1:42 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಶಿಕ್ಷಕರಾಗುವ ಕಾತರದಲ್ಲಿದ್ದ ಸಿಆರ್‌ಪಿ , ಬಿಆರ್‌ಪಿಗಳಿಗೆ ನಿರಾಸೆ: ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ರದ್ದು; ಶಿಕ್ಷಕರ ಸಂಘ ಆಕ್ಷೇಪ

09/12/2021, 10:46

ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com 

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಡಿ .೬ ರಂದು ನಡೆಯಬೇಕಾಗಿದ್ದ ( ಸಿಆರ್‌ಪಿ ) ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ಹಾಗೂ ( ಬಿಆರ್‌ಪಿ ) ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ರದ್ದು ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಯ್ಯಗೌಡ ನೇತೃತ್ವದಲ್ಲಿ ಡಿಡಿಪಿಐ ಅವರಿಗೆ ಮನವಿ ಸಲ್ಲಿಸಲಾಯಿತು . 

ಈ ಸಂಬಂಧ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಅವರಿಗೆ ಮನವಿ ಸಲ್ಲಿಸಿದ ಸಂಘದ ಅಧ್ಯಕ್ಷ ಅಪ್ಪಯ್ಯಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ ಮತ್ತಿತರರು , ಇಲಾಖೆಯೇ ೩ ಮತ್ತು ೫ ವರ್ಷ ಮುಗಿಸಿದ ೩೯ ಮಂದಿ ಸಿಆರ್‌ಪಿ ಹಾಗೂ ಬಿಆರ್‌ಪಿಗಳು ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದರು ಎಂದು ತಿಳಿಸಿದರು .

ಇಲಾಖೆ ಸೂಚನೆಯಂತೆಯೇ ಕೋರಿಕೆ ವರ್ಗಾವಣೆ ಬಯಸಿ ಸ್ವಇಚ್ಚಾ ಅರ್ಜಿ ಸಲ್ಲಿಸಿದ್ದರೂ ಇದೀಗ ವರ್ಗಾವಣೆ ಸ್ಥಳ ಆಯ್ಕೆ ಪ್ರಕ್ರಿಯೆ ಶೇ .೭ ಮೀರುವಂತಿಲ್ಲ ಎಂಬ ನೆಪವೊಡ್ಡಿ ಕೌನ್ಸಿಲಿಂಗ್‌ ಅನ್ನು ಇಲಾಖೆ ರದ್ದು ಮಾಡಿದೆ ಎಂದು ದೂರಿದರು . 

ಕೋಲಾರ ಜಿಲ್ಲೆಯಲ್ಲಿ ಕೋರಿಕೆ ವರ್ಗಾವಣೆ ಮಿತಿ ಈಗಾಗಲೇ ಶೇಕಡ ೭ % ಹುದ್ದೆಗಳಿಗೆ ಲಾಕ್ ಆಗಿದೆ . ಸ್ಥಳ ಆಯ್ಕೆ ಪ್ರಕ್ರಿಯೆ ಶೇಕಡ ೭ % ಮೀರುವಂತಿಲ್ಲ ಎಂದು ಇಂದಿನ ಕೌನ್ಸಿಲಿಂಗ್ ಅನ್ನು ರದ್ದು ಮಾಡುವ ಮೂಲಕ ಸ್ಥಳ ಆಯ್ಕೆ ಆಸೆಯೊಂದಿಗೆ ಹಾಜರಾಗಿದ್ದ ಸಿಆರ್‌ಪಿ , ಬಿಆರ್‌ಪಿಗಳು ತೊಂದರೆಗೊಳಗಾಗಿದ್ದಾರೆ ಎಂದು ತಿಳಿಸಿದರು . 

ನಮಗೆ ಇಲಾಖೆ ನಿಯಮದಂತೆ ಸಿಆರ್‌ಪಿ.ಬಿಆರ್‌ಪಿ ಅವಧಿ ಮುಗಿದಿರುವುದರಿಂದ ನಮಗಾಗಿರುವ ಅನ್ಯಾಯವನ್ನು ಪರಿಗಣಿಸಿ ಅತಿ ಶೀಘ್ರದಲ್ಲೇ ನಮಗೆ ಕೌನ್ಸಿಲಿಂಗ್ ನೀಡಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಡಿಡಿಪಿಐ ಅವರಿಗೆ ಮನವಿ ಮಾಡಿದರು .

ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ರಡ್ಡಪ್ಪ , ಮಾಲೂರು ತಾಲ್ಲೂಕು ಅಧ್ಯಕ್ಷ ನರಸಿಂಹ , ಕಾರ್ಯದರ್ಶಿ ಮುನಿರಾಜು , ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ವೆಂಕಟಗಿರಿಯಪ್ಪ , ಕೆಜಿಎಫ್ ತಾಲ್ಲೂಕು ಅಧ್ಯಕ್ಷವಿನೋದ್ ಬಾಬು , ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ಬೈರಾರೆಡ್ಡಿ , ಕಾರ್ಯದರ್ಶಿ ಶಿವಣ್ಣ ಮುಂತಾದ ಪದಾಧಿಕಾರಿಗಳು ಕೌನ್ಸಿಲಿಂಗ್ ಬಯಸಿ ಬಂದ ಸಿಆರ್‌ಪಿ ಮತ್ತು ಬಿಆರ್‌ಪಿಗಳೊಂದಿಗೆ ಹಾಜರಿದ್ದು ಮನವಿ ಸಲ್ಲಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು