4:51 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಶಾಕಿಂಗ್ ನ್ಯೂಸ್ : ಮನುಷ್ಯನ ರಕ್ತದಲ್ಲಿ ಪ್ಲಾಸ್ಟಿಕ್‌ ಪತ್ತೆ!; ದೇಹದೊಳಗೆ ಅದು ಸೇರುವುದಾದರೂ ಹೇಗೆ?

29/03/2022, 10:44

ಹೊಸದಿಲ್ಲಿ(reporterkarnataka.com): ಮನುಷ್ಯನ ದೇಹದಲ್ಲಿ ಉತ್ಪತ್ತಿಯಾಗುವ ರಕ್ತದಲ್ಲಿ ಪ್ಲಾಸ್ಟಿಕ್ ಇದೆ ಅನ್ನೋ ಶಾಕಿಂಗ್‌ ಸುದ್ದಿ ಈಗ ಹೊರಬಿದ್ದಿದೆ. ಪ್ಲಾಸ್ಟಿಕ್ ನಿಧಾನಗತಿಯಲ್ಲಿ ಮನುಷ್ಯರ ರಕ್ತವನ್ನು ಸೇರುತ್ತದೆ ಎಂಬುದು ಸಂಶೋಧನೆಯೊಂದರಲ್ಲಿ ಬಹಿರಂಗವಾಗಿದೆ. ಸಂಶೋಧನೆಗೆ ಒಳಪಡಿಸಿದ ಶೇ.80 ರಷ್ಟು ಜನರ ರಕ್ತದಲ್ಲಿ ಪ್ಲಾಸ್ಟಿಕ್ ನ ಸಣ್ಣ ಕಣಗಳು ಪತ್ತೆಯಾಗಿವೆ.ಈ ಮೈಕ್ರೋ ಪ್ಲಾಸ್ಟಿಕ್‌, ನೀರು, ಉಸಿರು ಮತ್ತು ಆಹಾರದ ಮೂಲಕ ಮಾನವನ ದೇಹವನ್ನು ಪ್ರವೇಶಿಸುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಂಶೋಧನೆಗೆ ಒಳಪಟ್ಟ ಶೇ.77 ಜನರ ರಕ್ತಪ್ರವಾಹದಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಣಗಳು ಸಿಕ್ಕಿವೆ. ಡಚ್ ಸಂಶೋಧಕರು ನಡೆಸಿದ ಈ ಅಧ್ಯಯನವು ಪಾಲಿಥಿಲೀನ್ ಟೆರೆಫ್ತಾಲೇಟ್, ಮಾನವ ರಕ್ತದಲ್ಲಿ ಕಂಡುಬರುವ ಪ್ಲಾಸ್ಟಿಕ್‌ನ ಅತ್ಯಂತ ಪ್ರಚಲಿತ ರೂಪವಾಗಿದೆ ಎಂದು ಕಂಡುಹಿಡಿದಿದೆ.

PETಯನ್ನು ಸಾಮಾನ್ಯವಾಗಿ ನೀರು, ಆಹಾರ ಮತ್ತು ಬಟ್ಟೆಯ ಪ್ಯಾಕೇಜಿಂಗ್‌ಗೆ ಬಳಸಲಾಗುತ್ತದೆ. ಪ್ಲಾಸ್ಟಿಕ್‌, ಗಾಳಿ ಆಹಾರ ಮತ್ತು ಪಾನೀಯಗಳ ಮೂಲಕ ಮಾನವ ದೇಹವನ್ನು ಪ್ರವೇಶಿಸಬಹುದು ಅನ್ನೋದು ವಿಜ್ಞಾನಿಗಳ ಲೆಕ್ಕಾಚಾರ. ಇದು ತುಂಬಾ ಅಪಾಯಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದೇಹದಲ್ಲಿ ಈ ಪ್ಲಾಸ್ಟಿಕ್ ಕಣಗಳಿಂದ ಉರಿಯೂತ ಹೆಚ್ಚಾಗುವ ಸಾಧ್ಯತೆಯಿದೆ.

ಮನುಷ್ಯದ ರಕ್ತದಲ್ಲಿ ಸುಮಾರು ವಿಧದ ಪ್ಲಾಸ್ಟಿಕ್ ಮಾದರಿಗಳು ಕಂಡುಬಂದಿವೆ. ಇದರಲ್ಲಿ ಪಾಲಿಪ್ರೊಪಿಲೀನ್, ಪಾಲಿಸ್ಟೈರೀನ್, ಪಾಲಿಮಿಥೈಲ್ ಮೆಥಾಕ್ರಿಲೇಟ್, ಪಾಲಿಥೀನ್ ಮತ್ತು ಪಾಲಿಥಿಲೀನ್ ಟೆರೆಫ್ತಾಲೇಟ್ (ಪಿಇಟಿ) ಪರೀಕ್ಷೆಗಾಗಿ 22 ಜನರ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. 22 ಜನರಲ್ಲಿ 17 ಜನರ ರಕ್ತದಲ್ಲಿ ಪ್ಲಾಸ್ಟಿಕ್ ಕಣಗಳಿವೆ ಎಂದು ಸಂಶೋಧಕರು ಹೇಳಿದ್ದಾರೆ. ರಕ್ತದಲ್ಲಿ ವಿಜ್ಞಾನಿಗಳು ಕಂಡುಕೊಂಡ ಮೂರನೇ ವಿಧದ ಪ್ಲಾಸ್ಟಿಕ್ ಅಂದ್ರೆ ಪಾಲಿಥಿಲೀನ್. ಇದನ್ನು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು