ಇತ್ತೀಚಿನ ಸುದ್ದಿ
ಬೆಳ್ತಂಗಡಿ ಮೋಸ್ಟ್ ಹೋಲಿ ರೆಡೀಮರ್ ಚರ್ಚ್ ನಲ್ಲಿ ಹಿರಿಯ ನಾಗರಿಕರ ದಿನಾಚರಣೆ
09/11/2025, 11:47
ಬೆಳ್ತಂಗಡಿ(reporterkarnataka.com): ಹಿರಿಯ ವಯಸ್ಸು ಶಾಪವಲ್ಲ. ಅದೊಂದು ವರ. ಹಿರಿಯರು ನಮ್ಮ ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಗುರುತಿಸುವುದು, ಅವರ ಯೋಗ ಕ್ಷೇಮಕ್ಕೆ ಆದ್ಯತೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನಿವೃತ್ತ ಶಿಕ್ಷಕ ಹಾಗೂ ಆಳ್ವಾಸ್ ಎಜುಕೇಶನಲ್ ಟ್ರಸ್ಟ್ ನ ಮಾಜಿ ಆಡಳಿತಾಧಿಕಾರಿ ಎಲ್.
ಜೆ. ಫೆರ್ನಾಂಡಿಸ್ ವೇಣೂರು ಅವರು ಹೇಳಿದರು.

ಅವರು ಬೆಳ್ತಂಗಡಿಯ ಮೋಸ್ಟ್ ಹೋಲಿ ರೆಡೀಮರ್ ಚರ್ಚ್ ನ ಸೆಕ್ಯುಲರ್ ಫ್ರಾನ್ಸಿಸ್ಕನ್ ಸಂಸ್ಥೆಯು ಆಯೋಜಿಸಿದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಚರ್ಚ್ ನ ಧರ್ಮಗುರು ವಂದನೀಯ ಫಾ. ವಾಲ್ಟರ್ ಡಿಮೆಲ್ಲೊ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಎಲಿಜ್ ಸಿಕ್ವೇರಾ, ವಂದನೀಯ ಫಾ. ಕ್ಲಿಫರ್ಡ್ ಪಿಂಟೊ, ಸಂಘದ ವಲಯ ಅಧ್ಯಕ್ಷ ಸಿಪ್ರಿಯನ್ ಫೆರ್ನಾಂಡಿಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕಿ ಎಲಿಜಾ ಫೆರ್ನಾಂಡಿಸ್ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಫ್ರಾನ್ಸಿಸ್ ಮಿರಾಂಡಾ ಸ್ವಾಗತಿಸಿದರು. ಕಾರ್ಯದರ್ಶಿ ಕಾಲಿಸ್ತ್ ಡಿ ಸೋಜಾ ವಂದಿಸಿದರು. ಬೆನೆಡಿಕ್ಟ್ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು. ಭಾಗವಹಿಸಿದ್ದ ಎಲ್ಲಾ ಹಿರಿಯ ನಾಗರಿಕರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.












