ಇತ್ತೀಚಿನ ಸುದ್ದಿ
ಶನಿವಾರಸಂತೆ ಗೋಪಾಲಪುರ ಸಂತ ಅಂತೋಣಿ ಚರ್ಚ್ ನ ಶಿಲುಬೆ ಬೆಟ್ಟದಲ್ಲಿ ಗುಡ್ ಫ್ರೈಡೇ ಆಚರಣೆ
29/03/2024, 21:29
ಮಡಿಕೇರಿ(reporterkarnataka.com): ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿ ಸೇರಿದ ಗೋಪಾಲಪುರ ಚರ್ಚ್ ನಲ್ಲಿ ಗುಡ್ ಫ್ರೈಡೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಸಂತ ಅಂತೋಣಿ ಚರ್ಚಿನ ಫಾದರ್ ಜಾಕಪ್ ಕೊಳನೂರು ಅವರು ಶಿಲುಬೆ ಬೆಟ್ಟದಲ್ಲಿ ಪ್ರಾರ್ಥನೆ ನಡೆಸಿದರು.
14 ಶಿಲುಬೆಯ ಆರಾಧನೆ ಮತ್ತು ಪ್ರಾರ್ಥನೆಯನ್ನು ಸಿಲುಬೆ ಬೆಟ್ಟದಲ್ಲಿ ಮುಗಿಸಿ ಗೋಪಾಲಪುರ ಚರ್ಚಿನಲ್ಲಿ ಪ್ರಾರ್ಥನೆಯ ವಿಧಿ ವಿಧಾನಗಳನ್ನು ಮುಂದುವರಿಸಿ,
ದೇವರು ನಮ್ಮ ಪಾಪಗಳಿಗಾಗಿ ಶಿಲುಬೆಯಲ್ಲಿ ಮರಣ ಹೊಂದಿದರು ಹಾಗೂ ಮೂರನೇ ದಿನ ಪುನರ್ನರಾಗಿದ್ದಾರೆ ಎಂದರು.