌ ಅಲಂಕಾರ ಪೂಜೆ ಹಾಗೂ ವಿಶೇಷ ಸೇವೆ ನಡೆಯುತ್ತಿದೆ.

ಭಾನುವಾರ ಮೃತ್ಯುಂಜಯ ಆರಾಧನೆ ಮತ್ತು ನವಗ್ರಹ ಶಾಂತಿ ನಡೆಯಿತು.
ಉದಯ ಕುಮಾರ್ ಜೈನ್ ಕುಟುಂಬಸ್ಥರು ಪೂಜೆ ಸೇವೆ ನಡೆಸಿದರು. ಅಖಿಲ ವಿಜಯಕುಮಾರ್ ಬೆಳ್ತಂಗಡಿ ಮನೆಯವರು ಆಹಾರ ದಾನ ಸೇವೆ ನಡೆಸಿಕೊಟ್ಟರು.
ಪ್ರಮುಖರಾದ ಉದ್ಯಮಿ ಪದ್ಮಪ್ರಸಾದ್ ಜೈನ್ ಬುಡೋಳಿ, ಮಹಾವೀರ ಪ್ರಸಾದ್ ಜೈನ್ ಪೆರಾಜೆ, ಆದಿರಾಜ ಜೈನ್ ಕೇದಿಗೆ, ಅಮಿತ್ ಕುಮಾರ್ ಜೈನ್,ಅನಿಲ್ ಕುಮಾರ್ ಜೈನ್, ಪಾಪೆತ್ತಿಮಾರು,ಉದಯ ಕುಮಾರ್ ಮದ್ವ, ನ್ಯಾಯವಾದಿ ಶಿವ ಪ್ರಕಾಶ್ , ಬೃಜೇಶ್ ಜೈನ್ ಬಾಳ್ತಿಲ ಬೂಡು ಮೊದಲಾದವರು ಧಾರ್ಮಿಕ ಕಾರ್ಯಕ್ರಮದಲ್ಲಿ‌ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು