ಇತ್ತೀಚಿನ ಸುದ್ದಿ
ಶಾರದಾ ಕಾಲೇಜಿನಲ್ಲಿ ಭಾಷಾ ಸಂಗಮದ ಉದ್ಘಾಟನಾ ಸಮಾರಂಭ
28/11/2021, 08:55
ಮಂಗಳೂರು (reporterkarnatakanews):ಭಾಷಾ ಸಂಗಮದ ಉದ್ಘಾಟನಾ ಸಮಾರಂಭವು ಶುಕ್ರವಾರ ಶಾರದಾ ಕಾಲೇಜು ತಲಪಾಡಿಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಡಿ.ಎಂ. ಕಾಲೇಜಿನ ಡಾ.ಶಾಲಿನಿ ಅವರು ಮಾತನಾಡಿ ಎಲ್ಲ ಭಾಷೆಗಳಿಗೂ ಪ್ರಾಮುಖ್ಯತೆ ಅಗತ್ಯ. ಎಲ್ಲರಲ್ಲೂ ಭಾಷಾಭಿಮಾನ ಮೂಡಬೇಕು. ಎಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾರದಾ ಕಾಲೇಜಿನ ಪ್ರಾಂಶುಪಾಲೆ ಡಾ.ಮೀನಾ.ಜೆ.ಪಣಿಕ್ಕರ್ ವಹಿಸಿದ್ದರು.
ಅವರು ಮಾತನಾಡಿ ಭಾಷೆಯು ಎಲ್ಲಾ ಸಂದರ್ಭಗಳಲ್ಲಿಯೂ ಅದರ ಗುಣಮಟ್ಟವನ್ನು ವೃದ್ಧಿಸುತ್ತದೆ. ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚರಣ್ ರಾಜ್, ಭವ್ಯ ಲತ. ಟಿ. ಹಾಗೂ ಅಮಿತ ಆಳ್ವ ಮತ್ತು ವಿದ್ಯಾರ್ಥಿ ಪ್ರತಿ ನಿಧಿಗಳಾದ ಸಾಗರ್ ನಾಯಕ್ ಮತ್ತು ಕಾವ್ಯ ಸಾಮಾನಿ ಉಪಸ್ಥಿತರಿದ್ದರು.
ಎಲ್.ಕಾವ್ಯ ನಿರೂಪಿಸಿ, ದಿವಿತ್ ದೇವಾಡಿಗ ಸ್ವಾಗತಿಸಿ,ಕ್ರಿಸ್ ಕೀರ್ತನ್ ವಂದಿಸಿದರು