2:56 PM Tuesday17 - March 2026
ಬ್ರೇಕಿಂಗ್ ನ್ಯೂಸ್
ಸ್ಪೀಕರ್‌ ಸಭಾತ್ಯಾಗ ಪ್ರಕರಣ: ಖಾದರ್ ಸಿಟ್ಟಿಗೆ 8 ಹಿರಿಯ ಐಎಎಸ್‌ ಅಧಿಕಾರಿಗಳಿಗೆ ಶೋಕಾಸ್… Mangaluru | ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್ ಗೆ 2025 ಕೇಂದ್ರ ಸಾಹಿತ್ಯ… ಉತ್ತರಿಸದ ಸಚಿವರು: ಇದೇ ಮೊದಲ ಬಾರಿಗೆ ಸ್ಪೀಕರ್ ಸಭಾತ್ಯಾಗ; ಮೂವರು ಅಧಿಕಾರಿಗಳಿಗೆ ತಲೆದಂಡ ರಾಜ್ಯ ಉಪ ಚುನಾವಣೆ: ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಏಪ್ರಿಲ್ 9ರಂದು ಮತದಾನ, ಮೇ… ಕಾರಿನ ಮೇಲೆ ಉರುಳಿದ ಕಟ್ಟಿಗೆ ತುಂಬಿದ ಲಾರಿ: ಮಗು ಸಹಿತ ದಂಪತಿ ಪವಾಡಸದೃಶ… ಕಲಬುರಗಿ; ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್… ವಿವಿಧ ಬೇಡಿಕೆ ಆಗ್ರಹಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಫ್ರೀಡಂ… ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್‌: ಮೌಲ್ಯ 10 ಪಟ್ಟು ಹೆಚ್ಚು,…

ಇತ್ತೀಚಿನ ಸುದ್ದಿ

ಡೋಂಟ್ ವರಿ, ಮಂಗಳೂರಿಗೆ ಬರಲಿದೆ ಎಲ್‌ಪಿಜಿ ಹೊತ್ತ ‘ಶಿವಾಲಿಕ್‌’ ಹಡಗು: 26 ಸಾವಿರ ಟನ್‌ ಅಡುಗೆ ಅನಿಲ ಕಡಲನಗರಿಗೆ

17/03/2026, 14:02

ಮಂಗಳೂರು(reporterkarnataka.com):
ಪಶ್ಚಿಮ ಏಷ್ಯಾದ ಯುದ್ಧ ಪೀಡಿತ ಪ್ರದೇಶದಲ್ಲಿರುವ ಹೊರ್ಮುಜ್‌ ಜಲಸಂಧಿಯ ಮೂಲಕ ಎಲ್‌ಪಿಜಿ ಹೊತ್ತ ಶಿವಾಲಿಕ್‌ ಹಡಗು ಸಾಗಿ ಬಂದಿದ್ದು,ಗುಜರಾತಿನ ಮುಂದ್ರಾ ಬಂದರನ್ನು ಸೋಮವಾರ ತಲುಪಿದೆ. ಆ ಹಡಗು ಭಾಗಶಃ ಎಲ್‌ಪಿಜಿಯನ್ನು ಮುಂದ್ರಾ ಬಂದರಿನಲ್ಲಿ ಇಳಿಸಿ, ಸುಮಾರು 26 ಸಾವಿರ ಟನ್‌ ಎಲ್‌ಪಿಜಿಯೊಂದಿಗೆ ಇಲ್ಲಿನ ನವಮಂಗಳೂರು ಬಂದರಿಗೆ ಬರಲಿದೆ.
‘ಶಿವಾಲಿಕ್ ಹಡಗು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಗೆ ಎಲ್‌ಪಿಜಿಯನ್ನು ಸಾಗಿಸುತ್ತಿದೆ. 46 ಸಾವಿರ ಟನ್‌ ಎಲ್‌ಪಿಜಿ ಹೊತ್ತ ಈ ಹಡಗು ಮುಂದ್ರ ಬಂದರಿನಲ್ಲಿ 20 ಸಾವಿರ ಟನ್‌ ಎಲ್‌ಪಿಜಿಯನ್ನು ಇಳಿಸಲಿದೆ. ಬಳಿಕ ನವಮಂಗಳೂರು ಬಂದರಿಗೆ ಪ್ರಯಾಣಿಸುವ ಹಡಗು 26 ಸಾವಿರ ಟನ್ ಎಲ್‌ಪಿಜಿಯನ್ನು ಇಲ್ಲಿ ಇಳಿಸಲಿದೆ’ ಎಂದು ಮೂಲಗಳು ತಿಳಿಸಿವೆ.
‘ಗುಜರಾತ್‌ನ ಮುಂದ್ರಾ ಬಂದರಿನಲ್ಲಿ 20 ಸಾವಿರ ಟನ್‌ ಎಲ್‌ಪಿಜಿಯನ್ನು ಖಾಲಿ ಮಾಡಲು ಕನಿಷ್ಠ ಒಂದು ದಿನವಾದರೂ ಬೇಕು. ಅಲ್ಲಿಂದ ಹಡಗು ನವಮಂಗಳೂರು ಬಂದರನ್ನು ತಲುಪಲು ಮೂರು- ನಾಲ್ಕು ದಿನಗಳಾದರೂ ಬೇಕು’ ಎಂದು ನವಮಂಗಳೂರು ಬಂದರು ಪ್ರಾಧಿಕಾರದ ಮೂಲಗಳು ರಿಪೋರ್ಟರ್ ಕರ್ನಾಟಕಕ್ಕೆ ತಿಳಿಸಿವೆ.

ಇತ್ತೀಚಿನ ಸುದ್ದಿ

ಜಾಹೀರಾತು